ಬೆಂಗಳೂರು : ತಮ್ಮ ಬಳಿ ಇರಬಹುದಾದ, PSI ಹುದ್ದೆಗಳ ಅಕ್ರಮ ನೇಮಕಾತಿಗೆ ಸಂಬಂಧಿಸಿದಂತೆ ಸಾಕ್ಷ್ಯಾಧಾರ ಗಳನ್ನು, ಹಾಗೂ ಮಾಹಿತಿಗಳನ್ನು, ಹಂಚಿ ಕೊಳ್ಳಬೇಕು ಎಂದು ಸಿಐಡಿ ಅಧಿಕಾರಿಗಳು, ಕಾಂಗ್ರೆಸ್ ಶಾಸಕ ಶ್ರೀ ಪ್ರಿಯಾಂಕ್ ಖರ್ಗೆ ಯವರಿಗೆ ನೋಟಿಸ್ ನೀಡಿದ್ದರು. ಮಾನ್ಯ ಶಾಸಕರು, ತಮ್ಮ ಬಳಿ ಅಕ್ರಮ ನೇಮಕಾತಿಗೆ ಸಂಬಂಧಿಸಿದಂತೆ ಬಹಳಷ್ಟು ಸಾಕ್ಷ್ಯಾಧಾರ ಗಳೂ, ವ್ಯಕ್ತಿಗಳ ಹೆಸರುಗಳು ಗೊತ್ತು, ಎಂದು ಮಾಧ್ಯಮದವರ ಮುಂದೆ ಬಿಂಬಿಸಿಕೊಂಡಿದ್ದರು. ಈಗ ಸಿಐಡಿ ಅಧಿಕಾರಿಗಳ ಮುಂದೆ ಹಾಜರಾಗಲು ಹಿಂಜರಿಯುತ್ತಿದ್ದಾರೆ. ಹಾಗೂ ತಮ್ಮ ಹೊಣೆಗಾರಿಕೆಯನ್ನು ಮರೆತು, ತಮ್ಮಲ್ಲಿ ಯಾವುದೇ ಸಾಕ್ಷ್ಯಾಧಾರ ಗಳಿಲ್ಲ, ಕೇವಲ ಸಾಮಾಜಿಕ ಜಾಲತಾಣ ದಲ್ಲಿರುವ ಮಾಹಿತಿಯನ್ನು ಮಾತ್ರ ಪ್ರಕಟಿಸಿದ್ದೆ, ಎಂಬ ಬಾಲಿಶ ಹೇಳಿಕೆ ನೀಡಿದ್ದಾರೆ.

ಸಿಐಡಿ ಅಧಿಕಾರಿಗಳ ಮುಂದೆ ಹಾಜರಾಗಿ, ಶ್ರಿ ಖರ್ಗೆಯವರು ತನಿಖೆಗೆ ಸಹಕರಿಸುವುವದರ ಬದಲು, ಪಲಾಯನವಾದ ನೀತಿಯನ್ನು, ಅನುಸರಿಸಿದ್ದಾರೆ. ಪ್ರಾಮಾಣಿಕವಾಗಿ ಪರೀಕ್ಷೆ ಬರೆದರೂ, ಹುದ್ದೆಯಿಂದ ವಂಚಿತರಾದ ಅಭ್ಯರ್ಥಿಗಳಿಗೆ, ನ್ಯಾಯ ಒದಗಿಸಲು, ಸಿಐಡಿ ತನಿಖೆಗೆ ನಾನೇ ಸ್ವತಃ ಆಸಕ್ತಿ ತೋರಿಸಿ, ಮುಖ್ಯಮಂತ್ರಿಗಳ ಜತೆ ಸಮಾಲೋಚಿಸಿ, ತನಿಖೆಗೆ ಆದೇಶ ನೀಡಿದ್ದೆ. ಬಡ ಕುಟುಂಬದಿಂದ ಬಂದಂಥ, ಸಾವಿರಾರು, ಪ್ರಾಮಾಣಿಕ ಹಾಗೂ ಪ್ರತಿಭಾವಂತ ಆಕಾಂಕ್ಷಿ ಗಳು, ಮೂಲೆ ಗುಂಪಾದರೆ, ಸಮಾಜಕ್ಕೆ ಆಗುವ ನಷ್ಟದ ಅಂದಾಜನ್ನು ಖರ್ಗೆಯವರು, ಅರಿಯಬೇಕಿತ್ತು. ಸಿಐಡಿ ಅಧಿಕಾರಿಗಳ ಮುಂದೆ ಹಾಜರಾಗಿ ಸಾಕ್ಷ್ಯಾಧಾರ ಗಳನ್ನು ನೀಡದೆ ಇರುವ ನಿರ್ಧಾರದ ಹಿಂದೆ, ಬಂಧನಕ್ಕೆ ಒಳಗಾಗಿರುವ ತಮ್ಮ ಆಪ್ತರನ್ನು ರಕ್ಷಿಸುವ ಇರಾದೆ ಇದೆ ಎಂಬ ಸಂಶಯ ಮೂಡುತ್ತದೆ. ತನಿಖೆಯು ನಿಷ್ಪಕ್ಷಪಾತವಾಗಿ, ನಡೆಯುತ್ತಿದ್ದು, ಅಕ್ರಮದಲ್ಲಿ ಒಳಗಾಗಿದವರು, ಎಷ್ಟೇ ದೊಡ್ಡವರಾದರೂ ರಕ್ಷಿಸುವ ಪ್ರಶ್ನೆಯಿಲ್ಲ.
ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ.