kannadanwes

ಮಲೆಮಹದೇಶ್ವರ ಜಾತ್ರಾಮಹೋತ್ಸವ ಪೂರ್ವಸಿದ್ಧತೆ ಸಭೆ

ಚಾಮರಾಜನಗರ: ಫೆ.17-  ವಸತಿ , ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಅವರ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ಚಾಮರಾಜನಗರ ಜಿಲ್ಲೆಯ “ಶ್ರೀಮಲೆ ಮಹದೇಶ್ವರಸ್ವಾಮಿ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ” ವತಿಯಿಂದ  2022ನೇ ಸಾಲಿನಲ್ಲಿ ಜರುಗುವ ಮಹಾ ಶಿವರಾತ್ರಿ ಮತ್ತು ಯುಗಾದಿ ಜಾತ್ರಾ ಕಾಯ೯ಕ್ರಮಗಳ ಪೂವ೯ಸಿದ್ದತೆ ” ಗಳ ಕುರಿತು  ಮುಜರಾಯಿ ಸಚಿವರು ಮತ್ತು  ಜಿಲ್ಲೆಯ ಶಾಸಕರು ಹಾಗೂ ಸಂಬಂಧಪಟ್ಟ ಇಲಾಖೆಯ ಮುಖ್ಯಸ್ಥರ ಉಪಸ್ಥಿತಿಯಲ್ಲಿ ಇಂದು ಸಭೆ ನಡೆಯಿತು. ಈ ವೇಳೆ ಮಾತನಾಡಿದ ಸಚಿವರು, ಶಿವರಾತ್ರಿ ಸಂದಭ೯ದಲ್ಲಿ  …

ಮಲೆಮಹದೇಶ್ವರ ಜಾತ್ರಾಮಹೋತ್ಸವ ಪೂರ್ವಸಿದ್ಧತೆ ಸಭೆ Read More »

ಹೈಕೋರ್ಟ್ ಆದೇಶ ಪಾಲಿಸದೆ ಇದ್ದರೆ ಶಿಸ್ತುಕ್ರಮ

ಬೆಂಗಳೂರು,ಫೆ.16 : ಹಿಜಾಬ್‌ಗೆ ಸಂಬಂಧ ಪಟ್ಟಂತೆ ಹೈಕೋರ್ಟ್ ಆದೇಶ ಪಾಲಿಸದೆ ಇದ್ದರೆ ಶಿಸ್ತುಕ್ರಮ ಎದುಸಬೇಕಾಗುತ್ತದೆ ಎಂದು ಆರಗ ಜ್ಞಾನೇಂದ್ರ ಖಡಕ್ ಸಂದೇಶ ನೀಡಿದ್ದಾರೆ. ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆಯನ್ನು ನೀಡಿದರು. ಯಾರದೋ ಕುಮ್ಮಕ್ಕಿನಿಂದ ವಿದ್ಯಾರ್ಥಿನಿಯರು ವಿವಾದ ಮಾಡುತ್ತಿದ್ದಾರೆ. ಇನ್ನು ಮುಂದೆ ಯಾರೇ ಆದರೂ ಮುಲಾಜಿಲ್ಲದೆ ಕಾನೂನು ರೀತಿ ಕ್ರಮ ಜರುಗಿಸುತ್ತೇವೆ ಎಂದು ಗೃಹ ಸಚಿವರು ಕಠಿಣ ಎಚ್ಚರಿಕೆ ನೀಡಿದ್ದು ಕೋರ್ಟ್ ಆದೇಶ ಮತ್ತು ಸಂವಿಧಾನವನ್ನು ಮಾನ್ಯ ಮಾಡುವುದು ದೇಶದ ಎಲ್ಲ ನಾಗರಿಕರ …

ಹೈಕೋರ್ಟ್ ಆದೇಶ ಪಾಲಿಸದೆ ಇದ್ದರೆ ಶಿಸ್ತುಕ್ರಮ Read More »

ಮನೆ ಮಂಜೂರಾತಿಗೆ ಅರ್ಜಿ ಸಲ್ಲಿಸಲು ಫೆ.28 ಕೊನೆಯ ದಿ‌ನ

ದಾವಣಗೆರೆ,ಫೆ,16 : ಡಾ ಬಿ.ಆರ್ ಅಂಬೇಡ್ಕರ್ ಅಭಿವೃದ್ದಿ ನಿಗಮವು 2021-22 ನೇ ಸಾಲಿನ ಪರಿಶಿಷ್ಟ ಜಾತಿ ಅಲೆಮಾರಿ, ಅರೆಅಲೆಮಾರಿ, ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಸಮುದಾಯಗಳ ಅಭಿವೃದ್ಧಿ ಕೋಶದ ವಸತಿ ಯೋಜನೆಯಡಿಯಲ್ಲಿ ಫಲಾಪೇಕ್ಷಿಗಳಿಂದ ಮನೆ ನಿರ್ಮಿಸಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ. ಫಲಾಪೇಕ್ಷಿಗಳು ಅರ್ಜಿಯನ್ನು ಆನ್‍ಲೈನ್ ಮೂಲಕ www.adcl.karnataka.gov.in ಅಥವಾ ಆಫ್‍ಲೈನ್ ಮೂಲಕ ಅರ್ಜಿ ನಮೂನೆ ಡೌನ್‍ಲೋಡ್ ಮಾಡಿಕೊಂಡು ಅಗತ್ಯ ದಾಖಲಾತಿಗಳೊಂದಿಗೆ ನಿಗಮದ ಜಿಲ್ಲಾ ಕಚೇರಿಯಲ್ಲಿ ಸಲ್ಲಿಸಬಹುದಾಗಿದೆ. ಆಫ್‍ಲೈನ್ ಮೂಲಕ ಅರ್ಜಿ ಸಲ್ಲಿಸುವ ಫಲಾಪೇಕ್ಷಿಗಳು ನಿಗಮ/ಕೋಶದ ಜಿಲ್ಲಾ ಕಛೇರಿಯನ್ನು ಸಂಪರ್ಕಿಸಿ ಉಚಿತವಾಗಿ …

ಮನೆ ಮಂಜೂರಾತಿಗೆ ಅರ್ಜಿ ಸಲ್ಲಿಸಲು ಫೆ.28 ಕೊನೆಯ ದಿ‌ನ Read More »

ಭಾರತ್ ಹುಣ್ಣಿಮೆ ಪ್ರಯುಕ್ತ ನರ್ಸರಿ ಗಾಳೆಮ್ಮದೇವಿಗೆ ಪೂಜೆ

ಮರಿಯಮ್ಮನಹಳ್ಳಿ ,,ಫೆ,16 : ಪಟ್ಟಣ ಸಮೀಪದ ರಾಷ್ಟ್ರೀಯ ಹೆದ್ದಾರಿ ನರ್ಸರಿ ಹತ್ತಿರ ಬರುವ ಶ್ರೀ ನರ್ಸರಿ ದುರ್ಗಾದೇವಿ ಮತ್ತು ಶ್ರೀ ಗಾಳೆಮ್ಮದೇವಿ ದೇವಸ್ಥಾನದಲ್ಲಿ ಭಾರತ್ ಹುಣ್ಣಿಮೆ ನಿಮಿತ್ತ 3ನೇ ವರ್ಷದ ವಿಶೇಷ ಪೂಜಾ ಕಾರ್ಯಕ್ರಮವನ್ನು ಬುಧವಾರ ದೇವಸ್ಥಾನದ ಕಮಿಟಿಯಿಂದ ಹಮ್ಮಿಕೊಳ್ಳಲಾಗಿತ್ತು. ಪೂಜಾ ಕಾರ್ಯಕ್ರಮ ನಿಮಿತ್ತ ಉಭಯ ದೇವಿಯರುಗಳಿಗೆ ಗಂಧ, ಪುಷ್ಪಾಲಂಕಾರಗಳಿಂದ ದೇವಿಯರನ್ನು ಅಲಂಕರಿಸಿ ಶಾಸ್ತ್ರೋಕ್ತವಾಗಿ ಧಾರ್ಮಿಕ ವಿದಿ-ವಿಧಾನಗಳ ಮೂಲಕ ಪೂಜಾ ಕಾರ್ಯಗಳನ್ನು ಕೈಗೊಳ್ಳಲಾಗಿತ್ತು. ಮುಂಜಾನೆ ದೇವಸ್ಥಾನದ ಹತ್ತಿರದ ತುಂಗಭದ್ರಾ ನದಿಯಲ್ಲಿ ಗಂಗೆ ಪೂಜೆಯನ್ನು ಸಕಲ ವಾದ್ಯ ಮೇಳಗಳೊಂದಿಗೆ …

ಭಾರತ್ ಹುಣ್ಣಿಮೆ ಪ್ರಯುಕ್ತ ನರ್ಸರಿ ಗಾಳೆಮ್ಮದೇವಿಗೆ ಪೂಜೆ Read More »

ನಾಳೆ ಎಸ್ಟಿ ಸಮಾಜದಿಂದ ವಿಧಾನಸೌಧಕ್ಕೆ ಮುತ್ತಿಗೆ

ಬೆಂಗಳೂರು, ಫೆ.16 : ನಾಯಕ/ವಾಲ್ಮೀಕಿ ಸಮಾಜ 30 ವರ್ಷಗಳಿಂದ ಪರಿಶಿಷ್ಟ ಪಂಗಡದ ಸಮುದಾಯಕ್ಕೆ ಶೇ.7.5 ಮೀಸಲಾತಿ ನೀಡಬೇಕೆಂದು ಹೋರಾಟ ನಡೆಸುತ್ತಿದ್ದರೂ ನಿರ್ಲಕ್ಷ್ಯ ಮಾಡುತ್ತಿರುವ ಸರ್ಕಾರದ ನಿಲುವು ವಿರೋಧಿಸಿ ಹಾಗೂ ಕೂಡಲೇ ನ್ಯಾ. ನಾಗಮೋಹನ್ ದಾಸ್ ಆಯೋಗದ ವರದಿ ಅನುಷ್ಠಾನಕ್ಕೆ ಆಗ್ರಹಿಸಿ ಕರ್ನಾಟಕದ ನಾಯಕ ಸಮಾಜದ ಸಮಾನ ಮನಸ್ಕರು ಫೆ.17ರ ನಾಳೆ ವಿಧಾನ ಸೌಧ ಚಲೋ ಹಮ್ಮಿಕೊಂಡಿದ್ದಾರೆ. ನಾಳೆ ಬೆಳಗ್ಗೆ 9.30ಕ್ಕೆ ಬೆಂಗಳೂರಿನ ಮೆಜೆಸ್ಟಿಕ್ ರೈಲ್ವೇ ನಿಲ್ದಾಣದಿಂದ ಹೊರಡಲಿರುವ ಪ್ರತಿಭಟನಾಕಾರರು ವಿಧಾನ ಸೌಧದ ವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ …

ನಾಳೆ ಎಸ್ಟಿ ಸಮಾಜದಿಂದ ವಿಧಾನಸೌಧಕ್ಕೆ ಮುತ್ತಿಗೆ Read More »

ಕನ್ನಡ ಸಾಹಿತ್ಯದ ಸುಧೆಯಲ್ಲಿ ಒಂದು ಮುಂಜಾವಿನಲಿ ಸೋನೆ ಮಳೆ ಸುರಿಸಿದವರು-ಚೆನ್ನವೀರ ಕಣವಿ

ಬೆಂಗಳೂರು,ಫೆ,16 : ಕನ್ನಡ ಸಾಹಿತ್ಯದ ಹಿರಿಯ ಚೇತನ, ಖ್ಯಾತ ಕವಿ , ನಾಡೋಜ ಚೆನ್ನವೀರ ಕಣವಿಅವರು ಇಂದು ನಮ್ಮನ್ನೆಲ್ಲ ಅಗಲಿದ್ದಾರೆ. ಈ ಮೂಲಕ ಕನ್ನಡ ಸಾಹಿತ್ಯ ಲೋಕದ ಹಿರಿಯ ಕೊಂಡಿ ಕಳಚಿದೆ. ತಮ್ಮ ಕವನಗಳು. ಸಾಹಿತ್ಯ ಗ್ರಂಥಗಳ ಮೂಲಕ ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರ ಸೇವೆ ಸಲ್ಲಿಸಿದ್ದ ಕಣವಿಯವರು ಇಂದು ಧಾರವಾಡದ ಸತ್ತೂರಿನ‌ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವೈದ್ಯಕೀಯ ಮಹಾವಿದ್ಯಾಲಯದ ಆಸ್ಪತ್ರೆಯಲ್ಲಿ ಒಂದು ತಿಂಗಳು ಹೆಚ್ಚು ಚಿಕಿತ್ಸೆ ಪಡೆದ ಕಣವಿ ಬುಧವಾರ ಬೆಳಗ್ಗೆ ಇಹಲೋಕ ತ್ಯಜಿಸಿದ್ದಾರೆ. ಕೋವಿಡ್‌ನಿಂದ …

ಕನ್ನಡ ಸಾಹಿತ್ಯದ ಸುಧೆಯಲ್ಲಿ ಒಂದು ಮುಂಜಾವಿನಲಿ ಸೋನೆ ಮಳೆ ಸುರಿಸಿದವರು-ಚೆನ್ನವೀರ ಕಣವಿ Read More »

ನಾಡೋಜ ಚನ್ನವೀರ ಕಣವಿ ನಿಧನಕ್ಕೆ ಸ್ಪೀಕರ್ ಸಂತಾಪ

ಬೆಂಗಳೂರು, ಫೆ.16: ಖ್ಯಾತ ಸಾಹಿತಿ, ಕವಿ, ಚಿಂತಕ, ಬೋಧಕ ಶ್ರೀ ಚನ್ನವೀರ ಕಣವಿ ಅವರ ನಿಧನಕ್ಕೆ ವಿಧಾನಸಭೆಯ ಸ್ಪೀಕರ್ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ ಕಂಬನಿ ಮಿಡಿದಿದ್ದಾರೆ. ಹೊಸಗನ್ನಡ ಕಾವ್ಯ ಪರಂಪರೆಯ 2ನೇ ತಲೆಮಾರಿನ ಸಾಹಿತ್ಯ ಲೋಕದಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಹಿರಿಯ ಕವಿ ಚನ್ನವೀರ ಕಣವಿಯವರ ನಿಧನದಿಂದ ಸಾಹಿತ್ಯಲೋಕದ ಮತ್ತೊಂದು ಕೊಂಡಿ ಕಳಚಿದ್ದು, ಈ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಶ್ರೀ ಕಾಗೇರಿ ತಮ್ಮ ಸಂತಾಪದಲ್ಲಿ ತಿಳಿಸಿದ್ದಾರೆ. ಪ್ರಥಮತಃ ಶಿಕ್ಷಕರಾಗಿ, ನಂತರ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. …

ನಾಡೋಜ ಚನ್ನವೀರ ಕಣವಿ ನಿಧನಕ್ಕೆ ಸ್ಪೀಕರ್ ಸಂತಾಪ Read More »

ಮಾಧ್ಯಮ ವಕ್ತಾರರದು ಕಠಿಣ ಸವಾಲುಗಳಿರುವ ಶ್ರೇಷ್ಠ ಹುದ್ದೆ

ಬೆಂಗಳೂರು,15 : ಮಾಧ್ಯಮ ವಕ್ತಾರರದು ಕಠಿಣ ಸವಾಲುಗಳಿರುವ ಶ್ರೇಷ್ಠ ಹುದ್ದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ಸಂಸದರಾದ ನಳಿನ್ ಕುಮಾರ್ ಕಟೀಲ್ ಅವರು ತಿಳಿಸಿದರು. ನಗರದ ಮಲ್ಲೇಶ್ವರದ ಪಕ್ಷದ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ರಾಜ್ಯ-ಜಿಲ್ಲಾ ವಕ್ತಾರರ ಸಭೆ “ಮಾಧ್ಯಮ ಮಂಥನ”ದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ವಕ್ತಾರರು ಪಕ್ಷದ ಮುಖವಾಣಿ. ತತ್ವ, ಸಿದ್ಧಾಂತ ತಿಳಿಸುವ ಮಹತ್ವದ ಹೊಣೆ ಅವರ ಮೇಲಿದೆ. ವಕ್ತಾರರ ನುಡಿ ಪಕ್ಷದ ವಿಚಾರವಾಗುತ್ತದೆ. ಜನ ಗಮನಿಸುವ ಹುದ್ದೆ ಇದು ಎಂದು ಅವರು …

ಮಾಧ್ಯಮ ವಕ್ತಾರರದು ಕಠಿಣ ಸವಾಲುಗಳಿರುವ ಶ್ರೇಷ್ಠ ಹುದ್ದೆ Read More »

ಮಲಪ್ರಭಾ ಅಚ್ಚಕಟ್ಟು ಪ್ರದೇಶದ ರಸ್ತೆ ದುರಸ್ತಿಗೆ ಕ್ರಮ: ಗೋವಿಂದ ಕಾರಜೋಳ

ಬೆಂಗಳೂರು,15 : ಮಲಪ್ರಭಾ ಯೋಜನೆಯ ಅಚ್ಚುಕಟ್ಟು ಪ್ರದೇಶದಲ್ಲಿನ ಸವದತ್ತಿ ತಾಲ್ಲೂಕಿನ ಏಣಗಿ-ಹಳೆ ಏಣಗಿ ಮಲ್ಲೂರು-ಜಾಕವೆಲ್ ರಸ್ತೆ, ಬಡ್ಲಿ-ಹಳೇ ಬಡ್ಲಿ, ಸುತಗಟ್ಟಿ-ಹಿಟ್ಟಣಗಿ-ಏಣಗಿ ರಸ್ತೆಗಳ ದುರಸ್ತಿಗಾಗಿ ಕರ್ನಾಟಕ ನೀರಾವರಿ ನಿಗಮದಿಂದ ಅಂದಾಜು ಪತ್ರಿಕೆಯನ್ನು ತಯಾರಿಸಲಾಗುತ್ತಿದ್ದು, ಆದಷ್ಟೂ ಬೇಗ ಮಂಜೂರಾತಿ ಕೊಡಲಾಗುವುದು ಎಂದು ಜಲ ಸಂಪನ್ಮೂಲ ಸಚಿವ ಶ್ರೀ ಗೋವಿಂದ ಎಂ. ಕಾರಜೋಳರವರು ವಿಧಾನಸಭೆಗೆ ಇಂದು ತಿಳಿಸಿದರು. ಪ್ರಶ್ನೋತ್ತರ ವೇಳೆಯಲ್ಲಿ ಇಂದು ಬೈಲಹೊಂಗಲ ಶಾಸಕ ಮಹಾಂತೇಶ್ ಕೌಜಲಗಿಯವರ ಪ್ರಶ್ನೆಗೆ ಮಾನ್ಯ ಸಚಿವರು ಉತ್ತರಿಸಿದರು. ಏಣಗಿ-ಹಳೆ ಏಣಗಿ ಗ್ರಾಮದವರೆಗಿನ ೬.೦೦ ಕಿ.ಮೀ ಉದ್ದದ …

ಮಲಪ್ರಭಾ ಅಚ್ಚಕಟ್ಟು ಪ್ರದೇಶದ ರಸ್ತೆ ದುರಸ್ತಿಗೆ ಕ್ರಮ: ಗೋವಿಂದ ಕಾರಜೋಳ Read More »

ಉತ್ತರ ಕರ್ನಾಟಕದಲ್ಲಿ ಜೆಡಿಎಸ್ ಬಲವರ್ಧನೆಗೆ ಸರ್ವ ಕ್ರಮ

ಬೆಂಗಳೂರು,15 : ವಿಜಯಪುರ ಜಿಲ್ಲೆಯ ಸಿಂದಗಿ ವಿಧಾನಸಭೆ ಕ್ಷೇತ್ರದ ಪ್ರಭಾವಿ ಮುಖಂಡ ಹಾಗೂ ನಿವೃತ್ತ ಯೋಧ ಶಿವಾನಂದ ಪಾಟೀಲ್ ಅವರು ತಮ್ಮ ನೂರಾರು ಬೆಂಬಲಿಗರ ಜತೆಯಲ್ಲಿ ಇಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಸಮ್ಮುಖದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು. ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಅವರು ಶಿವಾನಂದ ಪಾಟೀಲ್ ಅವರಿಗೆ ಪಕ್ಷದ ಶಾಲು ಹೊದಿಸಿ ಪಕ್ಷದ ಧ್ವಜವನ್ನು ನೀಡುವ ಮೂಲಕ ಪಕ್ಷಕ್ಕೆ ಬರಮಾಡಿಕೊಂಡರು. ಅವರ ಜತೆಯಲ್ಲಿ ಆ ಕ್ಷೇತ್ರದ ನೂರಾರು ಕಾರ್ಯಕರ್ತರು ಕೂಡ ಪಕ್ಷಕ್ಕೆ ಸೇರ್ಪಡೆಯಾದರು. ತದನಂತರ ಮಾತನಾಡಿದ …

ಉತ್ತರ ಕರ್ನಾಟಕದಲ್ಲಿ ಜೆಡಿಎಸ್ ಬಲವರ್ಧನೆಗೆ ಸರ್ವ ಕ್ರಮ Read More »

Translate »
Scroll to Top