ಮನುಷ್ಯನಿಗೆ ಯಾವುದೂ ಶಾಶ್ವತವಲ್ಲ ಬದುಕಿರುವ ತನಕ ಪುಣ್ಯ ಕಾರ್ಯ ಮಾಡಬೇಕು

ದೇವನಹಳ್ಳಿ: ಉಳ್ಳವರು ಬಡವರಿಗೆ ಆಸರೆ ಆಗಬೇಕು ನಾವು ಇಂದಿನಿಂದಲೇ ಸೇವಾಕಾರ್ಯದಲ್ಲಿ ತೊಡಗೋಣ. ನಾವು ಮೂರು ಜನರಿಗೆ ಆಸರೆ ಆದರೆ ಅವರು ಮುಂದಕ್ಕೆ ಇನ್ನೂ ಮೂರು ಜನರಿಗೆ ಆಸರೆ ಆಗುತ್ತಾರೆ. ಸಂಘವನ್ನು ಒಂದು ಉತ್ತಮ ಧ್ಯೇಯ ದೊಂದಿಗೆ ಹುಟ್ಟು ಹಾಕಿದ ದಿ. ರಾಜಗೋಪಾಲ್ ರವರಿಗೆ ಹಾಗೂ ಸಂಘಕ್ಕೆ ಇದರಿಂದ ಒಳ್ಳೆಯ ಹೆಸರು ಬರುತ್ತದೆ ಎಂದು ತಾಲ್ಲೂಕು ಕನ್ನಡ ಕಲಾವಿದರ ಸಂಘದ ಅಧ್ಯಕ್ಷ ಡಾ.ಮೋಹನ್ ಬಾಬು ತಿಳಿಸಿದರು. ದೇವನಹಳ್ಳಿ ತಾಲ್ಲೂಕು ವಿಜಯಪುರ ಪಟ್ಟಣದ ಪುರಸಭಾ ಮಾಜಿ ಸದಸ್ಯ ಬಲಮುರಿ ಶ್ರೀನಿವಾಸ್ ಮೂರ್ತಿ ರವರ ಗೃಹದಲ್ಲಿ ದೇವನಹಳ್ಳಿ ತಾಲ್ಲೂಕು ಕನ್ನಡ ಕಲಾವಿಧರ ಸಂಘದ ವತಿಯಿಂದ 80 ನೇ ಮಾಸದ ಕನ್ನಡ ದೀಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಜಗಳ, ಯುದ್ಧ, ಮನಸ್ತಾಪದಿಂದ ಏನು ಸಾಧನೆ ಮಾಡಲು ಆಗುವುದಿಲ್ಲ. ಶಾಂತಿಯಿಂದ ಏನನ್ನು ಬೇಕಾದರು ಸಾಧಿಸಬಹುದು. ಭಗವತ್ ಗೀತೆಯಲ್ಲಿ ಕೃಷ್ಣ ಹೇಳಿರುವಂತೆ ಯಾವುದು ಶಾಶ್ವತವಲ್ಲ. ಆದ್ದರಿಂದ ಇರುವಷ್ಟು ದಿನ ಪುಣ್ಯ ಕಾರ್ಯ ಗಳನ್ನು ಮಾಡೋಣ. ಏಕ ಚಿತ್ತದಿಂದ ಭಗವಂತನನ್ನು ಸ್ಮರಿಸೋಣ ಎಂದು ತಿಳಿಸಿದರು.

ಕನ್ನಡ ಕಲಾವಿದರ ಸಂಘದ ಉದ್ದೇಶವೇನೆಂದರೆ ಕನ್ನಡ ಕಲಾ ಸೇವೆ ಮಾಡುತ್ತಿರುವ ಮಹನೀಯರನ್ನು ಗುರುತಿಸಿ ಅವರಿಗೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಕೊಡಿಸುವುದು ತಾಲ್ಲೂಕಿನ ಕಲಾವಿದರನ್ನು ಪ್ರತಿ ತಿಂಗಳು ಒಂದೆಡೆ ಸೇರಿಸಿ ಸಂಘದ ಆಗುಹೋಗುಗಳನ್ನು ಅರಿತು ಮುಂದಿನ ದಿನಗಳಲ್ಲಿ ಕೊರೋನಾ ಸಂಕಷ್ಟದಲ್ಲಿರುವ ಕಲಾವಿದರನ್ನು ಗುರುತಿಸಿ ಆರ್ಥಿಕ ಸಹಾಯ ಮಾಡುವುದು ಸಣ್ಣ ಪುಟ್ಟ ಆರ್ಕೆಸ್ಟ್ರಾ ಕಲವಿದರಿಗೆ ದಾನಿಗಳ ಮೂಲಕ ಸಹಾಯ ಮಾಡುವುದು ಸುತ್ತಮುತ್ತಲಿನ ತಾಲ್ಲೂಕಿಗೆ ಹೋಲಿಸಿದರೆ ನಮ್ಮ ತಾಲ್ಲೂಕಿನ ಸಂಘ ಸಕ್ರಿಯವಾಗಿ ಕೆಲಸ ಮಾಡುತ್ತಿದೆ ಎಂದು ಪುರಸಭಾ ಮಾಜಿ ಸದಸ್ಯ ಬಲಮುರಿ ಶ್ರೀನಿವಾಸಮೂರ್ತಿ ತಿಳಿಸಿದರು. ಈ ಸಂದರ್ಭದಲ್ಲಿ ರಂಗಭೂಮಿ ಕಲಾವಿದರಾಗಿ ಸೇವೆ ಸಲ್ಲಿಸಿರುವ ಕೋಡಿ ನರಸಿಂಹಮೂರ್ತಿ, ಪ್ರಸನ್ನಕುಮಾರ್ ನಾಯ್ಡು ಹಾಗೂ ಕೊರೊನಾ ಸಮಯದಲ್ಲಿ ಕೊರೊನಾ ವಾರಿಯರ್ ಆಗಿ ಸೇವೆ ಸಲ್ಲಿಸಿದ ನೀಲವೇಣಿ ಶಿವಯೋಗಿ ಸಲಾಗರ್ ರವರಿಗೆ ಸನ್ಮಾಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಚಂದ್ರಶೇಖರ್ ಹಡಪದ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಭ್ಯರ್ಥಿ ಕೃಷ್ಣಪ್ಪ ಮಾತನಾಡಿದರು. ಕಾರ್ಯಕ್ರಮದಲ್ಲಿ ದೇವನಹಳ್ಳಿ ತಾಲ್ಲೂಕು ಕನ್ನಡ ಕಲಾವಿದರ ಸಂಘದ ಉಪಾಧ್ಯಕ್ಷ ಸೀತಾರಾಮಯ್ಯ, ಪ್ರಧಾನ ಕಾರ್ಯದರ್ಶಿ ಗೋವಿಂದರಾಜು, ಸುಬ್ರಮಣಿ, ರಬ್ಬನಹಳ್ಳಿ ಕೆಂಪಣ್ಣ, ಕೇಶವಪ್ಪ, ಪುರಸಭಾ ಸದಸ್ಯ ಹನೀಫ್ ಹುಲ್ಲಾ, ಆರ್.ಮುನಿರಾಜು, ಅಶ್ವತ್ ಗೌಡ, ಬೈರೇಗೌಡ, ರಾಮಚಂದ್ರಪ್ಪ, ನಾರಾಯಣಪ್ಪ, ನರಸಿಂಹಮೂರ್ತಿ, ಕಲಾ ತಂಡದವರಾದ ಎಂ.ವಿ.ನಾಯ್ಡು, ನಾಗರಾಜ್, ಅಪ್ಪಿ ಮಹಾತ್ಮಾಂಜನೇಯ, ನರಸಿಂಹಪ್ಪ, ಸಂಘದ ಸದಸ್ಯರುಗಳು ಮತ್ತಿತರರು ಇದ್ದರು.

Leave a Comment

Your email address will not be published. Required fields are marked *

Translate »
Scroll to Top