ಅಕ್ಕಿ ಮೂಟೆ ಹೊತ್ತ ಅಭಿನವ ಗವಿಶ್ರೀಗಳು

ಕೊಪ್ಪಳ,ಜನವರಿ,22 : ಎಲ್ಲಡೆ ಮಠಾಧೀಶರೆಂದರೆ ಪೀಠದ ಮೇಲೆ ಕುಳಿತು ಆಶೀರ್ವದಿಸುವವರು ಎಂಬ ನೋಟ ಕಣ್ಮುಂದೆ ಬರುತ್ತದೆ. ಆದರೆ,ಕೊಪ್ಪಳದ ಗವಿಮಠದ ಅಭಿನವ ಶ್ರೀಗವಿಸಿದ್ದೇಶ್ವರ ಮಹಾಸ್ವಾಮಿಗಳು ಮಾತ್ರ ಇದಕ್ಕೆ ವಿಭಿನ್ನ. ಸದಾ ಕಾಯಕಯೋಗಿ, ಜನಸಾಮಾನ್ಯರ ವ್ಯಕ್ತಿಯಂತೆ ಬೆರೆಯುವ ಅವರ ಸ್ವಭಾವವೇ ಎಲ್ಲರಿಗೂ ಮಾದರಿ.


ಗವಿಮಠದ ದಾಸೋಹಕ್ಕೆ ಬಂದಿದ ಅಕ್ಕಿ ಮೂಲೆಗಳನ್ನು ಗವಿಮಠದಲ್ಲಿರುವ ಸಿಬ್ಬಂದಿ ಹಾಗೂ ಇತರರು ಹೊತ್ತಿಡುತ್ತಿದ್ದಾಗ ಗವಿಶ್ರೀಗಳು ತಾವೇ ಅಕ್ಕಿ ಮೂಳೆಯನ್ನು ಹೊತ್ತು ನಿಟ್ಟಿಗೆ ಹಾಕಿ ಸರಳತೆ ಮೆರೆದಿದ್ದಾರೆ. ಯಾವುದೇ‌ ಕೆಲಸವಿದ್ದರೂ ಹೇಳುವುದಕ್ಕಿಂತ ಮಾಡುವುದು ಉತ್ತಮ ಎಂಬ ನಿಲುವಿನವರು ಗವಿಶ್ರೀಗಳು. ಕೋವಿಡ್ ವೇಳೆ ಲಟ್ಟಣಿಗೆಯಲ್ಲಿ ಚಪಾತಿ ಲಟ್ಟಿಸುವುದನ್ನು, ತಾವೇ ನಿಂತು ಸ್ವಚ್ಚತೆ ಮಾಡಿದ್ದನ್ನು ಈಗಾಗಲೇ ಕಂಡಿದ್ದೇವೆ. ಈಗ ಜಾತ್ರೆಯ ನಿಮಿತ್ತ ಶ್ರೀಗವಿಮಠದ ಅನ್ನದಾಸೋಹಕ್ಕೆ‌ ಭಕ್ತರು ನೀಡಿದ ಅಕ್ಕಿ‌ಮೂಟೆಗಳನ್ನು ಹೊತ್ತು ಭಕ್ತರ ಸೇವೆ ಮಾಡುತ್ತಿರುವ ಪೋಟೋ ವಿಡಿಯೊಗಳು ವೈರಲ್ ಆಗಿದೆ.

Leave a Comment

Your email address will not be published. Required fields are marked *

Translate »
Scroll to Top