ಬ್ರೇಕ್ ಫೇಲ್ : ಖಾಸಗಿ ಟಿಟಿ ವಾಹನ ಪಲ್ಟಿ

ಹೊಸಪೇಟೆ : ಹಂಪಿ ಪ್ರವಾಸಕ್ಕೆ ಬಂದಿದ್ದ ಖಾಸಗಿ ವಾಹನದ ಬ್ರೇಕ್ ಫೇಲ್ ಆಗಿ ಪಲ್ಟಿ ಹೊಡೆದಿದ್ದು, ವಾಹನದಲ್ಲಿದ್ದವರಲ್ಲಿ ಇಬ್ಬರಿಗೆ ಸಣ್ಣ- ಪುಟ್ಟ  ಗಾಯಗಳಾದ ಘಟನೆ ಇಂದು ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ಹಂಪೆಯಲ್ಲಿ ನಡೆದಿದೆ.

ರಾಯಚೂರಿನಿಂದ ಹಂಪೆ ಪ್ರವಾಸಕ್ಕೆಂದು ಬಂದಿದ್ದ ಪ್ರವಾಸಿಗರು, ಹಂಪಿಯ ಗ್ರಾಮ ಪಂಚಾಯಿತಿ  ಎದುರು ಇರೋ ಪಾರ್ಕಿಂಗ್ ಪ್ರದೇಶದಿಂದ ಹೇಮಕೂಟದ ಕಡೆ ಹೊರಟಾಗ ಈ ಘಟನೆ ನಡೆದಿದೆ ಎನ್ನಲಾಗಿದೆ. ಸದ್ಯ ಖಾಸಗಿ ಟಿಟಿಯಲ್ಲಿದ್ದ ಪ್ರಯಾಣಿಕರೆಲ್ಲರೂ ಸೇಫ್ ಆಗಿದ್ದು, ಹಂಪಿ ಪ್ರವಾಸಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Facebook
Twitter
LinkedIn
WhatsApp
Email
Print
Telegram

Leave a Comment

Your email address will not be published. Required fields are marked *

Translate »
Scroll to Top