ರಾಜ್ಯಕ್ಕೆ ರಸಗೊಬ್ಬ ಕೊರತೆ ಇಲ್ಲವೆಂದು ಕೇಂದ್ರ ಸಚಿವರ ಭರವಸೆ

ನವದೆಹಲಿ: ಕರ್ನಾಟಕಕ್ಕೆ ಯೂರಿಯಾ ಮತ್ತು ಡಿಎಪಿ ಕೊರತೆಯಾಗುವುದಿಲ್ಲ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಮನ್ಸುಖ ಮಾಂಡವಿಯ ಅವರು ಆಶ್ವಾಸನೆ ನೀಡಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ನವದೆಹಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು. ನಿನ್ನೆ ಕೇಂದ್ರ ರಸಗೊಬ್ಬರ ಖಾತೆ ಸಚಿವ ಮನ್ಸುಖ್ ಮಾಂಡವೀಯ ಅವರನ್ನು ಭೇಟಿಯಾಗಿ ರಾಜ್ಯಕ್ಕೆ ಬೇಕಿರುವ ಗೊಬ್ಬರದ ಬಗ್ಗೆ ಚರ್ಚೆ ಮಾಡಲಾಯಿತು. ನಮಗೆ ಮುಂಗಾರಿನಲ್ಲಿ ಡಿಎಪಿ ಮತ್ತು ಯೂರಿಯಾ ಅಗತ್ಯವೂ ಇದೆ ಎಂದು ತಿಳಿಸಲಾಗಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಮೋನಿಯಾ ಮತ್ತು ಇತರೆ ಗೊಬ್ಬರದ ಕೊರತೆಯಿಂದ ಡಿಎಪಿ ಬಗ್ಗೆ ಅನುಮಾನವಿತ್ತು. ಡಿ.ಎ.ಪಿ ಗೊಬ್ಬರ ಸಿಗಲಿದೆ ಎಂದು ಹೇಳಿದ್ದಾರೆ. ಮಂಗಳೂರು ಮತ್ತು ಕಾರವಾರ ಬಂದರಿಗೆ ಬಂದ ಮೇಲೆ ಸಾಗಾಣಿಕೆ ವ್ಯವಸ್ಥೆಯಾಗಬೇಕು ಎಂದು ಬೊಮ್ಮಾಯಿ ತಿಳಿಸಿದರು.

Leave a Comment

Your email address will not be published. Required fields are marked *

Translate »
Scroll to Top