ಜಿಲ್ಲೆಗಳು

ಪಕ್ಷೇತರ ಅಭ್ಯರ್ಥಿಯಾಗಿ ಸಿ.ಎಂ.ಮಂಜುನಾಥ

ಬಳ್ಳಾರಿ : ಕರ್ನಾಟಕ ವಿಧಾನಪರಿಷತ್ ಬಳ್ಳಾರಿ ಸ್ಥಳೀಯ ಸಂಸ್ಥೆಗಳ ಸ್ಥಾನಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಸಿ.ಎಂ.ಮಂಜುನಾಥ ಅವರು ಚುನಾವಣಾಧಿಕಾರಿ ಪವನಕುಮಾರ್ ಮಾಲಪಾಟಿ ಅವರಿಗೆ ನಾಮಪತ್ರ ಸಲ್ಲಿಸಿದರು.

ಕರ್ನಾಟಕ ವಿಧಾನಪರಿಷತ್ ಬಳ್ಳಾರಿ

ಬಳ್ಳಾರಿ : ಕರ್ನಾಟಕ ವಿಧಾನಪರಿಷತ್ ಬಳ್ಳಾರಿ ಸ್ಥಳೀಯ ಸಂಸ್ಥೆಗಳ ಸ್ಥಾನಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ವೈ.ಎಂ.ಸತೀಶ‌ ಅವರು ಚುನಾವಣಾಧಿಕಾರಿ ಪವನಕುಮಾರ್ ಮಾಲಪಾಟಿ ಅವರಿಗೆ ನಾಮಪತ್ರ ಸಲ್ಲಿಸಿದರು. ಸಚಿವರಾದ ಬಿ.ಶ್ರೀರಾಮುಲು,ಆನಂದಸಿಂಗ್, ಶಾಸಕರಾದ ಸೋಮಶೇಖರ್ ರೆಡ್ಡಿ,ಸೋಮಲಿಂಗಪ್ಪ ಇದ್ದರು.

ದುರಗಪ್ಪ ಚೂರಿ ಇವರ ಮನೆಯಲ್ಲಿ ಕನಕದಾಸ ಜಯಂತಿ ಕಾರ್ಯಕ್ರಮಕ್ಕೆ ಶುಭ ಆರೈಸಿದ ಹೃದಯವಂತ ಮಾಜಿ ಶಾಸಕ

ಕುಷ್ಟಗಿ:- ಕೊಪ್ಪಳ ಜಿಲ್ಲೆ ಕುಷ್ಟಗಿ ಪಟ್ಟಣದ ವಾರ್ಡ ನಂಬರ ೨೦ರ ಡಂಬರ ಓಣಿಯ ದುರಗಪ್ಪ ಸತ್ಯಪ್ಪ ಚೂರಿ ಇವರ ಮನೆಯಲ್ಲಿ ಭಕ್ತ ಶ್ರೇಷ್ಠ ಕನಕದಾಸರ ೫೩೪ನೇ ಜಯಂತಿ ಪೂಜೆ ಕಾರ್ಯಕ್ರಮ ನೆರೆವರೆಯಿತು.ಈ ಸಂದರ್ಭದಲ್ಲಿ ಮಾಜಿ ಶಾಸಕ ಹಾಗೂ ಕೊಪ್ಪಳ ಜಿಲ್ಲೆ ಬಿಜೆಪಿ ಪಕ್ಷದ ಅಧ್ಯಕ್ಷರಾದ ದೊಡ್ಡನಗೌಡ ಪಾಟೀಲ, ಕುರಿ ಮತ್ತು ಉಣ್ಣೆ ನಿಗಮದ ರಾಜ್ಯಾಧ್ಯಕ್ಷರಾದ ಶರಣು ತಳ್ಳಿಕೇರಿ, ಕುಷ್ಟಗಿ ತಾಲೂಕು ಹಾಲುಮತ ಸಮಾಜದ ಅಧ್ಯಕ್ಷರಾದ ಮಲ್ಲಣ್ಣ ಪಲ್ಲೇದ್, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಎ.ಪಿ.ಎಂ.ಸಿ ಕುಷ್ಟಗಿ ಉಪಾಧ್ಯಕ್ಷೆ …

ದುರಗಪ್ಪ ಚೂರಿ ಇವರ ಮನೆಯಲ್ಲಿ ಕನಕದಾಸ ಜಯಂತಿ ಕಾರ್ಯಕ್ರಮಕ್ಕೆ ಶುಭ ಆರೈಸಿದ ಹೃದಯವಂತ ಮಾಜಿ ಶಾಸಕ Read More »

ಭಕ್ತ ಕನಕದಾಸ ಅವರ ಜಯಂತಿ

ಕುಷ್ಟಗಿ : ಗೃಹ ರಕ್ಷಕದಳದ ಕಛೇರಿಯಲ್ಲಿ ಭಕ್ತ ಕನಕದಾಸ ಅವರ ಜಯಂತಿಯನ್ನು ಆಚರಿಸಲಾಯಿತು. ಆರಂಭದಲ್ಲಿ ಕನಕದಾಸ ಬಾವಚಿತ್ರಕ್ಕೆ ಪೂಜೆ ಸಲ್ಲಿಸಿ ನಂತರ ಮಾತನಾಡಿದ ಸೀನಿಯರ್ ಪ್ಲಟೂನ ಕಮಾಂಡರ್ ರವಿಂದ್ರ ಬಾಕಳೆ ಅವರು ಕನಕದಾಸರ ತತ್ವ ಆದರ್ಶಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಜಯಂತಿಯನ್ನು ಆಚರಣೆಗೆ ಸಾರ್ಥಕವಾಗುವದು ಎಂದು ಹೇಳಿದರು. ಪ್ಲಟೂನ ಕಮಾಂಡರ್ ನಾಗರಾಜ ಬಡಿಗೇರೆ. ಘಟಕಾಧಿಕಾರಿ ಶಿವಪ್ಪ ಚೂರಿ ಮಾತನಾಡಿ ಕನಕದಾಸ ಜಯಂತಿಯ ಶುಭಾಶಯ ಕೋರಿದರು. ಈ ಸಂಧರ್ಭದಲ್ಲಿ ‌ಗೃಹರಕ್ಷಕದಳ ಸಿಬ್ಬಂದಿ ಉಪಸ್ಥಿತರಿದ್ದರು.

ಜೀವನಕ್ಕೆ ಕಣ್ಣುಗಳು ಬಹಳ ಮುಖ್ಯ

ಮರಿಯಮ್ಮನಹಳ್ಳಿ: ಜೀವನ ಸಾಗಿಸುವುದಕ್ಕೆ ಪ್ರತಿಯೊಬ್ಬ ಮನುಷ್ಯನಿಗೆ ಎರಡೂ ಕಣ್ಣುಗಳು ಬಹಳ ಮುಖ್ಯ ಅವುಗಳನ್ನು ಬಹಳ ಜೋಪಾನವಾಗಿ ನೋಡಿಕೊಳ್ಳಬೇಕೆಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ, ಜಾನಪದ ಅಕಾಡೆಮಿ ಅಧ್ಯಕ್ಷೆ, ಕಲಾವಿದೆ ಮಾತಾ ಮಂಜಮ್ಮ ಜೋಗ್ತಿ ಹೇಳಿದರು.ಅವರು ಪಟ್ಟಣ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಮತ್ತು ಹೊಸಪೇಟೆಯ ಐ ದೃಷ್ಟಿ ಕಣ್ಣಿನ ಆಸ್ಪತ್ರೆಯ ಸಹಯೋಗದಿಂದ ಹಮ್ಮಿಕೊಂಡಿದ್ದ ಉಚಿತ ನೇತ್ರ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿದರು. ಪ್ರತಿಯೊಬ್ಬರು ಆರೋಗ್ಯವಂತರಾಗಿ ಬದುಕುವುದಕ್ಕೆ ಮತ್ತು ಈ ಸುಂದರ …

ಜೀವನಕ್ಕೆ ಕಣ್ಣುಗಳು ಬಹಳ ಮುಖ್ಯ Read More »

ಕ್ಯಾಂಟರ್ ಗಾಡಿ ಪಲ್ಟಿ

ಮರಿಯಮ್ಮನಹಳ್ಳಿ: ಪಟ್ಟಣ ಸಮೀಪದ ರಾಷ್ಟ್ರೀಯ ಹೆದ್ದಾರಿ 50ರ ಗಾಳೆಮ್ಮನಗುಡಿ ಹತ್ತಿರ ಕ್ಯಾಂಟರ್ ಗಾಡಿ ಪಲ್ಟಿಯಾದ ಘಟನೆ ನಡೆದಿದೆ. ಭಾನುವಾರ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಪಲ್ಟಿಯಾಗಿದೆ. ಹೊಸಪೇಟೆ ಕಡೆಯಿಂದ ಹಗರಿಬೊಮ್ಮನಹಳ್ಳಿಯ ಕಡೆಗೆ ಹೊರಟಿತ್ತು ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಲಾರಿ ಉರುಳಿ ಬಿದ್ದಿದೆ. ಅದೃಷ್ಟ ವಶ ಯಾರಿಗೂ ಪ್ರಾಣಪಾಯ ಸಂಭವಿಸಿಲ್ಲ, ಲಾರಿ‌ ಚಾಲಕನಿಗೆ ಸಣ್ಣಪುಟ್ಟ‌‌ಗಾಯಗಳಾಗಿವೆ. ಸ್ಥಳಕ್ಕೆ ಪಟ್ಟಣ ಪಿ.ಎಸ್.ಐ.ಹನುಮಂತಪ್ಪ ತಳವಾರ್ ಮತ್ತು ಸಿಬ್ಬಂದಿ ಭೇಟಿ‌ ನೀಡಿ ಪರಿಶೀಲನೆ ನಡೆಸಿದರು.

ಸಾಹಿತ್ಯ, ಕಲೆಗಳ ಎಲ್ಲಾ ಪ್ರಾಕಾರಗಳಿಗೆ ಕರ್ನಾಟಕವೇ ತವರುಭೂಮಿ

ದೇವನಹಳ್ಳಿ: ಜಗತ್ತಿನ ಮತ್ತೆಲ್ಲಾ ಭಾಷೆಯ ಕವಿಗಳೊಡನೆ ಸರಿಸಮಾನವಾಗಿ ನಿಲ್ಲಬಲ್ಲಂತಹ ಕವಿಶ್ರೇಷ್ಟರು ಪ್ರಾಚೀನ ಕಾಲದಿಂದಲೂ ಕನ್ನಡದಲ್ಲಿದ್ದು, ಕನ್ನಡ ಸಾಹಿತ್ಯವನ್ನು ಯುವಪೀಳಿಗೆಯು ಅಧ್ಯಯನ ಮಾಡಬೇಕಿದೆ. ಕನ್ನಡದ ನೆಲ-ಜಲ, ಭಾಷೆ, ಸಾಹಿತ್ಯಕ್ಕೆ ಯಾವುದೇ ಧಕ್ಕೆಯಾದರೂ ಕನ್ನಡಿಗರೆಲ್ಲಾ ಒಗ್ಗೂಡಬೇಕು. ಶಿಲ್ಪಕಲೆ, ರಂಗಕಲೆ, ಚಿತ್ರಕಲೆಯಂತಹ ವಿವಿಧ ಪ್ರಾಕಾರಗಳಿಗೆ ಕರ್ನಾಟಕವೇ ತವರುಭೂಮಿ ಎಂದು ಶಿಕ್ಷಣತಜ್ಞ, ಸಾಹಿತಿ ಎಚ್.ಎಸ್.ರುದ್ರೇಶಮೂರ್ತಿ ಅಭಿಪ್ರಾಯಪಟ್ಟರು. ದೇವನಹಳ್ಳಿ ತಾಲ್ಲೂಕು ವಿಜಯಪುರ ಪಟ್ಟಣದ ಗಾಂಧಿಚೌಕದ ಅಯೋಧ್ಯಾನಗರ ಶಿವಾಚಾರ ವೈಶ್ಯ ನಗರ್ತ ಮಹಂತಿನಮಠ ಸಭಾಂಗಣದಲ್ಲಿ ನಗರ್ತಮಹಿಳಾ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ, ಮಕ್ಕಳದಿನಾಚರಣೆ, ಪ್ರತಿಭಾಪುರಸ್ಕಾರ …

ಸಾಹಿತ್ಯ, ಕಲೆಗಳ ಎಲ್ಲಾ ಪ್ರಾಕಾರಗಳಿಗೆ ಕರ್ನಾಟಕವೇ ತವರುಭೂಮಿ Read More »

ಮಳೆಗೆ ತೊಗರಿ ಬೆಳೆ ನಾಶ ಹೊಲಕ್ಕೆ ಬೇಟಿ ನೀಡಿದ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ

ಕುಷ್ಟಗಿ : ತಾಲೂಕಿನಲ್ಲಿ ಹುಲುಸಾಗಿ ಬೆಳೆದ ಮುಂಗಾರು ಹಂಗಾಮಿನ ತೊಗರಿ ಬೆಳೆ ರೈತರು ಕೊಯ್ಲು ಮಾಡಿ ಬೆಳೆಗಳು ಕೈಗೆ ಬರುವ ಹಂತದಲ್ಲಿ ಇತ್ತು ಆದರೆ ಕೈಗೆ ಬಂತು ತುತ್ತು ಬಾಯಿಗೆ ಬರದಂತೆ ಮಳೆರಾಯನ ಆರ್ಭಟಕ್ಕೆ ಬಂಗಾಳಕೊಳ್ಳಿಯಲ್ಲಿ ವಾಯುಭಾರ ಕುಸಿತವಾದ ಹಿನ್ನಲೆ ನಿರಂತರ ಸುರಿದ ಮಳೆಗೆ ತೊಗರಿ ಬೆಳೆ ಮತ್ತು ಕಡಲೆ ಬೆಳೆ ಸಂಪೂರ್ಣ ಹಾಳಾಗಿ ಹೋಗಿದ್ದರಿಂದ ಕುಷ್ಟಗಿ ತಾಲೂಕಿನ ತಳುಗೇರಿ ಗ್ರಾಮದ ತೊಗರಿ ಹೊಲಕ್ಕೆ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಭೇಟಿ ನೀಡಿ ಮಳೆಗೆ ನೆಂದ ತೊಗರಿ …

ಮಳೆಗೆ ತೊಗರಿ ಬೆಳೆ ನಾಶ ಹೊಲಕ್ಕೆ ಬೇಟಿ ನೀಡಿದ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ Read More »

ಅಕಾಲಿಕ ಮಳೆಯಿಂದಾಗಿ ನಷ್ಟವಾದ ಬೆಳೆ ವಿಕ್ಷೇಣೆ ಮಾಡಿದ ತಹಶೀಲ್ದಾರ ಎಂ.ಸಿದ್ದೇಶ

ಕುಷ್ಟಗಿ:- ತಾಲೂಕಿನ ತಾವರಗೇರಾ ಹೋಬಳಿಯ ವಿವಿಧ ಗ್ರಾಮಗಳ ರೈತರ ಹೊಲಗಳಿಗೆ ತಹಶೀಲ್ದಾರರು ಎಂ.ಸಿದ್ದೇಶ ಹಾಗೂ ಕೃಷಿ ಅಧಿಕಾರಿಗಳು ಭೇಟಿ ನೀಡಿ ತೊಗರಿ ಹಾಗೂ ಇತರ ಬೆಳೆಗಳ ಹಾನಿ ಕುರಿತು ಪರಶೀಲನೆ ನೆಡೆಸಿದರು.ಈ ಸಂದರ್ಭದಲ್ಲಿ ಕಂದಾಯ ನಿರೀಕ್ಷಕರು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ಹಾಜರಿದ್ದರು.

ಗೌರಿ ಹುಣ್ಣಿಮೆ ಆಚರಣೆ

ಕುಷ್ಟಗಿ:- ಗೌರಿ ಹುಣ್ಣಿಮೆ ನಿಮಿತ್ಯ ಅತ್ಯಂತ ಸಡಗರ ಸಂಭ್ರಮದಿಂದ ಗೌರಮ್ಮನಿಗೆ ಆರತಿ ಬೆಳಗಿ ಗೌರಿ ಹುಣ್ಣಿಮೆ ಆಚರಣೆ ಮಾಡಿದ ವಿದ್ಯಾರ್ಥಿನಿಯರು. ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಹನಮಸಾಗರ ಗ್ರಾಮದ ಕಸ್ತೂರಿಬಾ ಗಾಂಧಿ ಬಾಲಿಕಾ ಸನಿವಾಸ ವಿದ್ಯಾಲಯ ಹನಮಸಾಗರ ವಿದ್ಯಾರ್ಥಿನಿಯರು ಬಣ್ಣ ಬಣ್ಣದ ಹೊಸ ಸಿರಿ ಉಡುಪುಗಳನ್ನು ತೊಟ್ಟು ಬಣ್ಣದ ಬಣ್ಣದ ಗೌರಮ್ಮನಿಗೆ ಸಕ್ಕರೆ ಆರತಿ ಬೆಳೆಗಿ ಗೌರಿ ಹುಣ್ಣುಮೆ ಆಚರಣೆ ಮಾಡಿದರು. ಈ ಸಂದರ್ಭದಲ್ಲಿ ‌ಶಾಲಾ ಶಿಕ್ಷಕರು, ಮುಖ್ಯೋಪಾಧ್ಯಾಯರು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Translate »
Scroll to Top