ವಿಧಾನಸಭೆ ಸ್ಪೀಕರ್ ಯು.ಟಿ ಖಾದರ್ ರವರು ಶನಿವಾರ ರಾಜ್ಯ ಕಾರ್ಯನಿರತ ಸಂಘದ ವತಿಯಿಂದ ನಡೆದ ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡುತ್ತಾ,” ಈ ಹಿಂದೆ ಆರೋಗ್ಯ ಸಚಿವರಾಗಿದ್ದಾಗ ಪತ್ರಕರ್ತರಿಗೆ’ ಆರೋಗ್ಯ ಭಾಗ್ಯ ‘ ಯೋಜನೆಗಳನ್ನು ನೀಡುವಂತೆ ಹಲವಾರು ಸಭೆಗಳನ್ನು ನಡೆಸಿ ಯೋಜನೆ ಸಿದ್ದಪಡಿಸಲಾಗಿದ್ದು, ಆದರೆ ಕೊನೆಯ ಕ್ಷಣಗಳಲ್ಲಿ ತಾಂತ್ರಿಕ ಕಾರಣಗಳಿಗೆ ಅದು ಜಾರಿಯಾಗಲಿಲ್ಲ.ಈಗಿನ ಸಮಯದಲ್ಲಿ ಯೋಜನೆಗಳನ್ನು ಜಾರಿಗೊಳಿಸಬಹುದಾಗಿದೆ.ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರ ಬಳಿ ಚರ್ಚೆ ನಡೆಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತೇನೆ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ,ಜಿಲ್ಲಾ ಉಸ್ತುವಾರಿ, ರಾಜ್ಯಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್. ರಾಜ್ಯದ ಪತ್ರಕರ್ತರಿಗೆ ನೀವೇಶನೆಗಳನ್ನು,ಒದಗಿಸುವಂತೆ,ಬಹಳ ಸಮಯದಿಂದ ಬೇಡಿಕೆಯಿದೆ.ಇದನ್ನು ನೆರವೇರಿಸಲು ತಾನು ಸರಕಾರ ಮಟ್ಟದಲ್ಲಿ ಪ್ರಾಮಾಣಿಕವಾಗಿ ಪ್ರಯತ್ನವನ್ನು ಮಾಡುತ್ತೇನೆ ಎಂದರು.ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಸಕುಲಧಿಪತಿಯಾಗಿ ಡಾಕ್ಟರ್ ಎಚ್.ಎಸ್. ಬಲ್ಲಾಳ್, ಕೆಎಂಸಿಯ ವೈದ್ಯಕೀಯ ಅಧ್ಯಕ್ಷ ಡಾಕ್ಟರ್ ಡಾಕ್ಟರ್ ಅವಿನಾಶ್ ಶೆಟ್ಟಿ, ಜಿಲ್ಲಾಧಿಕಾರಿ ಕೂರ್ಮ ರಾವ್,ಎಸ್ಪಿ ಅಕ್ಷಯ್ ಹಾಕೆ ಆಗಮಿಸಿದ್ದರು.ರಾಜ್ಯ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಅಧ್ಯಕ್ಷತೆ ವಹಿಸಿದ್ದರು.