LIVE TV LocalCrimeStateNationalInternationalPoliticsBusinessEducationEntertainmentSportsFeatureBeauty
National News

ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ನಟನೆಯ ‘ದಿ ರಾಜಾ ಸಾಬ್’ ಚಿತ್ರದ ರಿಲೀಸ್‌ ಡೇಟ್‌ ಅನೌನ್ಸ್‌ !

ಕಲ್ಕಿ ಚಿತ್ರದ ನಂತರ ಮತ್ತೊಮ್ಮೆ ಹೊಸ ಕಥೆಯೊಂದಿಗೆ ಕಾಣಿಸುತ್ತಿದ್ದಾರೆ ನಟ ಪ್ರಭಾಸ್!

The Rajasaab Movie: ಪ್ಯಾನ್ ಇಂಡಿಯನ್ ಹೀರೋ ಪ್ರಭಾಸ್‌ ನಟನೆಯ ʼ ದಿ ರಾಜಾ ಸಾಬ್ʼ ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಇದೇ ವರ್ಷದ ಡಿಸೆಂಬರ್ 5ರಂದು ʼದಿ ರಾಜಾ ಸಾಬ್ʼ ಸಿನಿಮಾ ತೆರೆಗೆ ಬರಲಿದೆ. ಇದೇ ಜೂನ್ 16ರಂದು ಟೀಸರ್ ಸಹ ಬಿಡುಗಡೆ ಆಗಲಿದೆ. ಈವರೆಗೂ ಆಕ್ಷನ್ ಅವತಾರದಲ್ಲಿಯೇ ಹೆಚ್ಚು ಮಿಂಚಿದ್ದ ನಟ ಪ್ರಭಾಸ್, ಇದೇ ಮೊದಲ ಬಾರಿಗೆ ʼದಿ ರಾಜಾ ಸಾಬ್ʼ ಸಿನಿಮಾ ಮೂಲಕ ಹಾರರ್ ಪ್ರಯತ್ನಕ್ಕಿಳಿದಿದ್ದಾರೆ. ಈ ಕುರಿತ ವಿವರ ಇಲ್ಲಿದೆ.

ಬೆಂಗಳೂರು: ಪ್ಯಾನ್ ಇಂಡಿಯನ್ ಹೀರೋ ಪ್ರಭಾಸ್‌ ನಟನೆಯ ʼ ದಿ ರಾಜಾ ಸಾಬ್ʼ ಸಿನಿಮಾದಿಂದ (The Rajasaab Movie)‌ ಬಿಗ್ ಅಪ್ಡೇಡ್ ಹೊರಬಿದ್ದಿದೆ. ಈಗಾಗಲೇ ಪೋಸ್ಟರ್ ಮತ್ತು ಝಲಕ್ ಮೂಲಕ ಗಮನ ಸೆಳದಿದ್ದ ಈ ಸಿನಿಮಾ, ಇದೀಗ ಬಿಡುಗಡೆಯ ಸುದ್ದಿಯ ಜತೆ ಆಗಮಿಸಿದೆ. ಅಂದರೆ, ಇದೇ ವರ್ಷದ ಡಿಸೆಂಬರ್ 5ರಂದು ʼದಿ ರಾಜಾ ಸಾಬ್ʼ ಸಿನಿಮಾ ತೆರೆಗೆ ಬರಲಿದೆ. ಇದೇ ಜೂನ್ 16ರಂದು ಟೀಸರ್ ಸಹ ಬಿಡುಗಡೆ ಆಗಲಿದೆ. ಈವರೆಗೂ ಆಕ್ಷನ್ ಅವತಾರದಲ್ಲಿಯೇ ಹೆಚ್ಚು ಮಿಂಚಿದ್ದ ನಟ ಪ್ರಭಾಸ್, ಇದೇ ಮೊದಲ ಬಾರಿಗೆ ʼದಿ ರಾಜಾ ಸಾಬ್ʼ ಸಿನಿಮಾ ಮೂಲಕ ಹಾರರ್ ಪ್ರಯತ್ನಕ್ಕಿಳಿದಿದ್ದಾರೆ. ಮೊದಲ ಮೋಷನ್ ಪೋಸ್ಟರ್ ನಲ್ಲಿಯೇ ಸೂಪರ್ ನ್ಯಾಚುರಲ್ ಎಳೆಯ ಹಿಂಟ್ ಕೊಟ್ಟಿದ್ದ ಈ ಸಿನಿಮಾ, ಇದೀಗ ಟೀಸರ್ ಬಿಡುಗಡೆ ದಿನಾಂಕದ ಜತೆಗೆ ಚಿತ್ರಮಂದಿರಕ್ಕೆ ಆಗಮಿಸುವುದಕ್ಕೂ ಮುಹೂರ್ತ ಫಿಕ್ಸ್ ಆಗಿದೆ.

ಮಾರುತಿ ನಿರ್ದೇಶನದ ʼದಿ ರಾಜಾ ಸಾಬ್ʼ ಭಯ ಮತ್ತು ಮನರಂಜನೆಯ ವಿಶಿಷ್ಟ ಮಿಶ್ರಣ ನೀಡುವ ಒಂದು ಪ್ರಯತ್ನ. ಬಿಡುಗಡೆಗೊಂಡಿರುವ ಪೋಸ್ಟರ್‌ಗಳು ಮತ್ತು ಝಲಕ್‌ಗಳು ಈಗಾಗಲೇ ಪ್ರೇಕ್ಷಕರನ್ನು ಆಶ್ಚರ್ಯ ಚಕಿತಗೊಳಿಸಿವೆ. ಪೀಪಲ್ ಮೀಡಿಯಾ ಫ್ಯಾಕ್ಟರಿ ಬ್ಯಾನರ್ ಅಡಿಯಲ್ಲಿ, ಟಿ.ಜಿ. ವಿಶ್ವ ಪ್ರಸಾದ್ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಈ ಚಿತ್ರ, ಬಿಗ್ ಬಜೆಟ್‌ನಲ್ಲಿ ಮೂಡಿಬರುತ್ತಿದೆ. ಈ ಚಿತ್ರಕ್ಕೆ ಕಾರ್ತಿಕ್ ಪಲನಿ ಛಾಯಾಗ್ರಹಣ ನಿರ್ವಹಿಸುತ್ತಿದ್ದು, ಥಮನ್ ಎಸ್. ಭರ್ಜರಿ ಸಂಗೀತ ನೀಡುತ್ತಿದ್ದಾರೆ.

ಈ ಸುದ್ದಿಯನ್ನೂ ಓದಿ | Fashion Show: ಡಿಸೈನರ್ಸ್ ಕ್ರಿಯೇಟಿವಿಟಿಗೆ ಸಾಕ್ಷಿಯಾದ ಸಿಇಎಸ್ ಕಾಲೇಜಿನ ಫ್ಯಾಷನ್ ಶೋ!

ಮಾಳವಿಕಾ ಮೋಹನನ್, ನಿಧಿ ಅಗರವಾಲ್ ಮತ್ತು ರಿಧಿ ಕುಮಾರ್ ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ತೆಲುಗು, ಹಿಂದಿ, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಪ್ಯಾನ್-ಇಂಡಿಯಾ ರಿಲೀಸ್ ಆಗುತ್ತಿರುವ ಈ ಚಿತ್ರ, ಕೇವಲ ಒಂದು ಸಿನಿಮಾ ಅಲ್ಲ — ಇದು ನಿಜವಾದ ಥಿಯೇಟ್ರಿಕಲ್ ಇವೆಂಟ್, ಎಲ್ಲ ಅಳತೆಗಳನ್ನೂ ಮೀರುವ ವಿಶಿಷ್ಟ ಸಿನಿಮಾ ಸಾಲಿಗೆ ಸೇರುವ ಚಿತ್ರವಾಗುವ ಹಾದಿಯಲ್ಲಿದೆ.

Author
Kannada Nadu News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ತುಂಗಭದ್ರಾ ಜಲಾಶಯಕ್ಕೆ ಒಳಹರಿವು ಹೆಚ್ಚಳ: ಒಂದೇ ದಿನದಲ್ಲಿ 4 ಟಿಎಂಸಿ ನೀರು ಸೇರ್ಪಡೆರಾಜಕೀಯಕ್ಕಿಂತ ರಾಜ್ಯದ ಹಿತವೇ ಮೊದಲ ಆದ್ಯತೆ: ಕಾವೇರಿ ಹೋರಾಟದಲ್ಲಿ ಒಂದಾದ ಸರ್ವಪಕ್ಷಗಳು, ಡಿಕೆಶಿ ಸಂದೇಶಬಳ್ಳಾರಿಗೆ ಒಲಿದ ಮಂತ್ರಿಗಿರಿ: ಸಂಪುಟ ವಿಸ್ತರಣೆಯಲ್ಲಿ ಬಿ. ನಾಗೇಂದ್ರ ರೀ-ಎಂಟ್ರಿ!ಮಹಿಳಾ ಕುಸ್ತಿಪಟುಗಳ ಲೈಂಗಿಕ ಕಿರುಕುಳ ಪ್ರಕರಣ: ಬ್ರಿಜ್ ಭೂಷಣ್ ಶರಣ್ ಸಿಂಗ್‌ಗೆ ರಿಲೀಫ್ಇಂದು ಸಂಪುಟ ವಿಸ್ತರಣೆಗೆ ಕ್ಷಣಗಣನೆ, ಮಂತ್ರಿ ಸ್ಥಾನ ಭಾಗ್ಯ ಯಾರಿಗೆ ಉಂಟು.. ಯಾರಿಗೆ ಇಲ್ಲ..!ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ವ್ಯಕ್ತಿ ಸಾವು: ಎಸ್‌ಪಿ ಜಾಹ್ನವಿ ಭೇಟಿ, ತನಿಖೆ ಆರಂಭಕತ್ತೆಬೆನ್ನೂರು ಬಳಿ ಬೋನಿಗೆ ಬಿದ್ದ ಚಿರತೆ; ದರೋಜಿ ಅರಣ್ಯಕ್ಕೆ ಸ್ಥಳಾಂತರಆಗಸ್ಟ್ 8ಕ್ಕೆ ‘ಟಾಕ್ಸಿಕ್’ ಟ್ರೇಲರ್; ಖಡಕ್ ಪೋಸ್ಟರ್‌ನಿಂದಲೇ ಹೈಪ್ ಹೆಚ್ಚಿಸಿದ ಯಶ್ಎಚ್ಚರ! ವಾಟ್ಸಾಪ್‌ಗೆ ಬರುತ್ತಿದೆ ‘ನಕಲಿ ಇನ್‌ಕಮ್ ಟ್ಯಾಕ್ಸ್ ನೋಟಿಸ್’; ಒಂದೇ ಕ್ಲಿಕ್‌ಗೆ ಖಾತೆ ಖಾಲಿಯಾಗಬಹುದುಇಂದು ಮೋದಿ ಮೈಸೂರಿಗೆ ! ವಿವೇಕ ಸ್ಮಾರಕ ಲೋಕಾರ್ಪಣೆ