ರಾಗಿ ನೊಂದಣಿ ದಿಡೀರ್ ಸ್ಥಗಿತ ರೈತರ ಆಕ್ರೋಶ
ಹುಳಿಯಾರು: ಬೆಂಬಲ ಬೆಲೆಯಲ್ಲಿ ರಾಗಿ ಖರೀದಿಸುವ ಸಲುವಾಗಿ ಸರ್ಕಾರ ೨ ನೇ ಹಂತದ ನೊಂದಣಿ ಕಾರ್ಯ ಆರಂಭಿಸಿದ ೨೭ ಗಂಟೆಯೊಳಗೆ ಸ್ಥಗಿತಗೊಳಿಸಿದ್ದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.ಮೊದಲ ಹಂತದ ರಾಗಿ ಖರೀದಿ ಪ್ರಕ್ರಿಯೆ ಮುಗಿದು ರೈತರ ಖಾತೆಗಳಿಗೆ ಹಣ ವರ್ಗಾವಣೆಯಾದ ನಂತರ ೨ ನೇ ಹಂತದ ರಾಗಿ ಖರೀದಿಗಾಗಿ ನೊಂದಣಿ ಕಾರ್ಯಕ್ಕೆ ಸರ್ಕಾರ ಹಸಿರು ನಿಶಾನೆ ತೋರಿತ್ತು. ಆದರೆ ಏ.೨೫ ರಂದು ನೊಂದಣಿ ಕಾರ್ಯ ಆರಂಭಿಸುವುದಾಗಿ ಸರ್ಕಾರ ಘೋಷಿಸಿದ್ದರೂ ಸಹ ಏ.೨೬ ರ ಮಧ್ಯಾಹ್ನದವರೆವಿಗೂ ನೊಂದಣಿ ಕಾರ್ಯ ಆರಂಭವಾಗಲಿಲ್ಲ. …