ಜಿಲ್ಲೆಗಳು

ಹಂಪಿಗೆ ಸಾರಿಗೆ ಸಚಿವ ಶ್ರೀರಾಮುಲು ಕುಟುಂಬ ಸಮೇತ ಭೇಟಿ

ವಿಜಯನಗರ : ಹಂಪಿಗೆ ಸಾರಿಗೆ ಸಚಿವ ಶ್ರೀರಾಮುಲು ಕುಟುಂಬ ಸಮೇತ ಭೇಟಿ .ನದಿದಡದಲ್ಲಿರೋ ಶ್ರೀ ರಾಮ ಲಕ್ಷ್ಮಣ, ಯಂತ್ರೋದ್ಧಾರಕ ಪ್ರಾಣದೇವರ ದರ್ಶನ ಪಡೆದ ಕುಟುಂಬ ಹಂಪಿಯಲ್ಲಿ ಐದು ದೇಗುಲಗಳ ಜೀರ್ಣೋದ್ಧಾರ ನಡೆಯುತ್ತಿದೆ. ಜೀರ್ಣೋದ್ಧಾರಕ್ಕೆ ಕೈ ಜೋಡಿಸಿರೋ ಸಚಿವ ಶ್ರೀರಾಮುಲು ಹೀಗಾಗಿ ಕುಟುಂಬ ಸಮೇತ ದರ್ಶನ ಪಡೆದ ಸಚಿವ ಶ್ರೀರಾಮುಲು ಯಂತ್ರೋದ್ಧಾರಕ ಮತ್ತು ರಾಮ ಲಕ್ಷ್ಮಣ ದೇವಸ್ಥಾನದ ಮುಂಭಾಗದಲ್ಲಿ ಸೋಲಾರ್ ಲೈಟ್ಸ್ ಅಳವಡಿಸಲು ಸೂಚಿಸಿದ್ದಾರೆ.

`ಬೆಳೆಯುವ ಪೈರು ಮೊಳಕೆಯಲ್ಲಿ’

ಬೇಲೂರು : ಬೆಳೆಯುವ ಪೈರು ಮೊಳಕೆಯಲ್ಲಿ ಎನ್ನುವಂತೆ ಇಲ್ಲಿನ ಪಿಯು ವಿದ್ಯಾರ್ಥಿಯೋರ್ವ ಶಿವ, ವ್ಯಕ್ತಿಚಿತ್ರ, ಸುಭಾಷಚಂದ್ರಬೋಸ್, ಉಪೇಂದ್ರ, ದರ್ಶನ್ ಸೇರಿದಂತೆ ಹಲವರ ಭಾವಚಿತ್ರವನ್ನು ಪೆನ್ಸಿಲ್‌ನಿಂದ ರಚಿಸಿದ್ದಾನೆ. ಚಿಕ್ಕಂದಿನಿoದಲೇ ಹವ್ಯಾಸಕ್ಕಾಗಿ ಪೆನ್ಸಿಲ್ ಹಿಡಿದು ಗೀಚುತ್ತಿದ್ದ ವಿದ್ಯಾರ್ಥಿ ಬಿ.ಆರ್.ಪ್ರಜ್ವಲ್, ಇಲ್ಲಿನ ಕೆಂಪೇಗೌಡರ ರಸ್ತೆಯಲ್ಲಿರುವ ಪತ್ರಕರ್ತ ಹಾಗೂ ಎಪಿಎಂಸಿ ಮಾಜಿ ಸದಸ್ಯ ಪೈಂಟ್‌ರವಿ ಅವರ ಪುತ್ರ. ಇದೀಗ ಈ ವಿದ್ಯಾರ್ಥಿ ಹಾಸನದ ಕಾಲೇಜೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದು ಬಿಡುವಿನ ವೇಳೆಯಲ್ಲಿ ಈ ಚಿತ್ರಗಳ ರಚಿಸಿದ್ದಾನೆ. ಭಾವಚಿತ್ರ ರಚನೆಯ ಇದು ಆರಂಭವಾದರೂ ನೋಡುಗರ ಹಿತಕಾಯುತ್ತದೆ. …

`ಬೆಳೆಯುವ ಪೈರು ಮೊಳಕೆಯಲ್ಲಿ’ Read More »

ಬ್ಲಾಕ್ ಕಾಂಗ್ರೇಸ್ ಪಕ್ಷ-ಕುಷ್ಟಗಿ ಬ್ಲಾಕ್ ಕಾಂಗ್ರೆಸ್-ಹನಮಸಾಗರ ವತಿಯಿಂದ ಪ್ರತಿಭಟನೆ

ಕುಷ್ಟಗಿ : ರೈತರು ಸತ್ತರೆ ಬಿಜೆಪಿ ಪಕ್ಷದವರು 45 ಲಕ್ಷ ಕೊಟ್ಟಿದ್ದಾರೆ ಆದರೆ ಬಿಜೆಪಿಯವರು ಸತ್ತರೆ ನಾವು ನಮ್ಮ ಕಾಂಗ್ರೇಸ್ ಪಕ್ಷದಿಂದ 1 ಕೋಟಿ ಪರಿಹಾರ ಕೊಡುತ್ತೇವೆ ಎಂದ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ. ಬ್ಲಾಕ್ ಕಾಂಗ್ರೇಸ್ ಪಕ್ಷ-ಕುಷ್ಟಗಿ ಬ್ಲಾಕ್ ಕಾಂಗ್ರೆಸ್-ಹನಮಸಾಗರ ವತಿಯಿಂದ ಪಟ್ಟಣದ ಮಲ್ಲಯ್ಯ ವೃತ್ತದಿಂದ ಬಸವೇಶ್ವರ ವೃತ್ತದ ವರಗೆ ಪಂಜಿನ ಮೇರವಣಿಗೆ ಮಾಡುವ ಮೂಲಕ ರೈತ ವಿರೋಧಿ ಕಾಯ್ದೆ ವಿರುದ್ಧ ಹಾಗೂ ರೈತರ ಮೇಲೆ ಜೀಪ್ ಹತ್ತಿಸಿದ್ದನ್ನು ಖಂಡಿಸಿ ಪ್ರತಿಭಟಿಸಿ ಮಾತನಾಡಿದರು. ನಂತರ ತಮ್ಮ …

ಬ್ಲಾಕ್ ಕಾಂಗ್ರೇಸ್ ಪಕ್ಷ-ಕುಷ್ಟಗಿ ಬ್ಲಾಕ್ ಕಾಂಗ್ರೆಸ್-ಹನಮಸಾಗರ ವತಿಯಿಂದ ಪ್ರತಿಭಟನೆ Read More »

ಮನುಷ್ಯನಿಗೆ ಯಾವುದೂ ಶಾಶ್ವತವಲ್ಲ ಬದುಕಿರುವ ತನಕ ಪುಣ್ಯ ಕಾರ್ಯ ಮಾಡಬೇಕು

ದೇವನಹಳ್ಳಿ: ಉಳ್ಳವರು ಬಡವರಿಗೆ ಆಸರೆ ಆಗಬೇಕು ನಾವು ಇಂದಿನಿಂದಲೇ ಸೇವಾಕಾರ್ಯದಲ್ಲಿ ತೊಡಗೋಣ. ನಾವು ಮೂರು ಜನರಿಗೆ ಆಸರೆ ಆದರೆ ಅವರು ಮುಂದಕ್ಕೆ ಇನ್ನೂ ಮೂರು ಜನರಿಗೆ ಆಸರೆ ಆಗುತ್ತಾರೆ. ಸಂಘವನ್ನು ಒಂದು ಉತ್ತಮ ಧ್ಯೇಯ ದೊಂದಿಗೆ ಹುಟ್ಟು ಹಾಕಿದ ದಿ. ರಾಜಗೋಪಾಲ್ ರವರಿಗೆ ಹಾಗೂ ಸಂಘಕ್ಕೆ ಇದರಿಂದ ಒಳ್ಳೆಯ ಹೆಸರು ಬರುತ್ತದೆ ಎಂದು ತಾಲ್ಲೂಕು ಕನ್ನಡ ಕಲಾವಿದರ ಸಂಘದ ಅಧ್ಯಕ್ಷ ಡಾ.ಮೋಹನ್ ಬಾಬು ತಿಳಿಸಿದರು. ದೇವನಹಳ್ಳಿ ತಾಲ್ಲೂಕು ವಿಜಯಪುರ ಪಟ್ಟಣದ ಪುರಸಭಾ ಮಾಜಿ ಸದಸ್ಯ ಬಲಮುರಿ ಶ್ರೀನಿವಾಸ್ …

ಮನುಷ್ಯನಿಗೆ ಯಾವುದೂ ಶಾಶ್ವತವಲ್ಲ ಬದುಕಿರುವ ತನಕ ಪುಣ್ಯ ಕಾರ್ಯ ಮಾಡಬೇಕು Read More »

ರಾಘವೇಂದ್ರಶೆಟ್ಟಿರವರಿಗೆ ಗಾಂಧಿಪ್ರಿಯ ಪ್ರಶಸ್ತಿ

ಮರಿಯಮ್ಮನಹಳ್ಳಿ: ಸಮರ್ಥ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ,ಹಲವು ಕ್ಷೇತ್ರಗಳ ಸಾಧಕರಿಗೆ ಕೊಡಮಾಡುವ ಗಾಂಧಿಪ್ರಿಯ ಪ್ರಶಸ್ತಿಗೆ ಪಟ್ಟಣದ ಆರ್ಯವೈಶ್ಯ ಸಂಘದ ಕಾರ್ಯದರ್ಶಿ, ಚಿಂತಕ ಡಿ.ರಾಘವೇಂದ್ರಶೆಟ್ಟಿರವರು ಭಾಜನರಾಗಿದ್ದಾರೆ. ರಾಷ್ಟ್ರಪಿತ ಮಹಾತ್ಮ  ಜಯಂತಿ ನಿಮಿತ್ತ, ಭಾನುವಾರ ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗಾಂಧಿಪ್ರಿಯ ಪ್ರಶಸ್ತಿ ನೀಡಿ ಗೌರವಿಸಿದೆ.ಆಧ್ಯಾತ್ಮ ಹಾಗೂ ಸಾಧಕರಾದ ನಾಗರಾಜಾಚಾರ ಕಾರ್ಯಕ್ರಮದ ಸಾನಿಧ್ಯವಹಿಸಿದ್ದರು.ಪ್ರತಿಷ್ಠಾನದ ಅಧ್ಯಕ್ಷ ಆರ್.ವಿಜಯಸಮರ್ಥ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ಪ್ರಶಸ್ತಿ ಪುರಸ್ಕೃತರು ಹಲವು ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು.ಪ್ರಶಸ್ತಿ ಪುರಸ್ಕೃತರಿಗೆ ಪಟ್ಟಣದ ಆರ್ಯವೈಶ್ಯಸಮಾಜದ ಅಧ್ಯಕ್ಷರಾದ ಎಂ.ವಿಶ್ವನಾಥಶೆಟ್ಟಿ,ವಾಸವಿಮಹಿಳಾಸಮಾಜ,ವಾಸವಿಯುವಜನಸಂಘ,ಬಿಜೆಪಿ ಮುಖಂಡರು ಹಾಗೂ ಊರಿನ …

ರಾಘವೇಂದ್ರಶೆಟ್ಟಿರವರಿಗೆ ಗಾಂಧಿಪ್ರಿಯ ಪ್ರಶಸ್ತಿ Read More »

ಪ್ರಸ್ತುತ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಬಸ್ ಪಾಸ್ ಅನ್ನು ಉಚಿತವಾಗಿ ಒದಗಿಸಲು ಆಗ್ರಹಿಸಿ ಪ್ರತಿಭಟನೆ

ಬಳ್ಳಾರಿ : ಇಂದು AIDSO ವಿದ್ಯಾರ್ಥಿ ಸಂಘಟನೆ ವತಿಯಿಂದ ಉಚಿತ ಬಸ್ ಪಾಸ್ ಗಾಗಿ ಆಗ್ರಹಿಸಿ ವಿವಿಧ ಕಾಲೇಜುಗಳಿಂದ ನೂರಾರು ವಿದ್ಯಾರ್ಥಿಗಳು ಸೇರಿ ರಾಯಲ್ ಸರ್ಕಲ್, ದುರ್ಗಮ್ಮ ಗುಡಿ, S P ಸರ್ಕಲ್ ಮುಖಾಂತರ ಪ್ರತಿಭಟನಾ ಮೆರವಣಿಗೆಯು KSRTC ಡಿಪೋ ಮುಂದೆ ಪ್ರತಿಭಟನೆ ಮಾಡಲಾಯಿತು. ಈ ಪ್ರತಿಭಟನೆಯನ್ನು ಉದ್ದೇಶಿಸಿ AIDSO ಜಿಲ್ಲಾ ಉಪದ್ಯಕ್ಷರಾದ ಜೆ. ಸೌಮ್ಯ ಅವರು ಮಾತನಾಡುತ್ತಾ ನಿಮಗೆ ತಿಳಿದಿರುವಂತೆ ಹಿಂದಿನ ವರ್ಷದ ವಿದ್ಯಾರ್ಥಿ ಬಸ್ ಪಾಸ್‌ನ ವಿಸ್ತರಣೆಯ ಅವಧಿ ಮುಗಿದಿದೆ. ಆದರೆ ಇನ್ನು ಕೆಲವು …

ಪ್ರಸ್ತುತ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಬಸ್ ಪಾಸ್ ಅನ್ನು ಉಚಿತವಾಗಿ ಒದಗಿಸಲು ಆಗ್ರಹಿಸಿ ಪ್ರತಿಭಟನೆ Read More »

ಕೂಡಲೇ ತಪ್ಪಿತಸ್ಥರನ್ನು ಬಂಧಿಸಿ

ದೇವನಹಳ್ಳಿ: ಉತ್ತರಪ್ರದೇಶದಲ್ಲಿ ರೈತರ ಸಾವು , ಹಾಗು ಅವರ ಕುಟುಂಬಗಳಿಗೆ ಸಾಂತ್ವನ ಹೇಳಲು ಹೊರಟಿದ್ದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರನ್ನು ಬಂಧಿಸಿ ವಶಕ್ಕೆ ಪಡೆದಿರುವುದನ್ನು ಖಂಡಿಸಿ ಪಂಜಿನ ಮೆರವಣಿಗೆ ಮಾಡುತ್ತಿರುವುದಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕೆ.ಆರ್. ನಾಗೇಶ್ ತಿಳಿಸಿದರು. ದೇವನಹಳ್ಳಿ ತಾಲ್ಲೂಕು ವಿಜಯಪುರ ಪಟ್ಟಣದ ಹೊಸಬಸ್ ನಿಲ್ದಾಣದಲ್ಲಿ ಜಿಲ್ಲಾ ಹಾಗೂ ಟೌನ್ ಯುವ ಕಾಂಗ್ರೆಸ್ ವತಿಯಿಂದ ಪಂಜಿನ ಮೆರವಣಿಗೆ ನಂತರ ಮಾತನಾಡಿ, ಉತ್ತರ ಪ್ರದೇಶದಲ್ಲಿ ನಡೆದ ಘಟನೆಗೆ ನೈತಿಕ ಹೊಣೆ ಹೊತ್ತು …

ಕೂಡಲೇ ತಪ್ಪಿತಸ್ಥರನ್ನು ಬಂಧಿಸಿ Read More »

ನಿನ್ನೆ ಬಿದ್ದ ಭಾರಿ ಮಳೆಗೆ ಹರಿಹರ ನಗರದ ಕೇಶವನಗರದಲ್ಲಿ ನಿಂತು ನೀರು

ಹರಿಹರ : ನಿನ್ನೆ ಬಿದ್ದ ಭಾರಿ ಮಳೆಗೆ ಹರಿಹರ ನಗರದ ನೀಲಕಂಠ ನಗರ, ಕೇಶವನಗರದಲ್ಲಿ ನೀರು ನಿಂತು ಸಾರ್ವಜನಿಕರಿಗೆ ತೊಂದರೆಯಾಗಿರುವುದನ್ನು ಮಾನ್ಯ ಜನಪ್ರಿಯ ಶಾಸಕರಾದ ಎಸ್ ರಾಮಪ್ಪನವರು ಸ್ಥಳ ಪರಿಶೀಲಿಸಿ ನಗರಸಭಾ ಪೌರಾಯುಕ್ತರಿಗೆ ಕೂಡಲೆ ಸರಿಪಡಿಸುವಂತೆ ಸೂಚಿಸಿದರು. ಈ ಸಂದರ್ಭದಲ್ಲಿ ನಗರಸಭಾ ಸದಸ್ಯರಾದ ದಾದಾಪೀರ್,ಅಲೀಮ್ ಹಾಗೂ ಶ್ರೀಮತಿ ಸುಮಿತ್ರಾ ಕೆ.ಎಮ್ ರವರು ಇದ್ದರು.

ಸದಾಶಿವ ಆಯೋಗ ವರದಿ ರದ್ದಿಗೆ ಒತ್ತಾಯಿಸಿ ಪ್ರತಿಭಟನೆ

ಮಸ್ಕಿ.: -ನ್ಯಾಯಮೂರ್ತಿ ಎಜೆ ಸದಾಶಿವ ಆಯೋಗದ ವರದಿಯನ್ನು ಏಕಪಕ್ಷೀಯವಾಗಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬಾರದೆಂದು ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದ ವತಿಯಿಂದ ಪ್ರತಿಭಟನೆ ಮಾಡಲಾಯಿತು. ಇಂದು ಪಟ್ಟಣದ ಭ್ರಮರಂಭ ದೇವಸ್ಥಾನ ದಿಂದ ಕನಕ ವೃತ್ತ, ವಾಲ್ಮೀಕಿ ವೃತ್ತ, ಬಸವೇಶ್ವರ ವೃತ್ತ ರಸ್ತೆಗಳ ಮುಖಾಂತರ ತಹಶಿಲ್ದಾರರ ಕಚೇರಿ ವರಿಗೆ ಪ್ರತಿಭಟನೆ ಮುಖಂತರಾ ತೆರಳಿ ಮಸ್ಕಿ ತಹಸೀಲ್ದಾರ ಅವರ ಮುಖಂತರಾ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದ ಮುಖಂಡ ರವಿಕುಮಾರ್ ಚಿಗರಿ‌ ಮಾತನಾಡಿ ಭಾರತ ಸಂವಿಧಾನದ …

ಸದಾಶಿವ ಆಯೋಗ ವರದಿ ರದ್ದಿಗೆ ಒತ್ತಾಯಿಸಿ ಪ್ರತಿಭಟನೆ Read More »

1 k.g ಪ್ಲಾಸ್ಟಿಕ್ ಕೊಟ್ಟರೆ 1 k.g. ಅಕ್ಕಿ ಅಥವಾ ಸಕ್ಕರೆ ಪಡೆಯಬಹುದು ಪುರಸಭೆ ಮುಖ್ಯಾಧಿಕಾರಿ

ಕುಷ್ಟಗಿ:- ಪ್ಲಾಸ್ಟಿಕ್ ಮುಕ್ತ ಪಟ್ಟಣಕ್ಕಾಗಿ ಜಿಲ್ಲಾಧಿಕಾರಿಗಳ ಆದೇಶದ ಮೇರಿಗೆ ಗಾಂಧಿ ಜಯಂತಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿ ಜಯಂತಿ ಅಂಗವಾಗಿ ಅಕ್ಟೋಬರ್ 2 ರಿಂದ ಅಕ್ಟೋಬರ್ 31ರ ವರಗೆ ಕುಷ್ಟಗಿ ಪಟ್ಟಣವನ್ನು ಪ್ಲಾಸ್ಟಿಕ್ ಮುಕ್ತ ಮಾಡಲು ಪಣ ತೊಡಲಾಗಿದೆ. ಆದ್ದರಿಂದ ಈಗಾಗಲೇ ಗಾಂಧಿ ಜಯಂತಿಯಂದು ಗಾಂಧಿ ಪ್ರತೀಮೆಗೆ ಪೂಜೆ ಸಲ್ಲಿಸಿ ಗಾಂಧಿ ನಗರದಲ್ಲಿ ಪ್ಲಾಸ್ಟಿಕ್ ಮುಕ್ತಕ್ಕಾಗಿ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂ ಇವರಿಂದ ಚಾಲನೆ ನೀಡಲಾಗಿದ್ದು ಆದ್ದರಿಂದ ಪಟ್ಟಣದ ಸಾರ್ವಜನಿಕರು ಸಹಕರಿಸಿ ಈ ಯೋಜನೆಯ ಲಾಭ ಪಡೆಯಬಹುದಾಗಿದೆ. …

1 k.g ಪ್ಲಾಸ್ಟಿಕ್ ಕೊಟ್ಟರೆ 1 k.g. ಅಕ್ಕಿ ಅಥವಾ ಸಕ್ಕರೆ ಪಡೆಯಬಹುದು ಪುರಸಭೆ ಮುಖ್ಯಾಧಿಕಾರಿ Read More »

Translate »
Scroll to Top