hospete

ಕಾಲಿನಿಂದ ಮತದಾನ ಮಾಡಿದ ದಿವ್ಯಾಂಗರಾದ ಎನ್, ಲಕ್ಷ್ಮೀದೇವಿ

ಹೊಸಪೇಟೆ: ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಗುಂಡುಮುಣುಗು ಗ್ರಾಮದಲ್ಲಿ ಎರಡು ಕೈ ಇಲ್ಲದ ವಿಶೇಷ ಚೇತನರಾದ ಎನ್, ಲಕ್ಷ್ಮೀದೇವಿ ಅವರಿಂದ ಕಾಲಿನಿಂದ ಮತದಾನ ಮಾಡಿದರು.ಗುಂಡುಮುಣುಗು ಗ್ರಾಮದ ಮತಗಟ್ಟೆ ಸಂಖ್ಯೆ 122 ರಲ್ಲಿ ಕಾಲಿನಿಂದಲೇ ಸಹಿಮಾಡಿ ಮತಚಲಾಯಿಸಿದರು.

ವಿಜಯನಗರ ಉಸ್ತುವಾರಿ ಸಚಿವ ಜಮೀರ್ ಅಹಮ್ಮದ್ ಖಾನ್ ಹೇಳಿಕೆ

ಹೊಸಪೇಟೆ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣನರನ್ನು ಉಚ್ಚಾಟನೆ ಮಾಡಿದ್ದು ಅವರ ಪಕ್ಷದ ಆಂತರಿಕ ವಿಚಾರ ಅವರು ವಿದೇಶಕ್ಕೆ ಹಾರಿದ್ದಾರೆ ಅನ್ನೋದನ್ನ ನಾನು ಮಾಧ್ಯಮದಲ್ಲೇ ನೋಡಿ ತಿಳ್ಕೊಂಡಿದ್ದು ಬಿಜೆಪಿಯವರಿಗೆ ಯಾರು ಯಾವ ದೇಶಕ್ಕೆ ಹೋಗ್ತಾರೆ ಅನ್ಮೋದು ಗೊತ್ತಾಗ್ತದೆ ನಮ್ಮ ಪ್ರಿಯಾಂಕಾ ಗಾಂಧಿ ಹೋಗಿದ್ದೇಲ್ಲಾ ಹೇಳ್ತಾರೆ, ಆದ್ರೆ ಪ್ರಜ್ವಲ್ ರೇವಣ್ಣ ಹೋಗಿದ್ದು, ಬಿಜೆಪಿಗೆ ಗೊತ್ತಾಗೋಲ್ವಾ-?

ಲಾರಿ ಹಾರದು ಬೈಕ್ ಸಾವರ ಸಾವು:  ಸಾವಿರಾರು ವಾಹನಗಳು ರಸ್ತೆಯಲ್ಲಿ ಸ್ಥಗಿತ

ಬಳ್ಳಾರಿ : ನಗರದ 33ನೇ ವಾರ್ಡ್ ವಿನಾಯಕ ನಗರದಲ್ಲಿ ಭೀಕರ ಭೀಕರ ರಸ್ತೆ ಅಪಘಾತ ಮಂಗಳವಾರ ಬೆಳಿಗ್ಗೆ ನಡೆದಿದೆ. ಈ ರಸ್ತೆ ಅಪಘಾತದಲ್ಲಿ ಬೈಕ್ ಸಾವಿರ ಹೊನ್ನಪ್ಪ (50)ಕಂಪ್ಲಿ ಮುದ್ದಾಪುರ ಗ್ರಾಮವಾಸಿ ಅಧಿಕ ಟನ್ನೆಜ್ ಇರುವ ಲಾರಿ ka/ 40 / 7596 ಬೈಕ್ ಸಾವರ ಮೇಲೆ ಹರಿದು ಘಟನಾ ಸ್ಥಳದಲ್ಲಿ ಸಾವನಪ್ಪಿದ್ದಾನೆಎಂದು ಟ್ರಾಫಿಕ್ ಪೊಲೀಸ್ ಠಾಣೆಯ ಸಿಬ್ಬಂದಿ ತಿಳಿಸಿದ್ದಾರೆ. ಬೈಕ್ ಸಾವರ ಹೊನ್ನಪ್ಪ ಕುಡುತ್ತಿನಿ ಯೂನಿಯನ್ ಬ್ಯಾಂಕ್ ನಲ್ಲಿ ರಿಕವರಿ ಕೆಲಸ ಮಾಡುತ್ತಿದ್ದನೆಂದು ಪೊಲೀಸರು ತಿಳಿಸಿದ್ದಾರೆ.

ಈ.ತುಕಾರಾಂ ಗೆಲ್ಲಲೇಬೇಕು- ಶ್ರೀರಾಮುಲು ಸೋಲಲೇಬೇಕು. ಇದು ನನ್ನ ಸ್ಪಷ್ಟ ತೀರ್ಮಾನ: ಸಿ.ಎಂ

ಹೊಸಪೇಟೆ : ಮೋದಿ ಪ್ರಧಾನಿಯಾದಿ ಇಡಿ ದೇಶದ ಜನರ ಕೈಗೆ ಚೊಂಬು ಕೊಟ್ಟರು. ಶ್ರೀರಾಮುಲು ಸಚಿವರಾಗಿ, ಸಂಸದರಾಗಿ ಬಳ್ಳಾರಿ ಜಿಲ್ಲೆಗೆ ಚೊಂಬು ಕೊಟ್ಟರು ಎಂದು ಸಿ.ಎಂ.ಸಿದ್ದರಾಮಯ್ಯ ವ್ಯಂಗ್ಯವಾಡಿದರು.

ಶ್ರೀ ಜಂಬುನಾಥ ರಥೋತ್ಸವದಲ್ಲಿ ಅವಘಡ : ರಥದ ಚಕ್ರದಡಿ ಸಿಲುಕಿ ವ್ಯಕ್ತಿ ಸಾವು  

ಹೊಸಪೇಟೆ: ವಿಜಯನಗರ ಜಿಲ್ಲೆಯ ಹೊಸಪೇಟೆಯ ಹೊರವಲಯದ ಶ್ರೀ ಜಂಬುನಾಥೇಶ್ವರನ ಜಾತ್ರಾ ಮಹೋತ್ಸವದಲ್ಲಿ ಬಾರಿ ಅವಘಡ ಸಂಭವಿಸಿದೆ, ಮೃತ ವ್ಯಕ್ತಿ ರಾಮು (೪೫) ರಥ ಕಟ್ಟುವ ಕೆಲಸ ಮಾಡುತ್ತಿದ್ದರು, ಈ ಬಾರಿ ರಥ ಕಟ್ಟುವಾಗ ಬಾಳೆ ಹಣ್ಣಿನ ಮೇಲೆ ಕಾಲಿಟ್ಟು ಜಾರಿ ಬಿದ್ದಾಗ ಕಾಲಿನ ಮೇಲೆ ರಥ ಹರಿದು ಹೋಗಿದೆ ಎಂದು ತಿಳಿದು ಬಂದಿದೆ.

ಸ್ಮರಣಾರ್ಥ  ಮೂರು ದಿನಗಳ ಫುಟ್ಬಾಲ್ ಪಂದ್ಯಾವಳಿ

ವಿಜಯನಗರ ಯುನೈಟೆಡ್ ಕ್ರೀಡಾ ಮತ್ತು ಸಾಂಸ್ಕತಿಕ ಸಂಸ್ಥೆಯಿಂದ ಪುನೀತ್ ರಾಜ್ಕು್ಮಾರ್ ಸ್ಮರಣಾರ್ಥ ಮೂರು ದಿನಗಳ ಫುಟ್ಬಾಲ್ ಪಂದ್ಯಾವಳಿ

ವಿಶ್ವ ವಿಖ್ಯಾತ ಹಂಪಿಯಲ್ಲಿ ಮಾಜಿ ಸೈನಿಕರಿಂದ ಸ್ವಚ್ಛತಾ ಸೇವೆ

ದೇಶಾದ್ಯಂತ ನಡೆದ ಸ್ವಚ್ಛತೆಯೇ ಸೇವೆ ಅಭಿಯಾನದಡಿ ಯುನೆಸ್ಕೋ ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಮಹೋನ್ನತ ಸ್ಥಾನ ಪಡೆದಿರುವ ವಿಶ್ವವಿಖ್ಯಾತ ಹಂಪಿಯಲ್ಲಿ ಮಾಜಿ ಸೈನಿಕರು ಮತ್ತು ವೀರ ನಾರಿಯರಿಂದ ಸ್ವಚ್ಛತಾ ಅಭಿಯಾನ ನಡೆಯಿತು

ಕ್ರೀಡಾಸ್ಪೂರ್ತಿಯಂದ ಆಟವಾಡಿ ವಿಜೇತರಾಗಿ: ಸಚಿವ ಆನಂದಸಿಂಗ್

ಹೊಸಪೇಟೆ: ವಿಜಯನಗರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸಂಯುಕ್ತಾಶ್ರಯದಲ್ಲಿ ಹೊಸಪೇಟೆಯ ಜಿಲ್ಲಾ ಕ್ರೀಡಾಂಗಣದಲ್ಲಿ ಪ್ರಥಮಬಾರಿಗೆ ಹಮ್ಮಿಕೊಳ್ಳಲಾಗಿದ್ದ ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಮಟ್ಟದ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳ ಕಾರ್ಯಕ್ರಮಕ್ಕೆ ಪ್ರವಾಸೋದ್ಯಮ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವರಾದ ಆನಂದ್ ಸಿಂಗ್ ಅವರು ಗುರುವಾರದಂದು ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ಜಿಲ್ಲೆಯಲ್ಲಿ ಪ್ರಥಮಬಾರಿಗೆ ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಮಟ್ಟದ ಕ್ರೀಡಾಕೂಟ ಹಾಗೂ …

ಕ್ರೀಡಾಸ್ಪೂರ್ತಿಯಂದ ಆಟವಾಡಿ ವಿಜೇತರಾಗಿ: ಸಚಿವ ಆನಂದಸಿಂಗ್ Read More »

ವರನಟ ಡಾ.ರಾಜ್ ಕುಮಾರ್ ಅವರ ಜಯಂತಿ ಆಚರಣೆ

ಹೊಸಪೇಟೆ: ವಿಜಯನಗರ ಜಿಲ್ಲಾಡಳಿತ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಂಯುಕ್ತಾಶ್ರಯ ವತಿಯಿಂದ ಡಾ.ರಾಜ್ ಕುಮಾರ್ ಅವರ ಜಯಂತಿಯನ್ನು ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಭಾನುವಾರದಂದು ಸರಳವಾಗಿ ಆಚರಿಸಲಾಯಿತು. ಡಾ.ರಾಜ್ ಕುಮಾರ್ ಅವರ‌ ಭಾವಚಿತ್ರಕ್ಕೆ ಅಪರ ಜಿಲ್ಲಾಧಿಕಾರಿಗಳಾದ ಮಹೇಶ್ ಬಾಬು ಅವರು ಪುಷ್ಪ ನಮನ ಸಲ್ಲಿಸಿ ಎಲ್ಲಾರಿಗೂ ಡಾ.ರಾಜ್ ಕುಮಾರ್ ಅವರ ಜಯಂತಿಯ ಶುಭಾಶಯಗಳನ್ನು ತಿಳಿಸಿ ನಂತರ ಅವರು ಮಾತನಾಡಿ ಜಿಲ್ಲಾಡಳಿತದ ವತಿಯಿಂದ ಪ್ರಥಮ ಬಾರಿಗೆ ಡಾ.ರಾಜ್ ಕುಮಾರ್ ಅವರ ಜಯಂತಿಯನ್ನು ಆಚರಿಸಲಾಗುತ್ತಿದೆ ಎಂದರು. ಈ ಸಂದರ್ಭದಲ್ಲಿ …

ವರನಟ ಡಾ.ರಾಜ್ ಕುಮಾರ್ ಅವರ ಜಯಂತಿ ಆಚರಣೆ Read More »

Translate »
Scroll to Top