1 k.g ಪ್ಲಾಸ್ಟಿಕ್ ಕೊಟ್ಟರೆ 1 k.g. ಅಕ್ಕಿ ಅಥವಾ ಸಕ್ಕರೆ ಪಡೆಯಬಹುದು ಪುರಸಭೆ ಮುಖ್ಯಾಧಿಕಾರಿ

ಕುಷ್ಟಗಿ:- ಪ್ಲಾಸ್ಟಿಕ್ ಮುಕ್ತ ಪಟ್ಟಣಕ್ಕಾಗಿ ಜಿಲ್ಲಾಧಿಕಾರಿಗಳ ಆದೇಶದ ಮೇರಿಗೆ ಗಾಂಧಿ ಜಯಂತಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿ ಜಯಂತಿ ಅಂಗವಾಗಿ ಅಕ್ಟೋಬರ್ 2 ರಿಂದ ಅಕ್ಟೋಬರ್ 31ರ ವರಗೆ ಕುಷ್ಟಗಿ ಪಟ್ಟಣವನ್ನು ಪ್ಲಾಸ್ಟಿಕ್ ಮುಕ್ತ ಮಾಡಲು ಪಣ ತೊಡಲಾಗಿದೆ. ಆದ್ದರಿಂದ ಈಗಾಗಲೇ ಗಾಂಧಿ ಜಯಂತಿಯಂದು ಗಾಂಧಿ ಪ್ರತೀಮೆಗೆ ಪೂಜೆ ಸಲ್ಲಿಸಿ ಗಾಂಧಿ ನಗರದಲ್ಲಿ ಪ್ಲಾಸ್ಟಿಕ್ ಮುಕ್ತಕ್ಕಾಗಿ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂ ಇವರಿಂದ ಚಾಲನೆ ನೀಡಲಾಗಿದ್ದು ಆದ್ದರಿಂದ ಪಟ್ಟಣದ ಸಾರ್ವಜನಿಕರು ಸಹಕರಿಸಿ ಈ ಯೋಜನೆಯ ಲಾಭ ಪಡೆಯಬಹುದಾಗಿದೆ.


ಈಗಾಗಲೇ ಪ್ಲಾಸ್ಟಿಕ್ ಮುಕ್ತ ಮಾಡಲು ಪಟ್ಟಣದ 10 ಕಡೆಗಳಲ್ಲಿ ಪುರಸಭೆ ವತಿಯಿಂದ ಕೇಂದ್ರಗಳನ್ನು ತೆರೆಯಲಾಗಿದೆ.
ಅಂಬೇಡ್ಕರ್ ನಗರ, ಕನಕದಾಸ ವೃತ್ತ, ದ್ಯಾಮವ್ವನ ಗುಡಿ ಹತ್ತಿರ, ಉರ್ದು ಶಾಲೆ, ಮದ್ದಾನಿಸ್ವಾಮಿ ಮಠದ ಹತ್ತಿರ, ಹನಮಂತ ದೇವರ ಗುಡಿ, ಬುತ್ತಿ ಬಸವೇಶ್ವರ ದೇವಸ್ಥಾನ, ವಾಹಿದ್ ಮನೆ ಹತ್ತಿರ, ಮದೀನಾಗಲಿ ಸೇರಿದಂತೆ ಒಟ್ಟು 10 ಕಡೆಗಳಲ್ಲಿ ಸಾರ್ವಜನಿಕರು ತಮ್ಮ ಪ್ಲಾಸ್ಟಿಕ್ ತಂದು ಇಲ್ಲಿ ಕೊಟ್ಟರೆ 1 k.g ಅಕ್ಕಿ ಅಥವಾ ಸಕ್ಕರೆ ಪಡೆಯಬಹುದು ಈ ಒಂದು ಯೋಜನೆಯನ್ನು ಯಾರಾದರೂ ಪಡೆಯ ಬಹುದು ಒಟ್ಟಾರೆಯಾಗಿ ಕುಷ್ಟಗಿ ಪಟ್ಟಣದ ಜನತೆ ಪ್ಲಾಸ್ಟಿಕ್ ಮುಕ್ತ ನಗರಕ್ಕಾಗಿ ಸಹಕರಿಸಬೇಕಾಗಿದೆ ಎಂದು ತಿಳಿಸಿದರು.

Leave a Comment

Your email address will not be published. Required fields are marked *

Translate »
Scroll to Top