Ballari

ಮೈಲಾರ ಕಾರ್ಣಿಕೋತ್ಸವ ಪೂರ್ವಭಾವಿ ಸಿದ್ಧತಾ ಸಭೆ

ಹೊಸಪೇಟೆ(ವಿಜಯನಗರ ಜಿಲ್ಲೆ),ಜ.21 : ಹೂವಿನಹಡಗಲಿ ತಾಲೂಕಿನ ಮೈಲಾರ ಕ್ಷೇತ್ರದ ಶ್ರೀ ಮೈಲಾರಲಿಂಗೇಶ್ವರಸ್ವಾಮಿ ದೇವಸ್ಥಾನದ ವಾರ್ಷಿಕ ಕಾರ್ಣಿಕೋತ್ಸವ ಜಾತ್ರಾ ಮಹೋತ್ಸವವು ಫೆ.8ರಿಂದ ಫೆ.19ರವರೆಗೆ ನಡೆಯಲಿದೆ.11 ದಿನಗಳ ಕಾಲ ನಡೆಯಲಿರುವ ಈ ಕಾರ್ಣಿಕೋತ್ಸವ ಜಾತ್ರಾ ಮಹೋತ್ಸವದಲ್ಲಿ ಕೋವಿಡ್ ಹಿನ್ನೆಲೆಯಲ್ಲಿ ಕಳೆದ ಬಾರಿಯಂತೆ ಈ ಬಾರಿಯೂ ಸಾರ್ವಜನಿಕರು,ಭಕ್ತಾದಿಗಳ ನಿರ್ಬಂಧ ವಿಧಿಸಲಾಗಿದೆ. ವಿಜಯನಗರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ. ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್ ಅವರು ಅನಾರೋಗ್ಯದ ಹಿನ್ನೆಲೆ ವರ್ಚುವಲ್ …

ಮೈಲಾರ ಕಾರ್ಣಿಕೋತ್ಸವ ಪೂರ್ವಭಾವಿ ಸಿದ್ಧತಾ ಸಭೆ Read More »

ಮರಣ ಶಾಸನ ಆದೇಶವನ್ನು ಹಿಂಪಡೆದು, ಆನ್ ಲೈನ್ ಅರ್ಜಿಯನ್ನು ರದ್ದು ಪಡಿಸಿ

ಹೊಸಪೇಟೆ,ಜನವರಿ,18 : ಸರ್ಕಾರವು ಅತಿಥಿ ಉಪನ್ಯಾಸಕರನ್ನು ನವ ಗುಲಾಮರಾನ್ನಾಗಿ ಮಾಡಿ ಮಕರ ಸಂಕ್ರಾಂತಿಗೆ ಸಿಹಿ ಸುದ್ದಿಯನ್ನು ನೀಡಲಾಗುತ್ತದೆ ಎಂದು ಉಪನ್ಯಾಸಕರಿಗೆ ಮರಣ ಶಾಸನ ಆದೇಶವನ್ನು ಹೊರಡಿಸಿದೆ ಎಂದು ವಿಜಯನಗರ ಜಿಲ್ಲೆಯ ಅತಿಥಿ ಉಪನ್ಯಾಸಕರ ಗೌರವ ಅಧ್ಯಕ್ಷ ಎರಿಸ್ವಾಮಿ ಅವರು ಸರಕಾರದ ವಿರುದ್ಧ ಆಕ್ರೋಶವನ್ನು ವ್ಯಕ್ತ ಪಡಿಸಿದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇಂದು ಆಯೋಜಿಸಿದ ಅತಿಥಿ ಉಪನ್ಯಾಸಕರ ಮರಣ ಶಾಸನದ ಆದೇಶವನ್ನು ಕುರಿತು ಪತ್ರಿಕಾಗೋಷ್ಠಿಯಲ್ಲಿ ಅವರು ಅಭಿಪ್ರಾಯವನ್ನು ಹಂಚಿಕೊಂಡರು. ಉನ್ನತ ಶಿಕ್ಷಣ ಸಚಿವರು ಜನವರಿ 14 ನೇ …

ಮರಣ ಶಾಸನ ಆದೇಶವನ್ನು ಹಿಂಪಡೆದು, ಆನ್ ಲೈನ್ ಅರ್ಜಿಯನ್ನು ರದ್ದು ಪಡಿಸಿ Read More »

ಪಟ್ಟಣದಲ್ಲಿ ಊಟಕ್ಕೆ ಪರದಾಡುವ ಹಳ್ಳಿಯ ಜನರು

ಮರಿಯಮ್ಮನಹಳ್ಳಿ : ರಾಜ್ಯದಾದ್ಯಂತ ಸರಕಾರದ ಆದೇಶದಂತೆ ಜಾರಿಯಾದ ವೀಕೆಂಡ್ ಕರ್ಪ್ಯೂ ಹಿನ್ನೆಲೆಯಲ್ಲಿ  ಪಟ್ಟಣದಲ್ಲಿ ಪಟ್ಟಣ ಪಂಚಾಯಿತಿ ಬಿಗಿಕ್ರಮ ಜರುಗಿಸಿದ್ದು ಹೋಟೆಲ್ ಪಾರ್ಸೆಲ್ ಗೂ ಅವಕಾಶ ನೀಡದೆ, ಕಿರಾಣಿ ಮತ್ತು ತರಕಾರಿ, ಮಾಂಸ, ಮೊಟ್ಟೆ ಅಂಗಡಿಗಳನ್ನೂ ಸಂಪೂರ್ಣ ಬಂದ್ ಮಾಡಲಾದ ದೃಶ್ಯ ಶನಿವಾರ ಮತ್ತು ಭಾನುವಾರ ಪಟ್ಟಣದಲ್ಲಿ ಕಂಡುಬಂದಿತು.  ಪಟ್ಟಣ ಕೇಂದ್ರಬಿಂದು ವಾಗಿದ್ದು ಕೈಗಾರಿಕೆ ಕಾರ್ಮಿಕರು, ವಾಹನ ಚಾಲಕರು ಹೆಚ್ಚಾಗಿದ್ದಾರೆ. ಹೋಟೆಲ್‌ ಗಳಲ್ಲಿ ಪಾರ್ಸೆಲ್ ಗೂ ಅವಕಾಶ ನೀಡದಿದ್ದರಿಂದ ಊಟಕ್ಕೆ ಪರದಾಡುವಂತಾಗಿತ್ತು. ತರಕಾರಿ ಅಂಗಡಿಗಳಿಗೆ ಓಣಿಗಳಲ್ಲಿ ಮಾರುವಂತೆ ತಿಳಿಸಿದ್ದರಿಂದ …

ಪಟ್ಟಣದಲ್ಲಿ ಊಟಕ್ಕೆ ಪರದಾಡುವ ಹಳ್ಳಿಯ ಜನರು Read More »

‘ಹಲೋ ಡಾಕ್ಟರ್’ ಉಚಿತ ಕೋವಿಡ್ ಟೆಲಿ ಕ್ಲಿನಿಕ್

ಬಳ್ಳಾರಿ,ಜನವರಿ,13 : ದೇಶವ್ಯಾಪಿ ಒಮೈಕ್ರಾನ್ ಏರಿಕೆಯ ತೀವ್ರತೆ ಹೆಚ್ಚುತ್ತಿರುವ ಹಿನ್ನೆಲೆ ಎಐಡಿಎಸ್‌ಓ ಕರ್ನಾಟಕ ರಾಜ್ಯ ಸಮಿತಿ ವತಿಯಿಂದ ಸೋಂಕಿತರಿಗೆ ಚಿಕಿತ್ಸೆ ನೀಡಲು ಆನ್‌ಲೈನ್ ಮೂಲಕ ‘ಹಲೋ ಡಾಕ್ಟರ್ ಉಚಿತ ಕೋವಿಡ್ ಟೆಲಿ ಕ್ಲಿನಿಕ್‌ಅನ್ನು ನಾಳೆ(ಶುಕ್ರವಾರ)ದಿಂದ ಆರಂಭಿಸಲಾಗುತ್ತಿದೆ. ಕೋವಿಡ್ 2ನೇ ಅಲೆಯ ಸಂದರ್ಭದಲ್ಲೂ ನಮ್ಮ ಸಂಘಟನೆಯು ನಡೆಸಿದ ಉಚಿತ ಕೋವಿಡ್ ಟೆಲಿ ಕ್ಲಿನಿಕ್ ಮೂಲಕ ನೂರಾರು ಸೋಂಕಿತರು ಚಿಕಿತ್ಸೆ ಮತ್ತು ಸಲಹೆ ಪಡೆದು ಗುಣಮುಖರಾದರು. ಈ ಬಾರಿಯೂ ಮನೆಯಲ್ಲಿ ಕ್ವಾರಂಟೈನ್ ಆದ ಕೋವಿಡ್ ರೋಗಿಗಳಿಗೆ ಮತ್ತು ಕೋವಿಡ್ ಪ್ರಾಥಮಿಕ …

‘ಹಲೋ ಡಾಕ್ಟರ್’ ಉಚಿತ ಕೋವಿಡ್ ಟೆಲಿ ಕ್ಲಿನಿಕ್ Read More »

ಶಿಕ್ಷಣ ವಿರೋಧಿ ಸರಕಾರದ ಕ್ರಮ ಖಂಡನೀಯ : ಕೆ.ಕೊಟ್ರೇಶ್ ವಾಗ್ದಾಳಿ

ಹೊಸಪೇಟೆ,ಜ,12 : ಸರ್ಕಾರವು ಬಡ ಮಧ್ಯಮ ವರ್ಗದ ಅತಿಥಿ ಉಪನ್ಯಾಸಕರಿಗೆ ಅನ್ಯಾಯ ಶೋಷಣೆಯನ್ನು ಮಾಡುತ್ತಿದೆ.ಪ್ರತಿಭಟನೆ 33 ದಿನ ಕಳೆದರು ಸಚಿವರು ಹೋರಾಟಕ್ಕೆ ಸ್ಪಂದಿಸತ್ತಿಲ್ಲ ಎಂದು ವಿಜಯನಗರ ಜಿಲ್ಲೆಯ ಜೆ.ಡಿ.ಎಸ್ ಪಕ್ಷದ ಜಿಲ್ಲಾಧ್ಯಕ್ಷ ಕೆ.ಕೊಟ್ರೇಶ್ ಅವರು ಸರಕಾರದ್ದು ವಿರುದ್ಧ ವಾಗ್ದಾಳಿ ನಡಿಸಿದರು. ನಗರದ ಶ್ರೀ ಶಂಕರ್ ಆನಂದ್ ಸಿಂಗ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 33 ನೇ ದಿನದ ಅತಿಥಿ ಉಪನ್ಯಾಸಕರ ಹೋರಾಟವನ್ನು ಬೆಂಬಲಿಸಿ ಅವರು ಮಾತನಾಡಿ,ಶಿಕ್ಷಣ ಆರೋಗ್ಯ, ಕೃಷಿ ದೇಶದ ಪ್ರಗತಿಗೆ ಮುಖ್ಯವಾಗಿದೆ ಇವುಗಳನ್ನೆ ಸರಕಾರ ನಿರ್ಲಕ್ಷಿಸಿದೆ …

ಶಿಕ್ಷಣ ವಿರೋಧಿ ಸರಕಾರದ ಕ್ರಮ ಖಂಡನೀಯ : ಕೆ.ಕೊಟ್ರೇಶ್ ವಾಗ್ದಾಳಿ Read More »

ಚಿನ್ನ, ಬೆಳ್ಳಿ ನಾಣ್ಯಗಳಿಂದ ರೆಡ್ಡಿಯವರಿಗೆ ಅಭಿಮಾನಿಗಳಿಂದ ತುಲಾಭಾರ

ಬಳ್ಳಾರಿ,ಜ,11 : ಮಾಜಿ ಸಚಿವ ಹಾಗೂ ಬಳ್ಳಾರಿಯ ಅಭಿವೃದ್ಧಿ ಚಿಂತಕ ಜಿ.ಜನಾರ್ಧನರೆಡ್ಡಿಯವರ ೫೫ನೇ ಹುಟ್ಟುಹಬ್ಬದಾಚರಣೆ ಇಂದು. ಈ ನಿಟ್ಟಿನಲ್ಲಿ ದುರುಗಮ್ಮ ದೇವಸ್ಥಾನಕ್ಕೆ ಭೇಟಿ ನೀಡಿ ಅಧಿ ದೇವತೆಯ ದರ್ಶನ ಪಡೆದ ನಂತರ ಅಭಿಮಾನಿಗಳು ಚಿನ್ನ, ಬೆಳ್ಳಿ ನಾಣ್ಯಗಳಿಂದ ತುಲಾಭಾರ ನಡೆಸಿದರು. ಜನಾರ್ಧನರೆಡ್ಡಿಯವರು ದುರ್ಗಮ್ಮ ದೇವಾಲಯಕ್ಕೆ ಆಗಮಿಸಿ, ದುರ್ಗಾ ಮಾತೆಗೆ ವಿವಿಧ ಪೂಜಾ ಪುನಸ್ಕಾರಗಳನ್ನು ನೆರವೇರಿಸಿದರು. ಇದೇ ವೇಳೆ ಅಭಿಮಾನಿಗಳು ಕೂಡ ದೇವಸ್ಥಾನಕ್ಕೆ ಆಗಮಿಸಿ ವಿವಿಧ ಪೂಜೆಗಳನ್ನು ನೆರವೇರಿಸಿದರಲ್ಲದೆ, ಜನಾರ್ಧನರೆಡ್ಡಿಯವರು ಮತ್ತೆ ರಾಜಕೀಯಕ್ಕೆ ಎಂಟ್ರಿಕೊಟ್ಟು ಬಳ್ಳಾರಿ ನಗರವನ್ನು ಇನ್ನಷ್ಟು …

ಚಿನ್ನ, ಬೆಳ್ಳಿ ನಾಣ್ಯಗಳಿಂದ ರೆಡ್ಡಿಯವರಿಗೆ ಅಭಿಮಾನಿಗಳಿಂದ ತುಲಾಭಾರ Read More »

9ನೇ ಬಳ್ಳಾರಿ ಜಿಲ್ಲಾ ಮಟ್ಟದ ವಿದ್ಯಾರ್ಥಿ ಸಮ್ಮೇಳನ

ಬಳ್ಳಾರಿ,ಜ,11 : ಇಂದು AIDSO ಬಳ್ಳಾರಿ ಜಿಲ್ಲಾ ಸಮಿತಿಯಿಂದ 9ನೇ ಬಳ್ಳಾರಿ ಜಿಲ್ಲಾ ಮಟ್ಟದ ವಿದ್ಯಾರ್ಥಿ ಸಮ್ಮೇಳನ ನಗರದ ಗಾಂಧಿ ಭವನದಲ್ಲಿ ಜರಿಗಿತು. ವಿದ್ಯಾರ್ಥಿ ಸಮ್ಮೇಳನವನ್ನು AIDSO ಅಖಿಲ ಭಾರತ ಉಪಾಧ್ಯಕ್ಷರಾದ ಡಾ.ಎನ್. ಪ್ರಮೋದ್ ಅವರು ಉದ್ಘಾಟಿಸಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮತ್ತು ವಿದ್ಯಾರ್ಥಿಗಳ ಹೋರಟಗಳಲ್ಲಿ ಹುತಾತ್ಮರಾದ ಎಲ್ಲಾ ಹುತಾತ್ಮರಿಗೆ ಕ್ರಾಂತಿಕಾರಿ ವಂದನೆಗಳನ್ನು ಸಲ್ಲಿಸಿದರು. ನಂತರ ಸಮ್ಮೇಳನದ ಪ್ರತಿನಿಧಿಗಳನ್ನು ಉದ್ದೇಶಿಸಿ ಡಾ. ಪ್ರಮೋದ್ ರವರು ಮಾತನಾಡುತ್ತಾ.., “ಸಮ್ಮೇಳನದಲ್ಲಿ ವಿದ್ಯಾರ್ಥಿ ಚಳುವಳಿಯನ್ನು ಪ್ರಬಲಗೊಳಿಸಲು ಒಂದು ಹೊಸ ಉತ್ಸಾಹ, ನಾಯಕತ್ವವನ್ನು ನೀಡಲಿ. …

9ನೇ ಬಳ್ಳಾರಿ ಜಿಲ್ಲಾ ಮಟ್ಟದ ವಿದ್ಯಾರ್ಥಿ ಸಮ್ಮೇಳನ Read More »

ಕನಕಪುರದ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ

ಕನಕಪುರ,ಜ,11 : ಮೊನ್ನೆ ನನಗೆ ಜ್ವರ ಇದ್ದದ್ದರಿಂದ ಪಾದಯಾತ್ರೆಯ ನಡುವೆಯೇ ವಿಶ್ರಾಂತಿಗೆ ಹೋಗಬೇಕಾಯ್ತು, ನಿನ್ನೆ ಕೂಡ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ. ವೈದ್ಯರ ಸೂಚನೆ ಮೇರೆಗೆ ಅಗತ್ಯ ಚಿಕಿತ್ಸೆ ಪಡೆದು ಇಂದು ಮರಳಿದ್ದೇನೆ. ಕಳೆದೆರಡು ದಿನಗಳ ಕಾಲ ಪಾದಯಾತ್ರೆ ಅತ್ಯಂತ ಯಶಸ್ವಿಯಾಗಿ ನಡೆದಿದೆ. ಇದಕ್ಕಾಗಿ ಡಿ.ಕೆ ಶಿವಕುಮಾರ್ ಅವರಿಗೂ, ಪಕ್ಷದ ಕಾರ್ಯಕರ್ತರಿಗೂ ಹಾಗೂ ಪಕ್ಷದ ಎಲ್ಲಾ ನಾಯಕರಿಗೂ, ಪಾದಯಾತ್ರೆಯಲ್ಲಿ ಭಾಗವಹಿಸಿದ ಪ್ರತಿಯೊಬ್ಬರಿಗೂ ಧನ್ಯವಾದ ಅರ್ಪಿಸುತ್ತೇನೆ. ಇಂದು ಮೈಸೂರು ಜಿಲ್ಲೆ ಹಾಗೂ ಇನ್ನಿತರ ಹನ್ನೊಂದು ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರು ಪಾದಯಾತ್ರೆಗೆ …

ಕನಕಪುರದ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ Read More »

ಬೂಸ್ಟರ್ ಡೋಸ್ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಚಾಲನೆ

ಬಳ್ಳಾರಿ,ಜ,10: ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಆರೋಗ್ಯ ಕಾರ್ಯಕರ್ತರು ಹಾಗೂ ಮಂಚೂಣಿ ಕಾರ್ಯರ್ತರಿಗೆ ಹಾಗೂ ಸಹ ಅಸ್ವಸ್ಥತೆ ಹೊಂದಿರುವ 60 ವರ್ಷ ಮೇಲ್ಪಟ್ಟವರಿಗೆ ಕೋವಿಡ್-19 ಮುನ್ನಚ್ಚರಿಕೆ ಡೋಸ್(ಬೂಸ್ಟರ್ ಡೋಸ್) ನೀಡುವ ಕಾರ್ಯಕ್ರಮ ಸೋಮವಾರದಿಂದ ಆರಂಭವಾಗಿದೆ. ಬಳ್ಳಾರಿಯ ಜಿಲ್ಲಾಸ್ಪತ್ರೆ ಸೇರಿದಂತೆ,ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು,ತಾಲೂಕು ಆರೋಗ್ಯ ಕೇಂದ್ರಗಳಲ್ಲಿ ಹಾಗೂ ವಿಜಯನಗರ ಜಿಲ್ಲೆಯ ತಾಲೂಕು ಆರೋಗ್ಯ ಕೇಂದ್ರಗಳು,ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸೇರಿದಂತೆ ವಿವಿಧ ಆರೋಗ್ಯ ಕೇಂದ್ರಗಳಲ್ಲಿ ಬೂಸ್ಟರ್ ಡೋಸ್ ನೀಡುವ ಕಾರ್ಯ ಆರಂಭವಾಗಿದೆ. ನಗರದ ಜಿಲ್ಲಾಸ್ಪತ್ರೆಯ ಆವರಣದಲ್ಲಿ ಸೋಮವಾರ …

ಬೂಸ್ಟರ್ ಡೋಸ್ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಚಾಲನೆ Read More »

ರೈತರು, ಕಾರ್ಮಿಕರು ದೇಶದ ಉಸಿರು

ಮರಿಯಮ್ಮನಹಳ್ಳಿ,,ಜ,10 : :  ನಮ್ಮ ದೇಶದಲ್ಲಿ ರೈತರು ಮತ್ತು ಕಾರ್ಮಿಕರು ದೇಶದ ಉಸಿರು ಎಂದು ಬಿಂಬಿಸುವ ಸರ್ಕಾರಗಳು ಎಲ್ಲೊ ಒಂದು ಕಡೆ ಅವರನ್ನು ನಿರ್ಲಕ್ಷಿಸುತ್ತಿರುವುದು ವಿಷಾದನೀಯ ಎಂದು ವಿಜಯನಗರ ಜಿಲ್ಲಾ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಪಿ.ಸತ್ಯನಾರಾಯಣ ರವರು ಬೇಸರ ವ್ಯಕ್ತಪಡಿಸಿದರು. ಅವರು ಪಟ್ಟಣದ ಲಲಿತ ಕಲಾರಂಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕರ್ನಾಟಕ ಅಸಂಘಟಿತ ಕಾರ್ಮಿಕರ ಕ್ಷೇಮಾಭಿವೃದ್ದಿ ಸಂಘದ ಸಮಾರಂಭದಲ್ಲಿ ಮಹಾತ್ಮ ಗಾಂಧೀಜಿ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ರವರು ಭಾವ ಚಿತ್ರಗಳಿಗೆ  ಪುಷ್ಪಗಳ ನಮನ ಸಲ್ಲಿಸಿ ನಂತರ ಕಾರ್ಯಕ್ರಮದ  …

ರೈತರು, ಕಾರ್ಮಿಕರು ದೇಶದ ಉಸಿರು Read More »

Translate »
Scroll to Top