ಅಂತಾರಾಷ್ಟ್ರೀಯ ಕೃಷಿ ವಸ್ತುಪ್ರದರ್ಶನ ಮೇಳಕ್ಕೆ ಸಹಕಾರ ಸಚಿವ ಪ್ರವಾಸ

ಬೆಂಗಳೂರು: ಸ್ಪೇನ್‌ನ ಫೆರಿಯಾ ಡೆ ಝರಗೋಜ಼ದಲ್ಲಿ ನಡೆಯುವ 42ನೇ ದ್ವೈ ವಾರ್ಷಿಕ “ಫಿಮಾ ಅಗ್ರಿಕೋಲ-2022” ಕೃಷಿ ವಸ್ತು ಪ್ರದರ್ಶನ ಮೇಳಕ್ಕೆ ಕರ್ನಾಟಕ ಸರ್ಕಾರದ ಪ್ರತಿನಿಧಿಯಾಗಿ ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಸೋಮವಾರ ಸಂಜೆ ಪ್ರಯಾಣ ಬೆಳೆಸಿದರು. ಕೃಷಿ ಉತ್ಪನ್ನ ಹಾಗೂ ಕೃಷಿ ಯಂತ್ರೋಪಕರಣಗಳ ಈ ವಸ್ತು ಪ್ರದರ್ಶನ 2022ರ ಏಪ್ರಿಲ್ 26 ರಿಂದ 30ರ ವರೆಗೆ ನಡೆಯಲಿದೆ. ಸುಮಾರು 80 ದೇಶಗಳಿಂದ 1600 ಕ್ಕೂ ಹೆಚ್ಚು ಪ್ರದರ್ಶಕರು, 2.30 ಲಕ್ಷಕ್ಕೂ ಹೆಚ್ಚು ವೀಕ್ಷಕರು ಭಾಗವಹಿಸುತ್ತಾರೆ ಎಂದು ಸಂಘಟಕರು ತಿಳಿಸಿದ್ದಾರೆ.

ಕೃಷಿ ಪವರ್ ಯೂನಿಟ್‌ಗಳು, ಬಿತ್ತನೇ ಯಂತ್ರೋಪಕರಣಗಳು, ನಾಟಿ-ಕಟಾವು ತಂತ್ರಜ್ಞಾನ, ನೀರಾವರಿ ವ್ಯವಸ್ಥೆ, ಹಸಿರುಮನೆ, ಗಾರ್ಡನ್ ಉಪಕರಣಗಳು, ಲಾಜಿಸ್ಟಿಕ್ ಸರ್ವೀಸ್ ಇನ್ನೂ ಅನೇಕ‌ ಕೃಷಿ ಸಂಬಂಧಿತ ವಿಷಯಗಳು ಈ ವಸ್ತು ಪ್ರದರ್ಶನದಲ್ಲಿ ಇವೆ. ಕೃಷಿ ಉತ್ಪನ್ನ ಹೆಚ್ಚಳ ಹಾಗೂ ಪರಿಸರ ಸಂರಕ್ಷಣೆಗೆ ವಿನೂತನ ಪರಿಹಾರಗಳನ್ನೂ ಈ ಪ್ರದರ್ಶನದಲ್ಲಿ ಪ್ರಸ್ತುತ ಪಡಿಸಲಾಗುತ್ತದೆ.

Leave a Comment

Your email address will not be published. Required fields are marked *

Translate »
Scroll to Top