davanagerenews

ಖಾಸಗಿ ಕ್ಷಣದ ವೀಡಿಯೋ ವೈರಲ್ ವಿದ್ಯಾರ್ಥಿಗಳಿಬ್ಬರು ಆತ್ಮಹತ್ಯೆ

ಖಾಸಗಿ ಕ್ಷಣಗಳ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿರುವುದರಿಂದ ಮನನೊಂದ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ದಾವಣಗೆರೆ ನಗರದಲ್ಲಿ ನಡೆದಿದೆ

ದಾವಣಗೆರೆಮತ್ತೆ ದಾವಣಗೆರೆ ಮಹಾನಗರ ಪಾಲಿಕೆ ಬಿಜೆಪಿ ತೆಕ್ಕೆಗೆ; ನಡೆಯದ ಕಾಂಗ್ರೆಸ್ ಆಟ

ದಾವಣಗೆರೆ: ಕಳೆದ ಬಾರಿಯಂತೆ ಈ ಬಾರಿಯೂ ಬಿಜೆಪಿಯ ಮ್ಯಾಜಿಕ್ ವರ್ಕೌಟ್ ಆಗಿದ್ದು, ಮತ್ತೊಮ್ಮೆ ಬಿಜೆಪಿ ದಾವಣಗೆರೆ ಮಹಾನಗರ ಪಾಲಿಕೆ ಅಧಿಕಾರಕ್ಕೇರಿದೆ. ಇನ್ನು ಕಾಂಗ್ರೆಸ್ ಹೆಚ್ಚು ಸದಸ್ಯರನ್ನು ಹೊಂದಿದ್ದರೂ ಅಧಿಕಾರಕ್ಕೇರಲು ಸಾಧ್ಯವಾಗಿಲ್ಲ. ದಾವಣಗೆರೆ ಮಹಾ ನಗರಪಾಲಿಕೆ 30ನೇ ವಾರ್ಡ್‌ನ ಪಕ್ಷೇತರ ಅಭ್ಯರ್ಥಿ ಆರ್. ಜಯಮ್ಮ ಗೋಪಿನಾಯ್ಕ ಹಾಗೂ ಉಪಮೇಯರ್ ಆಗಿ 8ನೇ ವಾರ್ಡ್‌ನ ಬಿಜೆಪಿಯ ಗಾಯಿತ್ರಮ್ಮ ಖಂಡೋಜಿರಾವ್ 3ನೇ ಅವಧಿಗೆ ಆಯ್ಕೆಯಾಗಿದ್ದಾರೆ. ಬಿಜೆಪಿಗೆ 18 ಸದಸ್ಯರು, 4 ಪಕ್ಷೇತರರು, ಒರ್ವ ಶಾಸಕ, ಸಂಸದ ಹಾಗೂ 5 ವಿಧಾನ ಪರಿಷತ್ …

ದಾವಣಗೆರೆಮತ್ತೆ ದಾವಣಗೆರೆ ಮಹಾನಗರ ಪಾಲಿಕೆ ಬಿಜೆಪಿ ತೆಕ್ಕೆಗೆ; ನಡೆಯದ ಕಾಂಗ್ರೆಸ್ ಆಟ Read More »

ವಿದ್ಯಾರ್ಥಿನಿಯ ಬಂಗಾರದ ಸರ ಕಿತ್ತುಕೊಂಡು ಪರಾರಿಯಾದ ದುಷ್ಕರ್ಮಿ

ದಾವಣಗೆರೆ: ಕಾಲೇಜ್ ಗೆ ಹೋಗಿದ್ದ ವಿದ್ಯಾರ್ಥಿನಿ ಕೊರಳಿನಲಿದ್ದ 10 ಗ್ರಾಂ ತೂಕದ 45 ಸಾವಿರ ಮೌಲ್ಯದ ಬಂಗಾರದ ಸರವನ್ನು ದುಷ್ಕರ್ಮಿಯೊಬ್ಬ ಕಿತ್ತುಕೊಂಡು ಪರಾರಿಯಾದ ಘಟನೆ ಎಸ್ ಎಸ್ ಲೇಔಟ್ ಬಿ ಬ್ಲಾಕ್ ನಲ್ಲಿ ನಡೆದಿದೆ. ತಾಲ್ಲೂನಿಕ ಬಸವನಾಳ್ ಗ್ರಾಮದ ನಾಗರಾಜಯ್ಯ ಅವರ ಮಗಳಾದ ದೀಕ್ಷಿತ ದಾವಣಗೆರೆ ನಗರದ ಅಥಣಿ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದು, ಸ್ಕಾಲ್ ಶಿಪ್ ಗೆ ಅರ್ಜಿ ಸಲ್ಲಿಸಲು ದಾಖಲಾತಿ ಜೆರಾಕ್ಸ್ ಮಾಡಿಸಲು ಎಂಬಿಎ ಕಾಲೇಜ್ ರಸ್ತೆಯಲ್ಲಿ ಹೋಗುತ್ತಿದ್ದಾಗ ಪಲ್ಸರ್ ಬೈಕ್ ನಲ್ಲಿ ಬಂದ …

ವಿದ್ಯಾರ್ಥಿನಿಯ ಬಂಗಾರದ ಸರ ಕಿತ್ತುಕೊಂಡು ಪರಾರಿಯಾದ ದುಷ್ಕರ್ಮಿ Read More »

ಕಾಂಗ್ರೆಸಿಗರು ಪರ್ಸೆಂಟೇಜ್ ಜನರು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ದಾವಣಗೆರೆ: ಗುತ್ತಿಗೆದಾರರ ಪತ್ರವನ್ನಿಟ್ಟುಕೊಂಡು ಕಾಂಗ್ರೆಸ್ ಮುಖಂಡರು ರಾಜ್ಯಪಾಲರಿಗೆ ನೀಡಿರುವ ದೂರು ಅತ್ಯಂತ ಹಾಸ್ಯಾಸ್ಪದ. ಕಾಂಟ್ರಕ್ಟರ್ ಗೆ ಯಾವ ಅವಧಿಯಲ್ಲಿ ಪರ್ಸೆಂಟೇಜ್​ ಅನುಭವ ಆಗಿದೆ ಎಂಬುದನ್ನು ಪತ್ರದಲ್ಲಿ ಉಲ್ಲೇಖಿಸಿಲ್ಲ. ಪರ್ಸೆಂಟ್ ಜಾಸ್ತಿಯಾಗಿದ್ದು ಕಾಂಗ್ರೆಸ್ ಕಾಲದಲ್ಲಿಯೇ. ಹೀಗಾಗಿ ಪರ್ಸೆಂಟ್ ಜನಕರು ಕಾಂಗ್ರೆಸಿಗರು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ಪರ್ಸೆಂಟೇಜ್ ಬಗ್ಗೆ ಮಾತನಾಡಿದ ವಿಡಿಯೋ ಪ್ರಚಾರ ಆಗಿದ್ದು, ಅದು ಯಾರನ್ನು ಎಂದಬುದು ಎಲ್ಲರಿಗೂ ಗೊತ್ತಿದೆ ಎಂದು ಅವರು ತಿರುಗೇಟು ನೀಡಿದರು.ಗುತ್ತಿಗೆದಾರರು ಕೊಟ್ಟಿರುವ ಪತ್ರದಲ್ಲೇ ಸ್ಪಷ್ಟತೆ …

ಕಾಂಗ್ರೆಸಿಗರು ಪರ್ಸೆಂಟೇಜ್ ಜನರು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ Read More »

ಪರಿಷತ್ ಚುನಾವಣೆ: ಜೆಡಿಎಸ್ ಜತೆ ಹೊಂದಾಣಿಕೆ; ಮಾಜಿ ಸಿಎಂ ಯಡಿಯೂರಪ್ಪ ದಾವಣಗೆರೆಯಲ್ಲಿ ಹೇಳಿಕೆ

ದಾವಣಗೆರೆ: ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್, ಬಿಜೆಪಿ ಹೊಂದಾಣಿಕೆ ಬಗ್ಗೆ ಶೀಘ್ರದಲ್ಲೇ ನಿರ್ಧಾರ ಮಾಡುತ್ತೇವೆ. ಪರಸ್ಪರ ಸಹಕಾರ ಕೊಡಿ ಎಂದು ಅವರಲ್ಲಿ ಕೇಳುತ್ತೇವೆ ಎಂದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು. ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಸಂತೆಬೆನ್ನೂರಿನಲ್ಲಿ ವಿಧಾನ ಪರಿಷತ್ ಚುನಾವಣಾ ಪ್ರಚಾರ ಸಭೆಗೆ ಆಗಮಿಸಿದ ವೇಳೆ ಮಾತನಾಡಿದ ಅವರು, ಜೆಡಿಎಸ್ ಜೊತೆ ಹೊಂದಾಣಿಕೆ ಬಗ್ಗೆ ಇಷ್ಟರಲ್ಲಿಯೇ ನಿರ್ಧಾರ ಮಾಡುತ್ತೇವೆ. ಈ ಮೂಲಕ ಪರೋಕ್ಷವಾಗಿ ಜೆಡಿಎಸ್ ಜೊತೆ ಹೊಂದಾಣಿಕೆ ವಿಚಾರವನ್ನು ಒಪ್ಪಿಕೊಂಡರು. ಈ ಬಗ್ಗೆ ಜೆಡಿಎಸ್ ಜೊತೆ …

ಪರಿಷತ್ ಚುನಾವಣೆ: ಜೆಡಿಎಸ್ ಜತೆ ಹೊಂದಾಣಿಕೆ; ಮಾಜಿ ಸಿಎಂ ಯಡಿಯೂರಪ್ಪ ದಾವಣಗೆರೆಯಲ್ಲಿ ಹೇಳಿಕೆ Read More »

ಚಾಕು ತೋರಿಸಿ ಮಹಿಳೆಯ ಸರ ಕಿತ್ಕೊಂಡು ಹೋಗುತ್ತಿದ್ದ ಅಂತರ್ ಜಿಲ್ಲಾ ಆರೋಪಿಗಳ ಬಂಧನ

ದಾವಣಗೆರೆ: ಮಹಿಳೆಗೆ ಚಾಕುವನ್ನುತೋರಿಸಿ, ಹಲ್ಲೆ ಮಾಡಿ ಮಾಂಗಲ್ಯ ಸರ ಕಿತ್ತುಕೊಂಡು ಹೋಗುತ್ತಿದ್ದ ಏಳು ಅಂತರ್ ಜಿಲ್ಲಾ ಆರೋಪಿತರನ್ನು ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಪೊಲೀಸರು ಬಂಧಿಸಿದ್ಧಾರೆ. ಅದರಲ್ಲೂ ಕೃತ್ಯ ನಡೆದ ಒಂದು ಗಂಟೆಯಲ್ಲಿಯೇ ಪ್ರಕರಣ ಭೇದಿಸಿದ್ಧಾರೆ. ನಲ್ಕುದುರೆ ಗ್ರಾಮದಲ್ಲಿ ಮಹಿಳೆಗೆ ಚಾಕುವನ್ನುತೋರಿಸಿ ಹಲ್ಲೆ ಮಾಡಿ ಮಾಂಗಲ್ಯ ಸರವನ್ನು ಕಿತ್ತುಕೊಂಡು ಹೋಗಿದ್ದ ಮಾಹಿತಿಯನ್ನಾಧರಿಸಿ ಆರೋಪಿತರನ್ನು ಬೆನ್ನಟ್ಟಿ ಘಟನೆ ನಡೆದ ಒಂದು ಗಂಟೆ ಅವಧಿಯಲ್ಲಿ ಲಿಂಗದಹಳ್ಳಿ ಗ್ರಾಮದಲ್ಲಿ ಬಂಧಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದ ಸುಮಾರು 80 ಸಾವಿರ ಬೆಲೆ ಬಾಳುವ 15 ಗ್ರಾಂ. …

ಚಾಕು ತೋರಿಸಿ ಮಹಿಳೆಯ ಸರ ಕಿತ್ಕೊಂಡು ಹೋಗುತ್ತಿದ್ದ ಅಂತರ್ ಜಿಲ್ಲಾ ಆರೋಪಿಗಳ ಬಂಧನ Read More »

ದಾವಣಗೆರೆ: ಕ್ರಿಕೆಟ್ ಹಬ್ಬಕ್ಕೆ ಶಾಮನೂರು ಶಿವಶಂಕರಪ್ಪ ಚಾಲನೆ

ದಾವಣಗೆರೆ: ರಾಷ್ಟ್ರ ಮಟ್ಟದ ಹೊನಲು ಬೆಳಕಿನ ಶಾಮನೂರು ಡೈಮಂಡ್ ಹಾಗೂ ಶಿವಗಂಗಾ ಕಪ್ 2021 ಕ್ರಿಕೆಟ್ ಟೂರ್ನಿಗೆ ಶಾಸಕ ಶಾಮನೂರು ಶಿವಶಂಕರಪ್ಪ ಚಾಲನೆ ನೀಡಿದರು. ದಿ.ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಅವರ ಸವಿನೆನಪಿಗಾಗಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನ. 25 ರಿಂದ 28ರವರೆಗೆ ಜಿಲ್ಲಾ ಕ್ರೀಡಾಪಟುಗಳ ಸಾಂಸ್ಕೃತಿಕ ಸಂಘ ಹಾಗೂ ದಾವಣಗೆರೆ ಇಲೆವೆನ್ಸ್ ಕ್ರಿಕೆಟ್ ಕ್ಲಬ್ ವತಿಯಿಂದ ಹಮ್ಮಿಕೊಳ್ಳಲಾಗಿದೆ. ಅಧ್ಯಕ್ಷತೆಯನ್ನು ದಿನೇಶ್ ಕೆ.ಶೆಟ್ಟಿ ವಹಿಸಿದ್ದರು. ಅತಿಥಿಗಳಾಗಿ ಉದ್ಯಮಿಗಳಾದ ಅಥಣಿ ವೀರಣ್ಣ, ಮಹಾದೇವ್, ಶಿವಗಂಗಾ ಶ್ರೀನಿವಾಸ್, ರಮೇಶ್ ಬಾಬು, ವಿಜಯಕುಮಾರ್, …

ದಾವಣಗೆರೆ: ಕ್ರಿಕೆಟ್ ಹಬ್ಬಕ್ಕೆ ಶಾಮನೂರು ಶಿವಶಂಕರಪ್ಪ ಚಾಲನೆ Read More »

ಸಾರ್ವಜನಿಕರಿಗೆ ಚಾಕು ತೋರಿಸಿ ಕಳ್ಳತನ ಮಾಡುತ್ತಿದ್ದ ಇಬ್ಬರ ಬಂಧನ

ದಾವಣಗೆರೆ: ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಯಾಣಿಸುತ್ತಿದ್ದ ಸಾರ್ವಜನಿಕರನ್ನು ತಡೆದು ಚಾಕು ತೋರಿಸಿ ಸುಲಿಗೆ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧಿಸಿದ್ದು, ಒಟ್ಟು 8 ಲಕ್ಷ ಮೌಲ್ಯದ ಚಿನ್ನಾಭರಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಹಳೆಬಾತಿ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಜುನಾಥ ಎಂಬುವರು ಕುಟುಂಬ‌ ಸಮೇತರಾಗಿ ಮಲೇಬೆನ್ನೂರಿನಿಂದ ದಾವಣಗೆರೆಗೆ ಕಾರಿನಲ್ಲಿ ಬರುತ್ತಿದ್ದರು. ಹಳೆಬಾತಿ ಗ್ರಾಮ ಎನ್.ಹೆಚ್.48 ರಸ್ತೆಯಲ್ಲಿ 04 ಜನ ಒಂದು ಕಾರಿನಲ್ಲಿ ಬಂದು ಕಾರನ್ನು ಅಡ್ಡಹಾಕಿ ಬಂಗಾರದ ಆಭರಣ ಮತ್ತು ಎರಡು ಮೊಬೈಲ್ ವ್ಯಾನಿಟಿ …

ಸಾರ್ವಜನಿಕರಿಗೆ ಚಾಕು ತೋರಿಸಿ ಕಳ್ಳತನ ಮಾಡುತ್ತಿದ್ದ ಇಬ್ಬರ ಬಂಧನ Read More »

ಅಕ್ರಮವಾಗಿ ಸಾಗಿಸುತ್ತಿದ್ದ 148 ಕ್ವಿಂಟಾಲ್ ಪಡಿತರ ಅಕ್ಕಿ ವಶ

ದಾವಣಗೆರೆ: ಆಜಾದ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಕ್ರಮವಾಗಿ ಪಡಿತರ ಅಕ್ಕಿ ಸಾಗಿಸುತ್ತಿದ್ದ ಲಾರಿಯನ್ನು ಪೊಲೀಸರು ವಶಪಡಿಸಿಕೊಂಡಿದ್ಧಾರೆ. ಲಾರಿಯಲ್ಲಿದ್ದ 148 ಕ್ವಿಂಟಾಲ್ ಅಕ್ಕಿಯನ್ನು ಹಾಗೂ ಒಂದು ಲಾರಿಯನ್ನು ಸೀಜ್ ಮಾಡಲಾಗಿದೆ. ಡಿಸಿಆರ್ ಬಿ ಘಟಕದ ಪೊಲೀಸ್ ಡಿವೈಎಸ್ಪಿ ಬಿ. ಎಸ್ ಬಸವರಾಜ್ ನೇತೃತ್ವದ ಪೊಲೀಸ್ ತಂಡ ದಾಳಿ ನಡೆಸಿತ್ತು. ಈ ಬಗ್ಗೆ ಆಜಾದ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫಾರ್ಮ್ ಹೌಸ್ ನಲ್ಲಿ ಕೆಲಸಕ್ಕೆ ಸೇರಿ ಐದೇ ದಿನದಲ್ಲಿ 8 ಲಕ್ಷ ಮೌಲ್ಯ ಚಿನ್ನ , 20 ಸಾವಿರ ನಗದು ದೋಚಿ ಪರಾರಿ

ದಾವಣಗೆರೆ: ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಫಾರ್ಮ್ ಹೌಸ್ ವೊಂದರಲ್ಲಿ ಕೆಲಸಕ್ಕೆ ಸೇರಿ ಐದೇ ದಿನದಲ್ಲಿ ವ್ಯಕ್ತಿಯೊಬ್ಬ 8 ಲಕ್ಷ ಮೌಲ್ಯದ ಚಿನ್ನ, 20 ಸಾವಿರ ನಗದು ದೋಚಿ ಪರಾರಿಯಾದ ಘಟನೆ ನಡೆದಿದೆ. ಶಿವಮೂರ್ತಿ ಅವರ ಫಾರ್ಮ್ ಹೌಸ್ ನಲ್ಲಿ ಕೆಲಸ ಸೇರಿಕೊಂಡ ವಿಜಯ್ ಕಳ್ಳತನ ಮಾಡಿದ ವ್ಯಕ್ತಿಯಾಗಿದದ್ಧಾನೆ. ವಿಜಯ್ ಕೆಲಸ ಮುಗಿಸಿಕೊಂಡು ಚನ್ನಗಿರಿ ಕಣದ ಸಾಲು ಬಡಾವಣೆಯ ಶಿವಮೂರ್ತಿ ಅವರ ಬಂದಿದ್ದಾನೆ. ಮನೆಯ ಒಡತಿ ಕೆಲಸಗಾರನಿಗೆ ಟೀ ಕೊಟ್ಟು ಬಟ್ಟೆ ಒಣ ಹಾಕಲು ಹೋಗಿದ್ದಾರೆ. ಆಗ ಖದೀಮ …

ಫಾರ್ಮ್ ಹೌಸ್ ನಲ್ಲಿ ಕೆಲಸಕ್ಕೆ ಸೇರಿ ಐದೇ ದಿನದಲ್ಲಿ 8 ಲಕ್ಷ ಮೌಲ್ಯ ಚಿನ್ನ , 20 ಸಾವಿರ ನಗದು ದೋಚಿ ಪರಾರಿ Read More »

Translate »
Scroll to Top