ಏ ಮೇರೆ ವತನ್ ಕೆ ಲೋಗೋ…’ ಗೀತೆ ಕೇಳಿ ಕಣ್ಣೀರು ಹಾಕಿದ್ದ ನೆಹರೂ

ದೇಶದ ಪ್ರಖ್ಯಾತ ಹಾಡುಗಾರ್ತಿ ಗಾನಕೋಗಿಲೆ ಲತಾ ಮಂಗೇಶ್ವರ್ ಅವರು ಹಾಡಿದ್ದ ‘ಏ ಮೇರೆ ವತನ್ ಕೆ ಲೋಗೋ’ ಹಾಡು ದೇಶವಾಸಿಗಳ ಮನದಲ್ಲಿ ಈಗಲೂ ಅಚ್ಚಳಿಯದೆ ಉಳಿದಿದೆ.

ಅದು 1963 ರ ದಿನಗಳು.1962ರ ಚೀನಾ ಯುದ್ಧದಲ್ಲಿ ಮಡಿದ ವೀರ ಯೋಧರ ನೆನಪಿನಲ್ಲಿ ಕವಿ ಪ್ರದೀಪ್ ‘ಏ ಮೇರೆ ವತನ್ ಕೆ ಲೋಗೋ’ ಬರೀತಾರೆ, ಈ ಹಾಡಿಗೆ ಮೊದಲು ಕವಿ ಪ್ರದೀಪ್, ಇವರು ಸ್ವತ: ಬಾಂಬೆ ಟಾಕೀಸ್ ನ ಹಾಡುಗಾರ, ಸಂಗೀತಗಾರರಾಗಿದ್ದು, ಅದರ ಟ್ಯೂನ್ ಅಳವಡಿಸಿದ್ದುದನ್ನು, ಸಿ, ರಾಮಚಂದ್ರ ಅವರು ದೆಹಲಿ ಗಣರಾಜ್ಯ ದಿನದ ವಿಶೇಷ ಗೀತೆಯನ್ನಾಗಿ ಪ್ರಸ್ತುತ ಪಡಿಸಲು ರಿಕಂಪೋಸ್ ಮಾಡುತ್ತಾರೆ.

 1963ರ ಜ.27ರಂದು ಭಾರತೀಯ ಸೈನಿಕರಿಗೆ ಗೌರವ ಸಲ್ಲಿಸುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆ ವೇಳೆ ರಾಷ್ಟ್ರಪತಿ ಜವಾಹರ್‌ಲಾಲ್‌ ನೆಹರೂ, ರಾಷ್ಟ್ರಪತಿ ಡಾ. ಸರ್ವೆಪಲ್ಲಿ ರಾಧಾಕೃಷ್ಣನ್‌ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

1963ರಲ್ಲಿ ಗಣರಾಜ್ಯೋತ್ಸವದ ಮರುದಿನ ದೆಹಲಿಯಲ್ಲಿ ನಡೆದ ಸಮಾರಂಭದ ವೇದಿಕೆಯಲ್ಲಿ ಕವಿ ಪ್ರದೀಪ್ ರಚಿಸಿದ್ದ ಏ ಮೇರೆ ವತನ್ ಏ ಲೋಗೋ ಹಾಡನ್ನು ಹಾಡಲು ವಿನಂತಿಸಿದಾಗ, ಲತಾ ಮೊದಲು ನಿರಾಕರಿಸಿದರಂತೆ. ಆದರೆ, ಗೀತರಚನೆಕಾರ ಪ್ರದೀಪ್ ಅವರ ಒತ್ತಾಯದ ಮೇರೆಗೆ ಲತಾ ದೀದಿ ಆ ಕಾರ್ಯಕ್ರಮಕ್ಕೂ ಒಂದು ದಿನ ಮೊದಲು ಆ ಹಾಡನ್ನು ಅಭ್ಯಾಸ ಮಾಡಿ ಮರುದಿನ ಹಾಡಿದರು. ಭಾರತಕ್ಕಾಗಿ ಮಡಿದ ಸೈನಿಕರಿಗಾಗಿ ಅರ್ಪಿಸಿದ ಆ ಗೀತೆಯನ್ನು ಲತಾ ಮಂಗೇಶ್ಕರ್ ಭಾವ ತುಂಬಿ ಹಾಡಿದಾಗ ಆ ವೇದಿಕೆಯ ಮೇಲಿದ್ದ ನೆಹರೂ ಕಣ್ಣಂಚು ಒದ್ದೆಯಾಗಿತ್ತು.

ಆ ಕಾರ್ಯಕ್ರಮ ಮುಗಿದ ಬಳಿಕ ಲತಾ ಮಂಗೇಶ್ಕರ್ ಅವರನ್ನು ಕರೆಸಿ ಮಾತನಾಡಿದ್ದ ಜವಾಹರಲಾಲ್ ನೆಹರೂ ‘ನೀನು ನನ್ನನ್ನು ಅಳಿಸಿಬಿಟ್ಟೆ’ ಎಂದು ಭಾವುಕರಾಗಿ ಹೇಳಿದ್ದರಂತೆ. ಈಗಲೂ ಏ ಮೇರೆ ವತನ್ ಕೇ ಲೋಗೋ ಬಹಳ ಪ್ರಸಿದ್ಧವಾದ ದೇಶಭಕ್ತಿ ಗೀತೆಯಾಗಿದೆ.ಕೆಲವೇ ಸಮಯದಲ್ಲಿ ಎಚ್ ಎಮ್ ವಿ ಸಂಸ್ಥೆಯಿಂದ ಇದರ ಹಾಡಿನ ಧ್ವನಿಮುದ್ರಣ ದೇಶದ ತುಂಬೆಲ್ಲ ಶರವೇಗದಲ್ಲಿ ವಿತರಿಸಿತು. ಅಂದಿನಿಂದ ಇಂದಿಗೂ ಪ್ರತಿಯೊಬ್ಬ ಭಾರತೀಯನ ಹೃದಯದಲ್ಲಿ ಈ ಗೀತೆ ಒಂದು ದೇಶವನ್ನು ಹಿಡಿದಿಡುವ, ಹಿಡಿದಿಟ್ಟ ಅತ್ಯುತ್ತಮ ದೇಶಪ್ರೇಮದ, ದೇಶಭಕ್ತಿಯ ಗೀತೆಯಾಗುಳಿದಿದೆ. ಯುದ್ಧದ ನಿರಾಶೆ, ದು:ಖದ ಛಾಯೆಯಲ್ಲಿ ನಲುಗಿದ್ದ ದೇಶಕ್ಕೆ, ದೇಶದ ಜರ್ಜರಿತ ಮನಸುಗಳಲ್ಲಿ ಮತ್ತೊಮ್ಮೆ ದೇಶಪ್ರೇಮದ ಬೀಜ ಬಿತ್ತಿದ ಗೀತೆ, ‘ಏ ಮೇರೆ ವತನ್ ಕೆ ಲೋಗೋ’.. ಅಂದಿನ ಮುತ್ಸದ್ದಿ, ರಿಸರ್ಚ್ ಬ್ಯಾಂಕ ಆಫ್ ಇಂಡಿಯಾ ಗವರ್ನರ್ ಸಿ. ಡಿ. ದೇಶಮುಖ ಈ ಹಾಡನ್ನು, ‘ರಾಷ್ಟ್ರೀಯ ಐಕ್ಯತೆಯ ರಾಗದುಂಬಿದ ಸಂಕೇತ’ ವೆಂದು ಕರೆದದ್ದು ಕೂಡ ಐತಿಹಾಸಿಕ.

ವರದಿ: ಡಾ. ವರ ಪ್ರಸಾದ್ ರಾವ್ ಪಿ ವಿ.

Leave a Comment

Your email address will not be published. Required fields are marked *

Translate »
Scroll to Top