ಬ್ಲಾಕ್ ಕಾಂಗ್ರೇಸ್ ಪಕ್ಷ-ಕುಷ್ಟಗಿ ಬ್ಲಾಕ್ ಕಾಂಗ್ರೆಸ್-ಹನಮಸಾಗರ ವತಿಯಿಂದ ಪ್ರತಿಭಟನೆ

ಕುಷ್ಟಗಿ : ರೈತರು ಸತ್ತರೆ ಬಿಜೆಪಿ ಪಕ್ಷದವರು 45 ಲಕ್ಷ ಕೊಟ್ಟಿದ್ದಾರೆ ಆದರೆ ಬಿಜೆಪಿಯವರು ಸತ್ತರೆ ನಾವು ನಮ್ಮ ಕಾಂಗ್ರೇಸ್ ಪಕ್ಷದಿಂದ 1 ಕೋಟಿ ಪರಿಹಾರ ಕೊಡುತ್ತೇವೆ ಎಂದ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ. ಬ್ಲಾಕ್ ಕಾಂಗ್ರೇಸ್ ಪಕ್ಷ-ಕುಷ್ಟಗಿ ಬ್ಲಾಕ್ ಕಾಂಗ್ರೆಸ್-ಹನಮಸಾಗರ ವತಿಯಿಂದ ಪಟ್ಟಣದ ಮಲ್ಲಯ್ಯ ವೃತ್ತದಿಂದ ಬಸವೇಶ್ವರ ವೃತ್ತದ ವರಗೆ ಪಂಜಿನ ಮೇರವಣಿಗೆ ಮಾಡುವ ಮೂಲಕ ರೈತ ವಿರೋಧಿ ಕಾಯ್ದೆ ವಿರುದ್ಧ ಹಾಗೂ ರೈತರ ಮೇಲೆ ಜೀಪ್ ಹತ್ತಿಸಿದ್ದನ್ನು ಖಂಡಿಸಿ ಪ್ರತಿಭಟಿಸಿ ಮಾತನಾಡಿದರು.

ನಂತರ ತಮ್ಮ ಆಕ್ರೋಶವನ್ನು ಹೊರಹಾಕಿದ ಶಾಸಕರು ಉತ್ತರ ಪ್ರದೇಶದಲ್ಲಿ ರೈತ ವಿರೋಧಿ ಕಾಯ್ದೆ ವಿರೋಧಿಸುವ ಸಮಯದಲ್ಲಿ ರೈತರು ಪ್ರತಿಭಟನೆ ಮಾಡುವ ವೇಳೆ ಕೇಂದ್ರ ಸರಕಾರದ ಸಚಿವರ ಮಗ ರೈತರ ಮೇಲೆ ಜೀಪ್ ಹತ್ತಿಸಿ ಕ್ರೋರಿತನದಿಂದ ಮೆರೆದು ತನ್ನ ಅಟ್ಟಹಾಸ ಮೆರೆದಿದ್ದಾನೆ ಆದರೆ ಕೇಂದ್ರ ಸರಕಾರ ಮೃತಪಟ್ಟ ರೈತರಿಗೆ 45 ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ ಆದರೆ ಸತ್ತವರು ಮತ್ತೆ ಬದುಕಿ ಬರಲು ಸಾಧ್ಯವೇ ಎಂದು ಪ್ರಶ್ನಿಸಿ ಕೇಂದ್ರ ಸರ್ಕಾರವನ್ನು ಟೀಕಿಸಿದರು. ಆದರೆ ನಾವು ಬಿಜೆಪಿ ಪಕ್ಷದವರಿಗೆ ಒಂದು ಮಾತು ಹೇಳುತ್ತೇವೆ ನೀವು ಪ್ರತಿಭಟನೆ ಮಾಡಿ ನಾವು ಕಾರನ್ನು ನಿಮ್ಮ ಮೇಲೆ ಹಾಯಿಸುತ್ತೇವೆ ನೀವು ಸತ್ತರೆ ನಮ್ಮ ಕಾಂಗ್ರೆಸ್ ಪಕ್ಷದಿಂದ 1 ಕೋಟಿ ಪರಿಹಾರ ಕೊಡುತ್ತೇವೆ ಎಂದು ಗುಡಿಗಿದರು. ಈ ಸಂದರ್ಭದಲ್ಲಿ ರಾಜ್ಯ ಕಾಂಗ್ರೆಸ್ ಪಕ್ಷದ ಮಾದ್ಯಮ ವಕ್ತಾರ ಲಾಡ್ಲೆ ಮಷಾಕ್ ದೋಟಿಹಾಳ, ಕಾಂಗ್ರೆಸ್ ಮುಖಂಡರಾದ ಶಿವಶೇಖರಗೌಡ ಕಡೂರ, ದೊಡ್ಡಬಸವನಗೌಡ ಬಯ್ಯಾಪೂರ, ಉಮೇಶ ಮಂಗಳೂರ, ಕೃಷ್ಣಾ ಟೆಂಗುಂಟಿ, ಬುಡ್ನೆಸಾಬ ಕಲಾದಗಿ, ನಾಗರಾಜ ಹಿರೇಮಠ, ಯಮನೂರ ಸಂಗಂಟಿ, ಮಂಜುನಾಥ ಕಟ್ಟಿಮನಿ,ಪುರಸಭೆ ಸದಸ್ಯ ಮೈಬುಸಾಬ ಕಮ್ಮಾರ ಸೇರಿದಂತೆ ಹಲವಾರರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

Translate »
Scroll to Top