ರಾಷ್ಟ್ರೀಯ

ವಿಶ್ವ ಆರ್ಥಿಕ ಶೃಂಗ ಸಭೆಯಲ್ಲಿ ಸಿಎಂ ಭಾಗಿ

ದಾವೋಸ್ ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ಶೃಂಗ ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಎ ಬಿ ಇನ್ ಬೇವ್ ಸಂಸ್ಥೆಯ ನಿಯಂತ್ರಣ ಮತ್ತು ಸಾರ್ವಜನಿಕ ನೀತಿ ಜಾಗತಿಕ ಉಪಾಧ್ಯಕ್ಷ ಆಂಡ್ರೆಸ್ ಪೆನಾತೆ ಅವರೊಂದಿಗೆ ಕರ್ನಾಟಕದಲ್ಲಿ ಹೂಡಿಕೆಗೆ ಸಂಬಂಧಿಸಿದಂತೆ ಚರ್ಚಿಸಿದರು. ರಾಜ್ಯ ಸರ್ಕಾರ ಉದ್ಯಮ ಸ್ಥಾಪನೆಗೆ ಸಂಬಂಧಿಸಿದಂತೆ ನೀಡುತ್ತಿರುವ ವಿಶೇಷ ಸವಲತ್ತುಗಳು ಹಾಗೂ ರಿಯಾಯಿತಿಗಳ ಬಗ್ಗೆ ವಿವರಿಸಿದರು.

ರಾಜ್ಯಕ್ಕೆ ರಸಗೊಬ್ಬ ಕೊರತೆ ಇಲ್ಲವೆಂದು ಕೇಂದ್ರ ಸಚಿವರ ಭರವಸೆ

ನವದೆಹಲಿ: ಕರ್ನಾಟಕಕ್ಕೆ ಯೂರಿಯಾ ಮತ್ತು ಡಿಎಪಿ ಕೊರತೆಯಾಗುವುದಿಲ್ಲ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಮನ್ಸುಖ ಮಾಂಡವಿಯ ಅವರು ಆಶ್ವಾಸನೆ ನೀಡಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ನವದೆಹಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು. ನಿನ್ನೆ ಕೇಂದ್ರ ರಸಗೊಬ್ಬರ ಖಾತೆ ಸಚಿವ ಮನ್ಸುಖ್ ಮಾಂಡವೀಯ ಅವರನ್ನು ಭೇಟಿಯಾಗಿ ರಾಜ್ಯಕ್ಕೆ ಬೇಕಿರುವ ಗೊಬ್ಬರದ ಬಗ್ಗೆ ಚರ್ಚೆ ಮಾಡಲಾಯಿತು. ನಮಗೆ ಮುಂಗಾರಿನಲ್ಲಿ ಡಿಎಪಿ ಮತ್ತು ಯೂರಿಯಾ ಅಗತ್ಯವೂ ಇದೆ ಎಂದು ತಿಳಿಸಲಾಗಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಮೋನಿಯಾ ಮತ್ತು …

ರಾಜ್ಯಕ್ಕೆ ರಸಗೊಬ್ಬ ಕೊರತೆ ಇಲ್ಲವೆಂದು ಕೇಂದ್ರ ಸಚಿವರ ಭರವಸೆ Read More »

ಗಲಭೆಕೋರರ ನೆರವಿಗೆ ನಿಲ್ಲುವುದು ಕಾಂಗ್ರೆಸ್ ನಿಲುವು ಸಿಎಂ

ನವದೆಹಲಿ: ಹುಬ್ಬಳ್ಳಿ ಗಲಭೆ ಪ್ರಕಾರದಲ್ಲಿ ಬಂಧಿತರ ನೆರವಿಗೆ ಧಾವಿಸಿರುವುದು ಶಾಸಕಾಂಜಮೀರ್ ಅಹಮದ್ ಹಾಗೂ ಅವರ ಪಕ್ಷದ ನಿಲುವು. ಗಲಭೆ ಮಾಡಿದವ ಜೊತೆ ನಿಲ್ಲುವ ಕೆಲಸವನ್ನು ಮೊದಲಿನಿಂದಲೂ ಮಾಡಿಕೊಂಡೇ ಬಂದಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ ನವದೆಹಲಿಗೆ ಆಗಮಿಸಿ ಕರ್ನಾಟಕ ಭವನದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ಹುಬ್ಬಳ್ಳಿ ಪ್ರಕರಣದಲ್ಲಿ ಶಾಸಕ ಜಮೀರ್ ಅಹಮದ್ ಖಾನ್ ಅವರು ಬಂಧಿತರ ನೆರವಿಗೆ ಧಾವಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಇದು ಮೊದಲ ಬಾರಿ ಏನಲ್ಲ.ಡಿಜೆ ಹಳ್ಳಿ ಕೆಜೆ ಹಳ್ಳಿ ಪ್ರಕರಣದಲ್ಲಿಯೂ ಅದನ್ನೇ …

ಗಲಭೆಕೋರರ ನೆರವಿಗೆ ನಿಲ್ಲುವುದು ಕಾಂಗ್ರೆಸ್ ನಿಲುವು ಸಿಎಂ Read More »

ಏ ಮೇರೆ ವತನ್ ಕೆ ಲೋಗೋ…’ ಗೀತೆ ಕೇಳಿ ಕಣ್ಣೀರು ಹಾಕಿದ್ದ ನೆಹರೂ

ದೇಶದ ಪ್ರಖ್ಯಾತ ಹಾಡುಗಾರ್ತಿ ಗಾನಕೋಗಿಲೆ ಲತಾ ಮಂಗೇಶ್ವರ್ ಅವರು ಹಾಡಿದ್ದ ‘ಏ ಮೇರೆ ವತನ್ ಕೆ ಲೋಗೋ’ ಹಾಡು ದೇಶವಾಸಿಗಳ ಮನದಲ್ಲಿ ಈಗಲೂ ಅಚ್ಚಳಿಯದೆ ಉಳಿದಿದೆ. ಅದು 1963 ರ ದಿನಗಳು.1962ರ ಚೀನಾ ಯುದ್ಧದಲ್ಲಿ ಮಡಿದ ವೀರ ಯೋಧರ ನೆನಪಿನಲ್ಲಿ ಕವಿ ಪ್ರದೀಪ್ ‘ಏ ಮೇರೆ ವತನ್ ಕೆ ಲೋಗೋ’ ಬರೀತಾರೆ, ಈ ಹಾಡಿಗೆ ಮೊದಲು ಕವಿ ಪ್ರದೀಪ್, ಇವರು ಸ್ವತ: ಬಾಂಬೆ ಟಾಕೀಸ್ ನ ಹಾಡುಗಾರ, ಸಂಗೀತಗಾರರಾಗಿದ್ದು, ಅದರ ಟ್ಯೂನ್ ಅಳವಡಿಸಿದ್ದುದನ್ನು, ಸಿ, ರಾಮಚಂದ್ರ ಅವರು …

ಏ ಮೇರೆ ವತನ್ ಕೆ ಲೋಗೋ…’ ಗೀತೆ ಕೇಳಿ ಕಣ್ಣೀರು ಹಾಕಿದ್ದ ನೆಹರೂ Read More »

ಗಾನ ಸರಸ್ವತಿ ಲತಾ ಮಂಗೇಶ್ಕರ್ ಅವರ ಅಗಲಿಕೆಗೆ ಬಸವರಾಜ ಬೊಮ್ಮಾಯಿ ಸಂತಾಪ

ಬೆಂಗಳೂರು:ಗಾನ ಸರಸ್ವತಿ ಲತಾ ಮಂಗೇಶ್ಕರ್ ಅವರ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಲತಾ ಮಂಗೇಶ್ಕರ ಅವರು ಭಾರತ ದೇಶದ ಸಾರಸ್ವತ ಲೋಕದ ಮಿನುಗುವ ತಾರೆ. ಕಾಲಾತೀತವಾಗಿ ಗಾನ ಸ್ವರವನ್ನು ಶ್ರೀಮಂತ ಗೊಳಿಸಿದವರು. ಅವರ ಗಾಯನ ಕೇವಲ ಸಿನಿಮಾ ಕ್ಷೇತ್ರಕ್ಕೆ ಸೀಮಿತವಾಗಿರಲಿಲ್ಲ. ಭಜನೆಗಳು, ದೇಶಭಕ್ತಿ ಗೀತೆಗಳು, ಅದರಲ್ಲೂ ಎ ಮೆರೆ ವತನ್ ಕೇ ಲೋಗೋ ಹಾಡು ಹಿಮಾಲಯದಷ್ಟೇ ಚಿರಸ್ಥಾಯಿ. ಇಂದಿಗೂ ಆ ಹಾಡು ಕೇಳಿದರೆ ಕಣ್ಣಲ್ಲಿ ನೀರು ಹರಿದು, ದೇಶಭಕ್ತಿ ಉಕ್ಕಿ ಹರಿಯುತ್ತದೆ. ಅಷ್ಟು  …

ಗಾನ ಸರಸ್ವತಿ ಲತಾ ಮಂಗೇಶ್ಕರ್ ಅವರ ಅಗಲಿಕೆಗೆ ಬಸವರಾಜ ಬೊಮ್ಮಾಯಿ ಸಂತಾಪ Read More »

ಮರೆಯಾದ ಗಾನ ಕೋಗಿಲೆ ಲತಾ ಮಂಗೇಶ್ಕರ್

ಲತಾಜೀ 36 ಭಾಷೆಗಳಲ್ಲಿ27 ಸಾವಿರಕ್ಕೂ ಹೆಚ್ಚು ಗೀತೆಗಳನ್ನು ಹಾಡಿದ್ದಾರೆ. ಭಾರತೀಯ ಭಾಷೆಗಳಲ್ಲದೆ ಡಚ್‌, ರಷ್ಯನ್‌, ಸ್ವಾಹಿಲಿ, ಇಂಗ್ಲಿಷ್‌, ಫಿಜಿಯಾನ್‌ ಮುಂತಾದ ಭಾಷೆಗಳಿಗೂ ದನಿಯಾದವರು. ಇಂದು ಜಗತ್ತಿನಾದ್ಯಂತ ದೀದಿಗೆ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಭಾರತ ರತ್ನ, ಪದ್ಮ ಪ್ರಶಸ್ತಿ ಸೇರಿದಂತೆ ಸಾವಿರಾರು ಪ್ರಶಸ್ತಿಗಳು ಅವರ ಸಾಧನೆಗೆ ಸಂದಿವೆ. ಅವರು ಓರ್ವ ಗಾಯಕಿ ಮಾತ್ರವಲ್ಲನಿರ್ಮಾಪಕಿ, ನಿರ್ದೇಶಕಿಯೂ ಹೌದು. ಅದರಿಂದಾಚೆಗೆ ಅವರು ವಂಡರ್‌ಫುಲ್‌ ಫೋಟೋಗ್ರಾಫರ್‌ ಕೂಡ ಹೌದು. ಲತಾಜೀ ಗಾಯನ ಸಾಧನೆ ಅದ್ಯಾವ ಅಕ್ಷರ, ಪದಗಳಿಗೂ ನಿಲುಕದ್ದು. 1967ರಲ್ಲಿ ಬಿಡುಗಡೆಯಾದ “ಕ್ರಾಂತಿವೀರ ಸಂಗೊಳ್ಳಿ …

ಮರೆಯಾದ ಗಾನ ಕೋಗಿಲೆ ಲತಾ ಮಂಗೇಶ್ಕರ್ Read More »

ಸೂರತ್‌ನಲ್ಲಿ ಇಂದು ಬೆಂಕಿ ದುರಂತ

ಸೂರತ್,ಜನವರಿ,೨೦ : ಸೂರತ್‌ನಲ್ಲಿ ಇಂದು ಬೆಂಕಿ ದುರಂತ ಸಂಭವಿಸಿದ್ದು ಇಲ್ಲಿನ ಪಾಲ್ಸಾನಾ ಬಳಿಯ ಸೌಮ್ಯಾ ಡೈಯಿಂಗ್ ಮಿಲ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಇಡೀ ಕಾರ್ಖಾನೆ ಬೆಂಕಿಗೆ ಆಹುತಿಯಾಗಿದೆ. ಬೆಳ್ಳಂಬೆಳಿಗ್ಗೆ ೩.೩೦ರ ಸಮಯದಲ್ಲಿ ಈ ದುರಂತ ಸಂಭವಿಸಿದೆ. ಕಾರ್ಖಾನೆಯ ಎಲ್ಲಾ ಸಿಬ್ಬಂದಿಗಳನ್ನು ರಕ್ಷಣೆ ಮಾಡಲಾಗಿದ್ದು ಕಾರ್ಖಾನೆಯಲ್ಲಿದ್ದ ಎರಡು ಗ್ಯಾಸ್ ಬಾಟೆಲ್‌ಗಳು ಸ್ಫೋಟಗೊಂಡಿದ್ದರಿಂದ ಈ ದುರಂತ ನಡೆದಿದೆ ಎಂದು ತಿಳಿಯಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕಾಗಮಿಸಿ ಸುಮಾರು ನಾಲ್ಕು ಗಂಟೆಗೂ ಅಧಿಕ ಕಾಲ ಹರಸಾಹಸಪಟ್ಟು ಬೆಂಕಿಯನ್ನು ನಂದಿಸಿದರು.

ರಾಷ್ಟ್ರದ ಆರ್ಥಿಕ ಬೆಳವಣಿಗೆಯಲ್ಲಿ ಕೈ ಜೋಡಿಸುವಂತೆವಿದ್ಯಾರ್ಥಿಗಳಿಗೆ ಸಚಿವ ಮುರುಗೇಶ್ ನಿರಾಣಿ ಕರೆ

ಕರಾಡ್ (ಮಹಾರಾಷ್ಟ್ರ), ಡಿ.5- ಸರ್ಕಾರದ ಯೋಜನೆಗಳನ್ನುಸದುಪಯೋಗಪಡಿಸಿಕೊಂಡು ವಿದ್ಯಾರ್ಥಿಗಳುಉದ್ಯಮಿಯಾಗುವುದರ ಜೊತೆಗೆ ಮತ್ತೊಬ್ಬರಿಗೆ ಉದ್ಯೋಗ ನೀಡಿ, ರಾಷ್ಟ್ರದ ಆರ್ಥಿಕ ಬೆಳವಣಿಗೆಯಲ್ಲಿ ಕೈ ಜೋಡಿಸುವಂತೆ ಬೃಹತ್ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್ ನಿರಾಣಿಅವರು ಕರೆ ನೀಡಿದ್ದಾರೆ. ಭಾನುವಾರ ಮಹಾರಾಷ್ಟ್ರದ ಸತಾರಾ ಜಿಲ್ಲೆಯಲ್ಲಿರುವ ಕರಾಡ್ ನಕೃಷ್ಣ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಡೀಮ್ಡ್ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ಪದವಿ ಸ್ವೀಕರಿಸಿ ನಂತರ ಅವರು ಮಾತನಾಡಿದರು. ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಸಚಿವ ಮುರುಗೇಶ್ನಿರಾಣಿಗೆ ಸಮಾಜಸೇವೆ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ನೀಡಿರುವಸೇವೆಯನ್ನು ಪರಿಗಣಿಸಿ ಗೌರವ ಡಾಕ್ಟರೇಟ್ ಪದವಿಯನ್ನು …

ರಾಷ್ಟ್ರದ ಆರ್ಥಿಕ ಬೆಳವಣಿಗೆಯಲ್ಲಿ ಕೈ ಜೋಡಿಸುವಂತೆವಿದ್ಯಾರ್ಥಿಗಳಿಗೆ ಸಚಿವ ಮುರುಗೇಶ್ ನಿರಾಣಿ ಕರೆ Read More »

ಡಾಲರ್ ಶೇಷಾದ್ರಿ ನಿಧನ

ವಿಶಾಖಪಟ್ಟಣ: ತಿರುಪತಿ ದೇವಸ್ಥಾದ ಪ್ರಧಾನ ಅರ್ಚಕರಾಗಿದ್ದ ಡಾಲರ್ ಶೇಷಾದ್ರಿ ನಿಧನರಾಗಿದ್ದಾರೆ. ಶೇಷಾದ್ರಿ ಅವರಿಗೆ ಹೃದಯಾಘಾತ ಉಂಟಾಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ತೆರಳುತ್ತಿದ್ದ ದಾರಿಮಧ್ಯದಲ್ಲಿ ನಿಧನರಾಗಿದ್ದಾರೆ. ೧೯೭೮ ರಿಂದ ಡಾಲರ್ ಶೇಷಾದ್ರಿ ಅವರು ದೇವಾಸ್ಥಾನದಲ್ಲಿ ಕಾರ್ಯನಿ ರ್ವಹಿಸುತ್ತಿದ್ದರು. ೨೦೦೭ ರಲ್ಲಿ ನಿವೃತ್ತರಾಗಿದ್ದರು. ನಂತರ ಒಎಸ್ ಡಿ ಆಗಿ ಮುಂದುವರೆದಿದ್ದರು.ಟಿಟಿಡಿಯ ಹೆಚ್ಚುವರಿ ಇಒ ಧರ್ಮ ರೆಡ್ಡಿ ಡಾಲರ್ ಶೇಷಾದ್ರಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಟಿಟಿಡಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾಗಲೇ ಶೇಷಾದ್ರಿ ಅವರಿಗೆ ಹೃದಯಾಘಾತ ಸಂಭವಿಸಿದೆ.

Translate »
Scroll to Top