‘ಹಲೋ ಡಾಕ್ಟರ್’ ಉಚಿತ ಕೋವಿಡ್ ಟೆಲಿ ಕ್ಲಿನಿಕ್

ಬಳ್ಳಾರಿ,ಜನವರಿ,13 : ದೇಶವ್ಯಾಪಿ ಒಮೈಕ್ರಾನ್ ಏರಿಕೆಯ ತೀವ್ರತೆ ಹೆಚ್ಚುತ್ತಿರುವ ಹಿನ್ನೆಲೆ ಎಐಡಿಎಸ್‌ಓ ಕರ್ನಾಟಕ ರಾಜ್ಯ ಸಮಿತಿ ವತಿಯಿಂದ ಸೋಂಕಿತರಿಗೆ ಚಿಕಿತ್ಸೆ ನೀಡಲು ಆನ್‌ಲೈನ್ ಮೂಲಕ ‘ಹಲೋ ಡಾಕ್ಟರ್ ಉಚಿತ ಕೋವಿಡ್ ಟೆಲಿ ಕ್ಲಿನಿಕ್‌ಅನ್ನು ನಾಳೆ(ಶುಕ್ರವಾರ)ದಿಂದ ಆರಂಭಿಸಲಾಗುತ್ತಿದೆ. ಕೋವಿಡ್ 2ನೇ ಅಲೆಯ ಸಂದರ್ಭದಲ್ಲೂ ನಮ್ಮ ಸಂಘಟನೆಯು ನಡೆಸಿದ ಉಚಿತ ಕೋವಿಡ್ ಟೆಲಿ ಕ್ಲಿನಿಕ್ ಮೂಲಕ ನೂರಾರು ಸೋಂಕಿತರು ಚಿಕಿತ್ಸೆ ಮತ್ತು ಸಲಹೆ ಪಡೆದು ಗುಣಮುಖರಾದರು. ಈ ಬಾರಿಯೂ ಮನೆಯಲ್ಲಿ ಕ್ವಾರಂಟೈನ್ ಆದ ಕೋವಿಡ್ ರೋಗಿಗಳಿಗೆ ಮತ್ತು ಕೋವಿಡ್ ಪ್ರಾಥಮಿಕ ಹಂತದ ಚಿಕಿತ್ಸೆಗಾಗಿ, ಕೋವಿಡ್ ಲಕ್ಷಣಗಳು ಇರುವವರಿಗೆ ತಜ್ಞ ವೈದ್ಯರ ಜೊತೆ ನೇರ ಉಚಿತ ದೂರವಾಣಿ ಸಮಾಲೋಚನೆ ನಡೆಸುವ ಉದ್ದೇಶದಿಂದ, ಈ ಸೇವೆಯನ್ನು ಆರಂಭಿಸಲಾಗಿದೆ. ಗ್ರಾಮೀಣ ಪ್ರದೇಶದ, ಹೆಚ್ಚಾಗಿ ಆರೋಗ್ಯ ವ್ಯವಸ್ಥೆ ಇಲ್ಲದ ನಗರಗಳಲ್ಲಿ ವಾಸಿಸುತ್ತಿರುವ ಬಡ ಜನರಿಗೆ ನೆರವು ಒದಗಿಸುವುದು ಮತ್ತು ಕೋವಿಡ್ ಪೀಡಿತರಿಗೆ ಮಾನಸಿಕ ಸ್ಥೆರ್ಯವನ್ನು ತುಂಬುವುದು ನಮ್ಮ ಉದ್ದೇಶ. ರಾಜ್ಯದ ಹಲವಾರು ಪ್ರತಿಷ್ಠಿತ, ನುರಿತ ವೈದ್ಯರು ನಮ್ಮ ಜೊತೆ ಕೈಸೇರಿಸಿರುವುದು ಸರ್ಕಾರಗಳ ವೈಫಲ್ಯಗಳ ನಡುವೆ ಜನ ಸೇವೆಗೆ ಮುಂದೆ ಬಂದಿರುವ ಜೀವಪರ ವ್ಯಕ್ತಿ/ಸಂಘಟನೆಗಳ ದಾರಿಯಲ್ಲಿ ನಮ್ಮ ಸಣ್ಣ ಪ್ರಯತ್ನಕ್ಕೆ ಶಕ್ತಿ ನೀಡಿದೆ.

ದಿನಾಂಕ 14ರಿಂದ ಪ್ರತಿದಿನ ಬೆಳಗ್ಗೆ ಮತ್ತು ಸಾಯಂಕಾಲ ತಲಾ ಒಂದು ಘಂಟೆಗಳ ಎರಡು ಅವಧಿಗಳಿಗೆ ಅಪಾಯಿಂಟ್‌ಮೆಂಟ್ ನೀಡಲಾಗುವುದು. ಅಪಾಯಿಂಟ್‌ಮೆಂಟ್‌ಗಾಗಿ ನೀವು ಕರೆ ಮಾಡಬೇಕಾಗಿರುವ ದೂರವಾಣಿ ಸಂಖ್ಯೆಗಳು:- 9164220387, 9035762866, 8880744437 ಅನ್ನು ಸಂಪರ್ಕಿಸಬಹುದು ಮತ್ತಷ್ಟು ಮಾಹಿತಿ, ತಜ್ಞ ವೈದ್ಯರ ಪಟ್ಟಿ, ನಿರ್ದಿಷ್ಟ ವೇಳಾಪಟ್ಟಿಗಾಗಿ ಎಐಡಿಎಸ್‌ಓ ಕರ್ನಾಟಕ ಫೇಸ್‌ಬುಕ್ ಪೇಜ್ ಗಮನಿಸಿ.
ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಮನವಿ ಮಾಡಿಕೊಳ್ಳುತ್ತೇವೆ.

Leave a Comment

Your email address will not be published. Required fields are marked *

Translate »
Scroll to Top