ರಾಷ್ಟ್ರದ ಆರ್ಥಿಕ ಬೆಳವಣಿಗೆಯಲ್ಲಿ ಕೈ ಜೋಡಿಸುವಂತೆವಿದ್ಯಾರ್ಥಿಗಳಿಗೆ ಸಚಿವ ಮುರುಗೇಶ್ ನಿರಾಣಿ ಕರೆ

ಕರಾಡ್ (ಮಹಾರಾಷ್ಟ್ರ), ಡಿ.5- ಸರ್ಕಾರದ ಯೋಜನೆಗಳನ್ನುಸದುಪಯೋಗಪಡಿಸಿಕೊಂಡು ವಿದ್ಯಾರ್ಥಿಗಳುಉದ್ಯಮಿಯಾಗುವುದರ ಜೊತೆಗೆ ಮತ್ತೊಬ್ಬರಿಗೆ ಉದ್ಯೋಗ ನೀಡಿ, ರಾಷ್ಟ್ರದ ಆರ್ಥಿಕ ಬೆಳವಣಿಗೆಯಲ್ಲಿ ಕೈ ಜೋಡಿಸುವಂತೆ ಬೃಹತ್ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್ ನಿರಾಣಿಅವರು ಕರೆ ನೀಡಿದ್ದಾರೆ. ಭಾನುವಾರ ಮಹಾರಾಷ್ಟ್ರದ ಸತಾರಾ ಜಿಲ್ಲೆಯಲ್ಲಿರುವ ಕರಾಡ್ ನಕೃಷ್ಣ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಡೀಮ್ಡ್ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ಪದವಿ ಸ್ವೀಕರಿಸಿ ನಂತರ ಅವರು ಮಾತನಾಡಿದರು.

ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಸಚಿವ ಮುರುಗೇಶ್ನಿರಾಣಿಗೆ ಸಮಾಜಸೇವೆ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ನೀಡಿರುವಸೇವೆಯನ್ನು ಪರಿಗಣಿಸಿ ಗೌರವ ಡಾಕ್ಟರೇಟ್ ಪದವಿಯನ್ನು ನೀಡಿ‌ಗೌರವಿಸಲಾಯಿತು. ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿನ‌ಕೈಗಾರಿಕಾ ಬೆಳವಣಿಗೆ ಹಾಗೂ ಎಂಆರ್ ಎನ್‌ ಫೌಂಡೇಶನ್ಮೂಲಕ ಕಳೆದ ಹಲವಾರು ವರ್ಷಗಳಿಂದ ಮಾಡುತ್ತಿರುವಸಮಾಜಮುಖಿ ‌ಕೆಲಸಗಳನ್ನು ಮೆಚ್ಚಿ ವಿ.ವಿ.ಯು ಗೌರವಡಾಕ್ಟರೇಟ್ ನೀಡಿದೆ. ಎಂಆರ್ ಎನ್ ಫೌಂಡೇಶನ್ ಮೂಲಕ ‌ ಆರೋಗ್ಯ ಕ್ಷೇತ್ರದಲ್ಲಿ ಅವರು ನೀಡುತ್ತಿರುವ ಸೇವೆಗೆ ವಿ.ವಿ.ಯುಮೆಚ್ಚುಗೆ ವ್ಯಕ್ತಪಡಿಸಿತ್ತು. ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆಯಾದ ಆತ್ಮನಿರ್ಭಾರ್ ನಲ್ಲಿ ಯುವಕರು ಸ್ವಾವಲಂಬಿಗಳಗಾಲು ಅನೇಕಯೋಜನೆಗಳನ್ನು ಜಾರಿಗೆ ತರಲಾಗಿದೆ. ಇದನ್ನುಬಳಕೆಮಾಡಿಕೊಂಡು ರಾಷ್ಟ್ರದ ಪ್ರಗತಿಯಲ್ಲಿ ಯುವಕರು ಕೈಜೋಡಿಸುವಂತೆ ನಿರಾಣಿ ಸಲಹೆ ಮಾಡಿದರು.

ನಾನೊಬ್ಬ ಕೆಲಸಗಾರನಾಗುತ್ತಿದ್ದೆ ಅಷ್ಟೇ ತಮ್ಮ ಭಾಷಣದಲ್ಲಿ ಸಚಿವ ನಿರಾಣಿ ಅವರು ತಾವು ಬೆಳೆದ ಬಂದದಾರಿಯನ್ನು ಸಿಂಹಾವಲೋಕನ ಮಾಡಿದರು. ಧಾರವಾಡದಕೆಎಲ್‍ಇ ಹಾಗೂ ಪುಣೆಯಲ್ಲಿ ವ್ಯಾಸಂಗ ಮುಗಿಸಿದಾಗ ಕೆಲಸಸೇರುವಂತೆ ನನಗೆ ಅನೇಕರು ಸಲಹೆ ಮಾಡಿದರು. ಒಂದು ವೇಳೆ ನಾನೇದರೂ ಉದ್ಯೋಗ ಪಡೆಯುವುದಕ್ಕೆಸೀಮಿತನಾಗಿದ್ದರೆ ಇಂದು ನಾನು ಉದ್ಯಮಿಯಾಗುತ್ತಿರಲಿಲ್ಲ ಎಂದು ತಮ್ಮ ಯಶೋಗಾದೆಯನ್ನು ತೆರೆದಿಟ್ಟರು. ಪ್ರಾರಂಭದಲ್ಲಿ ನನ್ನ ತವರು ಜಿಲ್ಲೆಯಾಗಿದ್ದ ಬಾಗಲಕೋಟೆಸುತ್ತಮುತ್ತ ರೈತರು ತಮ್ಮ ಜಮೀನಿನಲ್ಲಿ ಬೆಳೆದ ಕಬ್ಬು ಅರಿಯುವಸಮಸ್ಯೆಗಳಿದ್ದವು.ಇದನ್ನು ಮನಗಂಡು ನಾನು ಸಣ್ಣ ಪ್ರಮಾಣದಲ್ಲಿಕಬ್ಬು ಅರಿಯುವ ಕಾರ್ಖಾನೆಯನ್ನು ಆರಂಭಿಸಿದೆ. ಹಂತಹಂತವಾಗಿ ಇದು ಬೆಳೆದು ಇಂದು ದೇಶದಲ್ಲೇ 2ನೇ ಅತಿಹೆಚ್ಚುಸಕ್ಕರೆ ಉತ್ಪಾದನೆ ಮಾಡುವ ಕಾರ್ಖಾನೆಯಾಗಿ ಬೆಳೆದಿದೆ ಎಂದುಹೇಳುತ್ತಿದ್ದಂತೆ ವಿವಿಯಲ್ಲಿದ್ದ ಗಣ್ಯರು ಮತ್ತು ವಿದ್ಯಾರ್ಥಿಗಳಿಂದಕರಾಡತನ ಮುಗಿಲು ಮುಟ್ಟಿತ್ತು.

ಎಂಆರ್ ಎನ್ ಗ್ರೂಪ್‍ನಲ್ಲಿ 75 ಸಾವಿರ ಉದ್ಯೋಗಿಗಳಿದ್ದಾರೆ. ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸುಮಾರು ಮೂರು ಲಕ್ಷ ಕಬ್ಬುಬೆಳೆಯುವ ಕುಟುಂಬಗಳಿಗೆ ನೆರಳಾಗಿದ್ದೇವೆ.. ಕೇವಲ ಸಕ್ಕರೆಕಾರ್ಖಾನೆಯಲ್ಲದೆ, ಶಿಕ್ಷಣ ಸಂಸ್ಥೆಗಳು, ಬ್ಯಾಂಕಿಂಗ್, ಯಥಿನಾಲ್ಉತ್ಪಾದನೆ, ಗ್ರೀನ್ ಎನರ್ಜಿ ಸೇರಿದಂತೆ ಇತರೆ ಕ್ಷೇತ್ರಗಳಲ್ಲಿ ನಾವುತೊಡಗಿಸಿಕೊಂಡಿದ್ದೇವೆ ಎಂದರು. ಉದ್ಯಮ ಆರಂಭಿಸಿದಾಗ ಅನೇಕ ಅಡೆತಡೆಗಳು ಎದುರಾಗುತ್ತವೆ. ನಿಮ್ಮನ್ನು ನೋಡಿ ಅನೇಕರು ಕೊಂಕು ನುಡಿಯುತ್ತಾರೆ. ಇದಾವುದಕ್ಕೂ ತಲೆಕೆಡಿಸಿಕೊಳ್ಳದೆ ನಿಮ್ಮ ಗುರಿ ತಲುಪುವುದುಮುಖ್ಯವಾದಾಗ ಮಾತ್ರ ನೀವೊಬ್ಬ ಯಶಸ್ವಿ ಉದ್ಯಮಿಯಾಗಲುಸಾಧ್ಯ ಎಂದು ನಿರಾಣಿಸಲಹೆ ಮಾಡಿದರು. ಕಾರ್ಯಕ್ರಮದಲ್ಲಿ ಮಹಾರಾಷ್ಟ್ರದ ಮಾಜಿ ಸಿಎಂ ಹಾಗೂವಿಧಾನಸಭೆಯ ಪ್ರತಿಪಕ್ಷದ ದೇವೇಂದ್ರ ಫಡ್ನವೀಸ್, ಕೃಷ್ಣಇನ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌, ಡೀಮ್ಡ್ ವಿವಿಯ ಕುಲಪತಿ ಡಾ.ಮಿಶ್ರ, ಅಧ್ಯಕ್ಷ ಡಾ.ಸುರೇಶ್ ಗೋಸಲೆ, ರಿಜಿಸ್ಟ್ರಾರ್ಡಾ.ಎಂ.ವಿ.ಘೋರ್ಪಡೆ ಮತ್ತಿತರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

Translate »
Scroll to Top