ಸಂಡೂರು,ಡಿ,27 ; ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದಲ್ಲಿ ಹಾಗೂ ನಂದಿಹಳ್ಳಿ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳು ಸೂಕ್ತ ಬಸ್ ಸಂಚಾರ ವಿಲ್ಲದೆ ತೊಂದರೆ ಅನುಭವಿಸುತ್ತಿದ್ದು ಬಗೆಹರಿಯದ ಸಮಸ್ಯೆಯಾಗಿದೆ. ಶಾಲೆ ಮತ್ತು ಕೇಂದ್ರದ ತರಗತಿಗಳಿಗೆ ಸಮಯಕ್ಕೆ ಸರಿಯಾದ ಬಸ್ ಸಂಚಾರವಿಲ್ಲದೆ ಪ್ರತಿನಿತ್ಯ ತೊಂದರೆ ಅನುಭವಿಸುತ್ತಿದ್ದು ಅವರ ಕಲಿಕೆಗೆ ಅಡ್ಡಿಯಾಗಿದೆ. ಡಿಪೋದಲ್ಲಿ ಬಸ್ಸುಗಳು ನೌಕರರಿದ್ದು ಸೂಕ್ತ ನಿರ್ವಹಣೆ ಇಲ್ಲದೆ ಸಂಡೂರು ಸಾರಿಗೆ ಬಸ್ ಡಿಪೋ ಪರಿಸ್ಥಿತಿ ಲೆಕ್ಕಕ್ಕುಂಟು ಆಟಕ್ಕಿಲ್ಲ ಎಂಬಂತಾಗಿದೆ. ಸಮಯಕ್ಕೆ ಸರಿಯಾಗಿ ಬಾರದ ಬಸ್ಸಿಗಾಗಿ ಪಿಜಿ ವಿದ್ಯಾರ್ಥಿಗಳು ಡಿಪೋಕ್ಕೆ ತೆರಳಿ ಸೋಮವಾರ ಪ್ರತಿಭಟನೆ ನಡೆಸುವಲ್ಲಿ ನಿರತರಾದರು. ಸಂಡೂರು ಪುರಸಭೆ ಬಸ್ ನಿಲ್ದಾಣದಿಂದ 9 – 30 ಗಂಟೆಗೆ ಬಿಡಬೇಕಾದ ಬಸ್ಸು 9 – 50 ಆದರೂ ಬಸ್ ಸಿಬ್ಬಂದಿಯವರು ತಿಂಡಿ ತಿನ್ನುವ ಟೀ ಕುಡಿಯುವ ನೆಪದಲ್ಲಿ ಕಾಲಹರಣ ಮಾಡುವುದು ಅವರ ದಿನಚರಿಯಾಗಿದೆ ಅದಲ್ಲದೆ ಚೋರನೂರು ನಿಂದ ಬರಲು ತಡವಾಗುತ್ತದೆ ಎಂಬ ವಾದ ಡ್ರೈವರ್ ಮತ್ತು ಕಂಡಕ್ಟರ್ ಅವರದು.

ಹಿಂದೆ ಇಷ್ಟು ವರ್ಷಗಳ ಕಾಲ ಆಗದ ಸಮಸ್ಯೆ ಈಗ ಏಕೆ ಎಂಬ ಪ್ರಶ್ನೆ ಮುಂದಿಡುತ್ತಾರೆ ವಿದ್ಯಾರ್ಥಿಗಳು.9.15ಕ್ಕೆ ದೇವಗಿರಿಗೆ ತೆರಳುವ ಬಸ್ಸು ನಂದಿಹಳ್ಳಿ ಕೇಂದ್ರದೊಳಗೆ ಬಂದು ಹೋಗಬೇಕು, 4:00 ಗಂಟೆಗೆ ಕೇಂದ್ರಕ್ಕೆ ಬರುವ ಬಸ್ಸು ಐದು ನಿಮಿಷ ನಿಲ್ಲಿಸದೆ ಆತುರಾತುರವಾಗಿ ಬಂದುಬಿಡುತ್ತಾರೆ. ಐದು ಮೂವತ್ತಕ್ಕೆ ಬರುವ ಬಸ್ಸು ನಂದಿಹಳ್ಳಿ ಕೇಂದ್ರದೊಳಗೆ ಬರದೇ ನಂದಿ ಹಳ್ಳಿಯಿಂದ ಹಿಂತಿರುಗುತ್ತಾರೆ ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ ಎನ್ನುತ್ತಾರೆ ವಿದ್ಯಾರ್ಥಿ ಮುಖಂಡರಾದ ವೀರೇಂದ್ರ ಮತ್ತು ಕಾರ್ತಿಕ್, ಇಕ್ಬಾಲ್. ಅಜಯ್ ಬಸವರಾಜ್. ಬಸ್ ಗಳ ಸಮಸ್ಯೆ ಇದೇ ರೀತಿ ಮುಂದುವರೆದರೆ ಶಾಸಕ ತುಕಾರಾಂ ಇಲ್ಲವೇ ಸಾರಿಗೆ ಸಚಿವ ಶ್ರೀರಾಮುಲು ಅವರಿಗೆ ಮನವಿ ಸಲ್ಲಿಸಲಾಗುವುದು ಎಂದರು.

ವಿದ್ಯಾರ್ಥಿಗಳ ಕುಂದುಕೊರತೆಯನ್ನು ಆಲಿಸಿದ ATi ಶಂಕರ್ ಅವರು ನಂದಿ ಹಳ್ಳಿ ಮಾರ್ಗವಾಗಿ ದೇವಗಿರಿಗೆ ಸಂಚರಿಸುವ ಬಸ್ಸುಗಳು ಎಲ್ಲವೂ ನಂದಿಹಳ್ಳಿ ಕೇಂದ್ರದ ಒಳಗಡೆ ಬಂದು ಹೋಗುವಂತೆ ಹಾಗೂ ಸಮಯಕ್ಕೆ ಸರಿಯಾಗಿ ಬಸ್ಸುಗಳನ್ನು ಓಡಿಸಲು ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ ನಂತರ ವಿದ್ಯಾರ್ಥಿಗಳು ಪ್ರತಿಭಟನೆಯನ್ನು ನಿಲ್ಲಿಸಿ ಕೇಂದ್ರಕ್ಕೆ ತೆರಳಿದರು. ಅಪ್ಪ-ಅಮ್ಮ ಜಗಳದಲ್ಲಿ ಕೂಸು ಬಡವಾಯಿತು ಎನ್ನುವಾಗ ಹಾಗೆ ಇಲ್ಲಿನ ಸಾರಿಗೆ ಡಿಪೋದ ಆಧಿಕಾರಿಗಳು ಮತ್ತು ಡ್ರೈವರ್ , ಕಂಡಕ್ಟರ್, ಇತರ ಸೇವಾ ಸಿಬ್ಬಂದಿಗಳ ಮಧ್ಯೆ ಹೊಂದಾಣಿಕೆ ಮತ್ತು ಸಹಕಾರ ಕೊರತೆ ಎದ್ದುಕಾಣುತ್ತಿದ್ದು. ಅವುಗಳನ್ನು ಬಗೆಹರಿಸಿಕೊಂಡು ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸುವಲ್ಲಿ ತಮ್ಮ ಕರ್ತವ್ಯ ಪ್ರಜ್ಞೆ ಮೆರೆಯಬೇಕಿದೆ.