ಸದಾಶಿವ ಆಯೋಗ ವರದಿ ರದ್ದಿಗೆ ಒತ್ತಾಯಿಸಿ ಪ್ರತಿಭಟನೆ

ಮಸ್ಕಿ.: -ನ್ಯಾಯಮೂರ್ತಿ ಎಜೆ ಸದಾಶಿವ ಆಯೋಗದ ವರದಿಯನ್ನು ಏಕಪಕ್ಷೀಯವಾಗಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬಾರದೆಂದು ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದ ವತಿಯಿಂದ ಪ್ರತಿಭಟನೆ ಮಾಡಲಾಯಿತು. ಇಂದು ಪಟ್ಟಣದ ಭ್ರಮರಂಭ ದೇವಸ್ಥಾನ ದಿಂದ ಕನಕ ವೃತ್ತ, ವಾಲ್ಮೀಕಿ ವೃತ್ತ, ಬಸವೇಶ್ವರ ವೃತ್ತ ರಸ್ತೆಗಳ ಮುಖಾಂತರ ತಹಶಿಲ್ದಾರರ ಕಚೇರಿ ವರಿಗೆ ಪ್ರತಿಭಟನೆ ಮುಖಂತರಾ ತೆರಳಿ ಮಸ್ಕಿ ತಹಸೀಲ್ದಾರ ಅವರ ಮುಖಂತರಾ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದ ಮುಖಂಡ ರವಿಕುಮಾರ್ ಚಿಗರಿ‌ ಮಾತನಾಡಿ ಭಾರತ ಸಂವಿಧಾನದ ಮೂಲ ಆಶಯವಾಗಿರುವ ಸಾಮಾಜಿಕ ನ್ಯಾಯ ಮತ್ತು ಮೀಸಲಾತಿ ಸಂರಕ್ಷಣಾದಡಿ ಭೋವಿ, ಬಂಜಾರಾ, ಲಂಬಾಣಿ, ಕೊರವ, ಕೊರಚ ಇತ್ಯಾದಿ ಅಲೆಮಾರಿ ಜನಾಂಗದ ಏಳಿಗೆಗಾಗಿ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ತಿರಸ್ಕರಿಸಬೇಕಾಗಿದೆ. ಪರಿಶಿಷ್ಟ ಜಾತಿಗಳ ಬಗ್ಗೆ ಮನಸ್ಥಾಪಗಳನ್ನು ಬಿತ್ತುವ ಹಾಗೂ ದಾರ್ಶನಿಕರು ಮತ್ತು ಸಮುದಾಯದ ನಾಯಕರನ್ನು ಅವಹೇಳನ ಮಾಡುವ ಹೀನ ಕೆಲಸಗಳನ್ನು ಕಾಣದ ಕೈಗಳು ಮಾಡುತ್ತಿದ್ದಾರೆಂದು ಆರೋಪಿಸಿದರು.ಧಮನಿತ ಜಾತಿಗಳಾಗಿರುವ ಈ ನಾಲ್ಕು ಸಮುದಾಯಗಳನ್ನು ಸೇರಿಸಿ ಪರಿಶಿಷ್ಟ ಪಟ್ಟಿಯನ್ನು ಅನುಮೋದಿಸಿ ನೋಟಿಫಿಕೇಶನ್ ಮಾಡಲಾಗಿತ್ತು. ಡಾ.ಬಿ.ಆರ್.ಅಂಬೇಡ್ಕರ್ ಸೇರಿದಂತೆ ದೇಶದ ಎಲ್ಲಾ ತಜ್ಞರು ಅನುಮೋದನೆ ಮಾಡಿದ್ದರು. ಮೊದಲಿಗೆ ಬೆರಳಣಿಕೆಯಷ್ಟಿದ್ದ ಈ ಪರಿಶಿಷ್ಟ ಜಾತಿಗಳ ಪಟ್ಟಿ ರಾಜ್ಯದ ಏಕೀಕರಣ ಪ್ರದೇಶದ ಮಿತಿಯ ಸಡಲಿಕೆ ಮತ್ತು ಸಮಾನಾಂತರ ಪದಗಳ ಸೇರ್ಪಡೆಯಿಂದಾಗಿ ಇಂದು ೧೦೧ಕ್ಕೆ ಏರಿರುವುದು ಸತ್ಯವಾಗಿದ್ದು ನಿರಂತರವಾಗಿ ಅಪಮಾನ ಮತ್ತು ಅವಕಾಶಗಳಿಂದ ವಂಚಿತರಾಗಿರುವ ಈ ಜಾತಿಗಳು ಭಾರತ ಸಂವಿಧಾನ, ಮೀಸಲಾತಿ ಮತ್ತು ಸರ್ಕಾರಗಳ ಕೆಲ ಜನಮುಖಿ ಕಾರ್ಯಕ್ರಮಗಳಿಂದಾಗಿ ಅಭಿವೃದ್ಧಿಯತ್ತ ಪ್ರಯತ್ನಿಸುತ್ತಿವೆ.

ಈ ಮಧ್ಯೆ ನ್ಯಾಯಮೂರ್ತಿ ಎಜೆ ಸದಾಶಿವ ಆಯೋಗದ ವರದಿಯನ್ನು ಮುಂದೆ ಇಟ್ಟುಕೊಂಡು ಪರಿಶಿಷ್ಟ ಸಮುದಾಯವನ್ನು ಛಿದ್ರಗೊಳಿಸುವ ಮತ್ತು ಅವುಗಳಲ್ಲಿ ಪರಸ್ಪರ ದ್ವೇಷ ಬಿತ್ತುವ ಕೆಲಸವನ್ನು ಮಾಡಲಾಗುತ್ತಿದೆ. ಈ ವರದಿಯನ್ನು ಏಕಪಕ್ಷೀಯವಾಗಿ ಕೇಂದ್ರಕ್ಕೆ ಶಿಫಾರಸ್ಸು ಮಾಡಬಾರದು. ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಎ.ನಾರಾಯಣಸ್ವಾಮಿಯವರನ್ನು ಸಚಿವ ಸಂಪುಟದಿಂದ ಕೈಬಿಡಬೇಕು ಹಾಗೂ ನಾಲ್ಕು ಬೇಡಿಕೆಗಳನ್ನು ಈಡೇರಿಸಬೇಕು ಎಂದು ರವಿಕುಮಾರ್ ಚಿಗರಿ‌ ಒತ್ತಾಯಿಸಿದರು. ತಾಲ್ಲೂಕು ಭೋವಿ ಸಮಾಜದ ಅಧ್ಯಕ್ಷ ದುರುಗಪ್ಪ ಚಿಗರಿ, ನೀಲಕಂಠಪ್ಪ ಭಜಂತ್ರಿ, ಮುಖಂಡರಾದ ಮಲ್ಲಯ್ಯ ಗುಡಿಸಲಿ, ವೀರೇಶ್ ಆನೆಹೊಸೂರು, ಆನಂದ ಬನಗಲ್, ಮಲ್ಲಯ್ಯ ನಾಗರಾಳ , ಯಲ್ಲಪ್ಪ ತುರ್ವಿಹಾಳ, ಮಲ್ಲಯ್ಯ ಭಜಂತ್ರಿ ವಸಂತ್ ಭಜಂತ್ರಿ ದೇವಣ್ಣ ಜಾಧವ್, ಲೋಕೇಶ್ ಜಾಧವ್, ಅಂಬಣ್ಣ ಭೋವಿ, ಶಿವಪ್ಪ ಬಸಾಪೂರ, ಸೀತಾರಾಮ್ ,ಹಾಗೂ ವಿವಿಧ ಸಮಾಜದ ಮುಖಂಡರು ಭಾಗವಹಿಸಿದ್ದರು.

Leave a Comment

Your email address will not be published. Required fields are marked *

Translate »
Scroll to Top