ಮರಿಯಮ್ಮನಹಳ್ಳಿ: ಜೀವನ ಸಾಗಿಸುವುದಕ್ಕೆ ಪ್ರತಿಯೊಬ್ಬ ಮನುಷ್ಯನಿಗೆ ಎರಡೂ ಕಣ್ಣುಗಳು ಬಹಳ ಮುಖ್ಯ ಅವುಗಳನ್ನು ಬಹಳ ಜೋಪಾನವಾಗಿ ನೋಡಿಕೊಳ್ಳಬೇಕೆಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ, ಜಾನಪದ ಅಕಾಡೆಮಿ ಅಧ್ಯಕ್ಷೆ, ಕಲಾವಿದೆ ಮಾತಾ ಮಂಜಮ್ಮ ಜೋಗ್ತಿ ಹೇಳಿದರು.ಅವರು ಪಟ್ಟಣ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಮತ್ತು ಹೊಸಪೇಟೆಯ ಐ ದೃಷ್ಟಿ ಕಣ್ಣಿನ ಆಸ್ಪತ್ರೆಯ ಸಹಯೋಗದಿಂದ ಹಮ್ಮಿಕೊಂಡಿದ್ದ ಉಚಿತ ನೇತ್ರ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಪ್ರತಿಯೊಬ್ಬರು ಆರೋಗ್ಯವಂತರಾಗಿ ಬದುಕುವುದಕ್ಕೆ ಮತ್ತು ಈ ಸುಂದರ ಪ್ರಪಂಚವನ್ನು ನೋಡುವುದಕ್ಕೆ ಎರಡು ಕಣ್ಣುಗಳು ಅತ್ಯವಶ್ಯಕ ಹಾಗಾಗಿ ಎಲ್ಲಾರು ತಮ್ಮ ಕಣ್ಣುಗಳನ್ನ ಆರೋಗ್ಯವಂತಿಕೆಯಿಂದ ಇಟ್ಟುಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಸ್ಥಳೀಯ ವೈದ್ಯಾಧಿಕಾರಿ ಡಾ. ಮಂಜುಳಾ, ವರ್ತಕರಾದ ಡಿ. ರಾಘವೇಂದ್ರ ಶೆಟ್ಟಿ, ಡಣಾಯಕನಕೆರೆ ಗ್ರಾಪಂ ಸದಸ್ಯ ಗುಂಡಾಸ್ವಾಮಿ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ತಾಲೂಕು ಯೋಜನಾಧಿಕಾರಿ ಎನ್. ರಾಘವೇಂದ್ರ, ಮೇಲ್ವಿಚಾರಕರಾದ ಗೌರಮ್ಮ ಹಿರೇಮಠ, ಅಂಜನಾ, ಆಸ್ಪತ್ರೆಯ ಸಿಬ್ಬಂದಿ ಡಿ.ಬಿ. ತಳವಾರ್, ಮಲ್ಲೇಶ್ ಸೇರಿದಂತೆ ಇತರರು ಸಭೆಯಲ್ಲಿ ಉಪಸ್ಥಿತರಿದ್ದರು.