ಲಾರಿ ಹಾರದು ಬೈಕ್ ಸಾವರ ಸಾವು:  ಸಾವಿರಾರು ವಾಹನಗಳು ರಸ್ತೆಯಲ್ಲಿ ಸ್ಥಗಿತ

ಬಳ್ಳಾರಿ : ನಗರದ 33ನೇ ವಾರ್ಡ್ ವಿನಾಯಕ ನಗರದಲ್ಲಿ ಭೀಕರ  ಭೀಕರ ರಸ್ತೆ ಅಪಘಾತ ಮಂಗಳವಾರ ಬೆಳಿಗ್ಗೆ ನಡೆದಿದೆ. ಈ ರಸ್ತೆ ಅಪಘಾತದಲ್ಲಿ  ಬೈಕ್ ಸಾವಿರ ಹೊನ್ನಪ್ಪ (50)ಕಂಪ್ಲಿ ಮುದ್ದಾಪುರ ಗ್ರಾಮವಾಸಿ ಅಧಿಕ ಟನ್ನೆಜ್ ಇರುವ ಲಾರಿ ka/ 40 / 7596 ಬೈಕ್ ಸಾವರ ಮೇಲೆ ಹರಿದು ಘಟನಾ ಸ್ಥಳದಲ್ಲಿ ಸಾವನಪ್ಪಿದ್ದಾನೆಎಂದು ಟ್ರಾಫಿಕ್ ಪೊಲೀಸ್ ಠಾಣೆಯ ಸಿಬ್ಬಂದಿ ತಿಳಿಸಿದ್ದಾರೆ. ಬೈಕ್ ಸಾವರ ಹೊನ್ನಪ್ಪ ಕುಡುತ್ತಿನಿ  ಯೂನಿಯನ್ ಬ್ಯಾಂಕ್ ನಲ್ಲಿ ರಿಕವರಿ ಕೆಲಸ ಮಾಡುತ್ತಿದ್ದನೆಂದು ಪೊಲೀಸರು ತಿಳಿಸಿದ್ದಾರೆ.

ಈ ಘಟನೆ ನಡೆದು ಕೆಲವು ಗಂಟೆಗಳು ಅದರು ಸಿಬ್ಬಂದಿ ಯಾರು ಘಟನಸ್ಥಳಕ್ಕೆ ಬಾರದ ಕಾರಣ 2 ರಿಂದ 3 ಕಿಲೋಮೀಟರ್ ವರೆಗೆ ಸಾವಿರಾರು ವಾಹನಗಳು ಹೊಸಪೇಟೆಯ ಪ್ರಧಾನ ರಸ್ತೆಯಲ್ಲಿ ಸ್ಥಗಿತವಾಗಿದ್ದಾವೆ. ಜಿಂದಾಲ್ ಕಾರ್ಖಾನೆ ಹಾಗೂ ಕುಡುತ್ತಿನಿ ಪವರ್ ಪ್ಲಾಂಟ್ ಮತ್ತು ಶಾಲಾ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು ಹಾಗೂ ಪ್ರಯಾಣ ಮಾಡುತ್ತಿರುವ ಪ್ರಯಾಣಿಕರು ವಾಹನಗಳಿಂದ ಕೆಳಗಡೆ ಇಳಿದು ಸಾವಿರಾರು ಸಂಖ್ಯೆಯಲ್ಲಿ ರಸ್ತೆಯಲ್ಲಿ ನಿಂತ ಘಟನೆ ಕಂಡು ಬಂತು.

 ಆನಂತರ ಪೊಲೀಸರು ಘಟನಾ ಸ್ಥಳಕ್ಕೆ ಬಂದ ನಂತರ ಸ್ಥಳೀಯರು ಮತ್ತು ಪ್ರಯಾಣಿಕರು ಹಾಗೂ ವಿವಿಧ  ಕಾರ್ಖಾನೆಗಳಿಗೆ ಹೋಗುವ ಸಿಬ್ಬಂದಿ ಪೊಲೀಸ್ ಅಧಿಕಾರಿಗಳಿಗೆ ತರಾಟೆಗೆ ತಗೊಂದರು.

 ಈ ರಸ್ತೆ ಮಾರ್ಗದಲ್ಲಿ ದಿನನಿತ್ಯ ಇಂಥ ಘೋರ ಘಟನೆಗಳು ನಡೆಯುತ್ತಿದ್ದಾವೆ.

 

 ರಸ್ತೆ ಅಗಲೀಕರಣ ಆಗಬೇಕು ಮತ್ತು ಟ್ರಾಫಿಕ್ ನಿಯಂತ್ರಣ ತಪ್ಪಿಸಬೇಕು ಎಂದು ಪ್ರಯಾಣಿಕರು, ಸ್ಥಳೀಯರು ಆಕ್ರೋಶ ವ್ಯಕ್ತವಾಗಿದ್ದಾರೆ.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top