ಫಾರ್ಮ್ ಹೌಸ್ ನಲ್ಲಿ ಕೆಲಸಕ್ಕೆ ಸೇರಿ ಐದೇ ದಿನದಲ್ಲಿ 8 ಲಕ್ಷ ಮೌಲ್ಯ ಚಿನ್ನ , 20 ಸಾವಿರ ನಗದು ದೋಚಿ ಪರಾರಿ

ದಾವಣಗೆರೆ: ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಫಾರ್ಮ್ ಹೌಸ್ ವೊಂದರಲ್ಲಿ ಕೆಲಸಕ್ಕೆ ಸೇರಿ ಐದೇ ದಿನದಲ್ಲಿ ವ್ಯಕ್ತಿಯೊಬ್ಬ 8 ಲಕ್ಷ ಮೌಲ್ಯದ ಚಿನ್ನ, 20 ಸಾವಿರ ನಗದು ದೋಚಿ ಪರಾರಿಯಾದ ಘಟನೆ ನಡೆದಿದೆ. ಶಿವಮೂರ್ತಿ ಅವರ ಫಾರ್ಮ್ ಹೌಸ್ ನಲ್ಲಿ ಕೆಲಸ ಸೇರಿಕೊಂಡ ವಿಜಯ್ ಕಳ್ಳತನ ಮಾಡಿದ ವ್ಯಕ್ತಿಯಾಗಿದದ್ಧಾನೆ. ವಿಜಯ್ ಕೆಲಸ ಮುಗಿಸಿಕೊಂಡು ಚನ್ನಗಿರಿ ಕಣದ ಸಾಲು ಬಡಾವಣೆಯ ಶಿವಮೂರ್ತಿ ಅವರ ಬಂದಿದ್ದಾನೆ. ಮನೆಯ ಒಡತಿ ಕೆಲಸಗಾರನಿಗೆ ಟೀ ಕೊಟ್ಟು ಬಟ್ಟೆ ಒಣ ಹಾಕಲು ಹೋಗಿದ್ದಾರೆ. ಆಗ ಖದೀಮ ತಮ್ಮ ಕೈ ಚಳಕ ತೋರಿಸಿದ್ದು, ಬೀರಿನ ಪಕ್ಕದಲ್ಲಿಯೇ ಇದ್ದ ಕೀ ಮೂಲಕ ಬೀಗ ತೆಗೆದು, ಬೀರಿನಲ್ಲಿದ್ದ 8 ಲಕ್ಷ ಮೌಲ್ಯದ ಚಿನ್ನ ಮತ್ತು 20 ನಗದನ್ನು ಕದ್ದು ಪರಾರಿಯಾಗಿದ್ಧಾರೆ.

ಕೋಲಾರ ಮೂಲದ ವಿಜಯ್, ಯುಟ್ಯೂಬ್ ನಲ್ಲಿ ಫಾರ್ಮ್ ಹೌಸ್ ನಲ್ಲಿ ಕೆಲಸಕ್ಕೆ ಬೇಕಿದ್ಧಾರೆ ಎಂದು ವಿಡಿಯೋ ನೋಡಿ ಕೆಲಸಕ್ಕೆ ಸೇರಿದ್ದ. 5 ದಿನದ ಹಿಂದೆಯಷ್ಟೇ ಕಾಡಿಬೇಡಿ ಕೆಲಸಕ್ಕೆ ಸೇರಿಕೊಂಡಿದ್ದ, ಇದೀಗ ಚಿನ್ನಾಭರಣ, ನಗದು ಕದ್ದು ಪರಾರಿಯಾಗಿದ್ಧಾನೆ. ಈ ಬಗ್ಗೆ ಚನ್ನಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment

Your email address will not be published. Required fields are marked *

Translate »
Scroll to Top