ದಾವಣಗೆರೆ: ಕಾಲೇಜ್ ಗೆ ಹೋಗಿದ್ದ ವಿದ್ಯಾರ್ಥಿನಿ ಕೊರಳಿನಲಿದ್ದ 10 ಗ್ರಾಂ ತೂಕದ 45 ಸಾವಿರ ಮೌಲ್ಯದ ಬಂಗಾರದ ಸರವನ್ನು ದುಷ್ಕರ್ಮಿಯೊಬ್ಬ ಕಿತ್ತುಕೊಂಡು ಪರಾರಿಯಾದ ಘಟನೆ ಎಸ್ ಎಸ್ ಲೇಔಟ್ ಬಿ ಬ್ಲಾಕ್ ನಲ್ಲಿ ನಡೆದಿದೆ.

ತಾಲ್ಲೂನಿಕ ಬಸವನಾಳ್ ಗ್ರಾಮದ ನಾಗರಾಜಯ್ಯ ಅವರ ಮಗಳಾದ ದೀಕ್ಷಿತ ದಾವಣಗೆರೆ ನಗರದ ಅಥಣಿ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದು, ಸ್ಕಾಲ್ ಶಿಪ್ ಗೆ ಅರ್ಜಿ ಸಲ್ಲಿಸಲು ದಾಖಲಾತಿ ಜೆರಾಕ್ಸ್ ಮಾಡಿಸಲು ಎಂಬಿಎ ಕಾಲೇಜ್ ರಸ್ತೆಯಲ್ಲಿ ಹೋಗುತ್ತಿದ್ದಾಗ ಪಲ್ಸರ್ ಬೈಕ್ ನಲ್ಲಿ ಬಂದ ವ್ಯಕ್ತಿ ಕೊರಳಿನಲ್ಲಿದ್ದ 10 ಗ್ರಾಂ ತೂಕದ ಬಂಗಾರದ ಸರ ಕಿತ್ತುಕೊಂಡು ಪರಾರಿಯಾಗಿದ್ದಾನೆ . ಈ ಬಗ್ಗೆ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ