ಶಿಕ್ಷಣ ವಿರೋಧಿ ಸರಕಾರದ ಕ್ರಮ ಖಂಡನೀಯ : ಕೆ.ಕೊಟ್ರೇಶ್ ವಾಗ್ದಾಳಿ

ಹೊಸಪೇಟೆ,ಜ,12 : ಸರ್ಕಾರವು ಬಡ ಮಧ್ಯಮ ವರ್ಗದ ಅತಿಥಿ ಉಪನ್ಯಾಸಕರಿಗೆ ಅನ್ಯಾಯ ಶೋಷಣೆಯನ್ನು ಮಾಡುತ್ತಿದೆ.ಪ್ರತಿಭಟನೆ 33 ದಿನ ಕಳೆದರು ಸಚಿವರು ಹೋರಾಟಕ್ಕೆ ಸ್ಪಂದಿಸತ್ತಿಲ್ಲ ಎಂದು ವಿಜಯನಗರ ಜಿಲ್ಲೆಯ ಜೆ.ಡಿ.ಎಸ್ ಪಕ್ಷದ ಜಿಲ್ಲಾಧ್ಯಕ್ಷ ಕೆ.ಕೊಟ್ರೇಶ್ ಅವರು ಸರಕಾರದ್ದು ವಿರುದ್ಧ ವಾಗ್ದಾಳಿ ನಡಿಸಿದರು. ನಗರದ ಶ್ರೀ ಶಂಕರ್ ಆನಂದ್ ಸಿಂಗ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 33 ನೇ ದಿನದ ಅತಿಥಿ ಉಪನ್ಯಾಸಕರ ಹೋರಾಟವನ್ನು ಬೆಂಬಲಿಸಿ ಅವರು ಮಾತನಾಡಿ,ಶಿಕ್ಷಣ ಆರೋಗ್ಯ, ಕೃಷಿ ದೇಶದ ಪ್ರಗತಿಗೆ ಮುಖ್ಯವಾಗಿದೆ ಇವುಗಳನ್ನೆ ಸರಕಾರ ನಿರ್ಲಕ್ಷಿಸಿದೆ ಎಂದು ಅವರು ಅಕ್ರೋಶ ವ್ಯಕ್ತ ಪಡಿಸಿದರು. ಸರ್ಕಾರಿ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವುದು ಬಡವರು ಮಕ್ಕಳು,ದಲಿತರ ಮಕ್ಕಳು ಮತ್ತು ಕೂಲಿ ಕಾರ್ಮಿಕರು ಮಕ್ಕಳು ಅಭ್ಯಾಸ ಮಾಡುತ್ತಿರುತ್ತಾರೆ. ಸರಕಾರ ಕಾಲೇಜಿನಲ್ಲಿ 20 ವರ್ಷಗಳಿಂದ ಬಡ ಉಪನ್ಯಾಸಕರು ಕಡಿಮೆ ಗೌರವಧನಕ್ಕೆ ದುಡಿಯುತ್ತಿದ್ದಾರೆ. ಡಿಸೆಂಬರ್ 10 ನೇ ತಾರೀಖಿನಿಂದ ತರಗತಿಗಳನ್ನು ಬಹಿಷ್ಕರಿಸಿ ಹೋರಾಟವನ್ನು ಮಾಡುತ್ತಿದ್ದಾರೆ.ಸ್ಥಳೀಯ ಮಂತ್ರಿಗಳು ಇತ್ತ ಕಡೆ ಗಮನ ಹರಿಸಿಲ್ಲ ಇದು ಜಿಲ್ಲೆಯ ದೌರ್ಬಲ್ಯವಾಗಿದೆ. ಅವರ ಸಮಸ್ಯಗಳಿಗೆ ಇಷ್ಟು ದಿನಗಳಲ್ಲಿ ಪರಿಹಾರವನ್ನು ನೀಡಬಹುದಿತ್ತು. ಸ್ಥಳೀಯ ಸಚಿವರು ಮಾನವೀಯತೆ ದೃಷ್ಟಿಯಿಂದಾದರು ಹೋರಾಟಗಾರ ಸಮಸ್ಯೆಗಳನ್ನು ಆಲಿಸಿಬಹುದಿತ್ತು. ಸಚಿವರು ಮಾತ್ರ ಇತ್ತ ಕಡೆ ಕಾಲಿಟ್ಟಲ್ಲ ಎಂದು ಸಚಿರವ ವಿರುದ್ಧ ವಾಗ್ದಾಳಿ ನಡೆಸಿದರು.

ಈ ಸರಕಾರದಲ್ಲಿ ದಿನದಿಂದ ದಿನಕ್ಕೆ ವಸ್ತಗಳು ಬೆಲೆ ಎರಿಕೆಯಾಗುತ್ತಿದೆ. ಆದರೆ ಅತಿಥಿ ಉಪನ್ಯಾಸಕರು 11000 ಮತ್ತು 13000 ಸಾವಿರ ರೂ.ಗಳಿಗೆ ಕೆಲಸವನ್ನು ನಿರ್ವಹಿಸುವುದು ತುಂಬ ಕಷ್ಟ. ಇಂತಹ ಸಾಂಕ್ರಾಮಿಕ ಕಾಯಿಲೆಯ ಕಾಲದಲ್ಲಿ ಜೀವನ ಮಾಡುವುದಕ್ಕೆ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕರ್ನಾಟಕದಲ್ಲಿ ಮೊದಲ ಬಾರಿಗೆ ಜಾರಿ ಮಾಡಿದ್ದಾರೆ‌. ರಾಜ್ಯದ ಎಲ್ಲ ವಿಶ್ವ ವಿದ್ಯಾಲಯಗಳಲ್ಲಿ ಇದನ್ನು ಪ್ರಾರಂಭಿಸಿದ್ದಾರೆ. ತರಗತಿಗಳಲ್ಲಿ ಪಾಠ ಮಾಡಬೇಕಾದ ಗುರುಗಳು ರಸ್ತೆಯಲ್ಲಿ ತಮ್ಮ ಬೇಡಿಕೆಗಾಗಿ ಹೋರಾಟವನ್ನು ಮಾಡುತ್ತ ಕುಳಿತರೆ ಶಿಕ್ಷಣ ನೀಡುವುದಾದರು ಹೇಗೆ, ಅದಕ್ಕಾಗಿ ಸರಕಾರವು ಇವರ ಸಮಸ್ಯೆಗಳಿಗೆ ಶೀಘ್ರವಾಗಿ ಪರಹಾರವನ್ನು ನೀಡಬೇಕು ಎಂದು ಆಗ್ರಹಿಸಿದರು. ಈ ಹೋರಾಟದಲ್ಲಿ ಜೆ.ಡಿ.ಎಸ್, ಪಕ್ಷದ ಬಿ.ಎಂ. ಸೋಮಶೇಖರ್,ಅಬ್ದುಲ್ ಸಲೀಂ,ವಿಜಯನಗರ ಜಿಲ್ಲಾ ಅತಿಥಿ ಉಪನ್ಯಾಸಕರ ಅಧ್ಯಕ್ಷ ಪಿ.ವಿಜಯಕುಮಾರ, ಗೌರವ ಅಧ್ಯಕ್ಷ ಎರ್ರಿಸ್ವಾಮಿ, ಕಾರ್ಯದರ್ಶಿ ಅಕ್ಕಿ ಮಲ್ಲಿಕಾರ್ಜುನ, ಸಂದೀಪ ಡಿ.ಡಿ, ಚೌಡೇಶ್, ಹನುಮನಗೌಡ,ಹಿರಿಯ ಉಪನ್ಯಾಸಕ ಷಣ್ಮಖಪ್ಪ,,ತಿಪ್ಪೇಶ್ ಹೆಚ್.ಎಂ, ನಿಂಗಪ್ಪ, ಸೋಮಶೇಖರ್ ಜೆ.ಡಿ.ಎಸ್ ಪಕ್ಷದ ಕಾರ್ಯದರ್ಶಿ,ಬಸಂತಿ, ಸುಮಲತ,ಭಾರತಿ,ಐಶ್ವರ್ಯ ಪಿ. ಎಲ್ಲ ಅತಿಥಿ ಉಪನ್ಯಾಸಕರು ಭಾಗವಹಿಸಿದ್ದರು.

Leave a Comment

Your email address will not be published. Required fields are marked *

Translate »
Scroll to Top