rice

ನಾವು ಯಾರನ್ನೂ ಅಕ್ಕಿ ಪುಕ್ಸಟ್ಟೆ ಕೊಡಿ ಎಂದು ಕೇಳ್ತಿಲ್ಲ

ಬೆಂಗಳೂರು : ನಾವು ಯಾರನ್ನೂ ಅಕ್ಕಿ ಪುಕ್ಸಟ್ಟೆ ಕೊಡಿ ಎಂದು ಕೇಳ್ತಿಲ್ಲ. ಒಕ್ಕೂಟ ವ್ಯವಸ್ಥೆಯಲ್ಲಿ ಇದ್ದೇವೆ. ಆಪ್ಷನ್ ನೋಡ್ತಿದ್ದೇವೆ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅಭಿಪ್ರಾಯ ಪಟ್ಟಿದ್ದಾರೆ. ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ, ಅಕ್ಕಿಯನ್ನ ಬೇರೆ ರಾಜ್ಯದಿಂದ ತರುವ ಬಗ್ಗೆ ಮಾತುಕತೆ ನಡೆದಿದೆ. ನಾವು ಕೊಟ್ಟ ಮಾತು ಉಳಿಸಿಕೊಳ್ತೇವೆ ಎಂದರು.

ಛತ್ತೀಸ್ ಗಡದಲ್ಲಿ 1.50 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಲಭ್ಯ

ಬೆಂಗಳೂರು: ಅನ್ನಭಾಗ್ಯ ಯೋಜನೆಗೆ ಛತ್ತೀಸ್ ಗಡ ರಾಜ್ಯದಲ್ಲಿ 1.50 ಲಕ್ಷ ಮೆ. ಟನ್ ಅಕ್ಕಿ ಲಭ್ಯವಿದೆ. ಆದರೆ ಸಾರಿಗೆ ವೆಚ್ಚ ಹೆಚ್ಚಾಗಲಿದೆ. ಇಂದು ಸಂಜೆ ಈ ಬಗ್ಗೆ ಮತ್ತೊಂದು ಸಭೆ ಕರೆದಿದ್ದು, ಚರ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಅವರು ಇಂದು ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು.

ಪಡಿತರ ಅಕ್ಕಿ ಅಕ್ರಮ ಸಾಗಟವನ್ನು ವಶಕ್ಕೆ ಪಡೆದ ಪಟ್ಟಣದ ಪೊಲೀಸರು

ಮರಿಯಮ್ಮನಹಳ್ಳಿ,,ಮಾ.19 :  ಸರ್ಕಾರ ಬಡವರಿಗೆ ಉಚಿತವಾಗಿ ವಿತರಿಸುವ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 16 ಸಾವಿರದ 800 ನೂರು ರೂ ಮೌಲ್ಯದ 11.20 ಕ್ವಿಂಟಾಲ್ ಪಡಿತರ ಅಕ್ಕಿ ಮತ್ತು ಸಾಗಾಟ ಮಾಡಲು ಬಳಸಿದ ಬುಲೆರೋ ಪಿಕಪ್ ವಾಹನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗುರುವಾರ ಪಟ್ಟಣದ ಹೊರ ವಲಯದ ದೇವಲಾಪುರ ಕ್ರಾಸ್  ಸಮೀಪ ರಾಷ್ಟ್ರೀಯ ಹೆದ್ದಾರಿ 50ರ ರಸ್ತೆಯಲ್ಲಿ  ಪಟ್ಟಣದ ಪಿ.ಎಸ್.ಐ.ಹನುಮಂತಪ್ಪ ತಳವಾರ್ ರವರು ವಾಹನವನ್ನು ವಶಕ್ಕೆ  ಪಡೆದುಕೊಂಡರು. ಅಕ್ರಮವಾಗಿ ಬುಲೆರೋ ಪಿಕಪ್ ನಲ್ಲಿ  ಪಡಿತರ ಅಕ್ಕಿ ಸಾಗಾಟ ಮಾಡುತ್ತಿರುವ ಬಗ್ಗೆ …

ಪಡಿತರ ಅಕ್ಕಿ ಅಕ್ರಮ ಸಾಗಟವನ್ನು ವಶಕ್ಕೆ ಪಡೆದ ಪಟ್ಟಣದ ಪೊಲೀಸರು Read More »

ಅಕ್ಕಿ ಮೂಟೆ ಹೊತ್ತ ಅಭಿನವ ಗವಿಶ್ರೀಗಳು

ಕೊಪ್ಪಳ,ಜನವರಿ,22 : ಎಲ್ಲಡೆ ಮಠಾಧೀಶರೆಂದರೆ ಪೀಠದ ಮೇಲೆ ಕುಳಿತು ಆಶೀರ್ವದಿಸುವವರು ಎಂಬ ನೋಟ ಕಣ್ಮುಂದೆ ಬರುತ್ತದೆ. ಆದರೆ,ಕೊಪ್ಪಳದ ಗವಿಮಠದ ಅಭಿನವ ಶ್ರೀಗವಿಸಿದ್ದೇಶ್ವರ ಮಹಾಸ್ವಾಮಿಗಳು ಮಾತ್ರ ಇದಕ್ಕೆ ವಿಭಿನ್ನ. ಸದಾ ಕಾಯಕಯೋಗಿ, ಜನಸಾಮಾನ್ಯರ ವ್ಯಕ್ತಿಯಂತೆ ಬೆರೆಯುವ ಅವರ ಸ್ವಭಾವವೇ ಎಲ್ಲರಿಗೂ ಮಾದರಿ. ಗವಿಮಠದ ದಾಸೋಹಕ್ಕೆ ಬಂದಿದ ಅಕ್ಕಿ ಮೂಲೆಗಳನ್ನು ಗವಿಮಠದಲ್ಲಿರುವ ಸಿಬ್ಬಂದಿ ಹಾಗೂ ಇತರರು ಹೊತ್ತಿಡುತ್ತಿದ್ದಾಗ ಗವಿಶ್ರೀಗಳು ತಾವೇ ಅಕ್ಕಿ ಮೂಳೆಯನ್ನು ಹೊತ್ತು ನಿಟ್ಟಿಗೆ ಹಾಕಿ ಸರಳತೆ ಮೆರೆದಿದ್ದಾರೆ. ಯಾವುದೇ‌ ಕೆಲಸವಿದ್ದರೂ ಹೇಳುವುದಕ್ಕಿಂತ ಮಾಡುವುದು ಉತ್ತಮ ಎಂಬ ನಿಲುವಿನವರು …

ಅಕ್ಕಿ ಮೂಟೆ ಹೊತ್ತ ಅಭಿನವ ಗವಿಶ್ರೀಗಳು Read More »

ಅಕ್ರಮವಾಗಿ ಸಾಗಿಸುತ್ತಿದ್ದ 148 ಕ್ವಿಂಟಾಲ್ ಪಡಿತರ ಅಕ್ಕಿ ವಶ

ದಾವಣಗೆರೆ: ಆಜಾದ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಕ್ರಮವಾಗಿ ಪಡಿತರ ಅಕ್ಕಿ ಸಾಗಿಸುತ್ತಿದ್ದ ಲಾರಿಯನ್ನು ಪೊಲೀಸರು ವಶಪಡಿಸಿಕೊಂಡಿದ್ಧಾರೆ. ಲಾರಿಯಲ್ಲಿದ್ದ 148 ಕ್ವಿಂಟಾಲ್ ಅಕ್ಕಿಯನ್ನು ಹಾಗೂ ಒಂದು ಲಾರಿಯನ್ನು ಸೀಜ್ ಮಾಡಲಾಗಿದೆ. ಡಿಸಿಆರ್ ಬಿ ಘಟಕದ ಪೊಲೀಸ್ ಡಿವೈಎಸ್ಪಿ ಬಿ. ಎಸ್ ಬಸವರಾಜ್ ನೇತೃತ್ವದ ಪೊಲೀಸ್ ತಂಡ ದಾಳಿ ನಡೆಸಿತ್ತು. ಈ ಬಗ್ಗೆ ಆಜಾದ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

1 k.g ಪ್ಲಾಸ್ಟಿಕ್ ಕೊಟ್ಟರೆ 1 k.g. ಅಕ್ಕಿ ಅಥವಾ ಸಕ್ಕರೆ ಪಡೆಯಬಹುದು ಪುರಸಭೆ ಮುಖ್ಯಾಧಿಕಾರಿ

ಕುಷ್ಟಗಿ:- ಪ್ಲಾಸ್ಟಿಕ್ ಮುಕ್ತ ಪಟ್ಟಣಕ್ಕಾಗಿ ಜಿಲ್ಲಾಧಿಕಾರಿಗಳ ಆದೇಶದ ಮೇರಿಗೆ ಗಾಂಧಿ ಜಯಂತಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿ ಜಯಂತಿ ಅಂಗವಾಗಿ ಅಕ್ಟೋಬರ್ 2 ರಿಂದ ಅಕ್ಟೋಬರ್ 31ರ ವರಗೆ ಕುಷ್ಟಗಿ ಪಟ್ಟಣವನ್ನು ಪ್ಲಾಸ್ಟಿಕ್ ಮುಕ್ತ ಮಾಡಲು ಪಣ ತೊಡಲಾಗಿದೆ. ಆದ್ದರಿಂದ ಈಗಾಗಲೇ ಗಾಂಧಿ ಜಯಂತಿಯಂದು ಗಾಂಧಿ ಪ್ರತೀಮೆಗೆ ಪೂಜೆ ಸಲ್ಲಿಸಿ ಗಾಂಧಿ ನಗರದಲ್ಲಿ ಪ್ಲಾಸ್ಟಿಕ್ ಮುಕ್ತಕ್ಕಾಗಿ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂ ಇವರಿಂದ ಚಾಲನೆ ನೀಡಲಾಗಿದ್ದು ಆದ್ದರಿಂದ ಪಟ್ಟಣದ ಸಾರ್ವಜನಿಕರು ಸಹಕರಿಸಿ ಈ ಯೋಜನೆಯ ಲಾಭ ಪಡೆಯಬಹುದಾಗಿದೆ. …

1 k.g ಪ್ಲಾಸ್ಟಿಕ್ ಕೊಟ್ಟರೆ 1 k.g. ಅಕ್ಕಿ ಅಥವಾ ಸಕ್ಕರೆ ಪಡೆಯಬಹುದು ಪುರಸಭೆ ಮುಖ್ಯಾಧಿಕಾರಿ Read More »

Translate »
Scroll to Top