ಶಿಡ್ಲಘಟ್ಟ: ತಾಲ್ಲೂಕು ತುಮ್ಮನಹಳ್ಳಿ ಗ್ರಾಮಪಂಚಾಯಿತಿಯಿಂದ ಅಧ್ಯಕ್ಷ ಸ್ಥಾನಕ್ಕೆ ಈ ಹಿಂದೆ ನಂಜಪ್ಪ ರಾಜಿನಾಮೆ ನೀಡಿದ್ದರು. ಈ ಹಿಂದೆ ನಡೆದಿದ್ದ ಗ್ರಾಮಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ 14 ಜೆಡಿಎಸ್ 3, ಸ್ಥಾನಗಳನ್ನು ಗೆದ್ದು ಒಟ್ಟು 17 ಸದಸ್ಯರು ಆಯ್ಕೆಯಾಗಿದ್ರು.

ಇಂದು ಪುನಃ ಅಧ್ಯಕ್ಷರ ಸ್ಥಾನಕ್ಕಾಗಿ ಸಾಮಾನ್ಯ ಪುರುಷ ಅಭ್ಯರ್ಥಿಯಾಗಿ ಕಾಂಗ್ರೆಸ್ ಪಕ್ಷದಿಂದ ಮಂಜುನಾಥ್ ಟಿ, ನಾಮಪತ್ರ ಸಲ್ಲಿಸಿದ್ದರು. ಅವರ ವಿರುದ್ದ ಬೇರೆ ಯಾರೂ ನಾಮಪತ್ರ ಸಲ್ಲಿಸದೇ ಇದ್ದಿದ್ದರಿಂದ ಅವಿರೋಧವಾಗಿ ಮಂಜುನಾಥ್ ಟಿ ಆಯ್ಕೆಯಾದರು.

ಜನರ ಆಶೀರ್ವಾದದಿಂದ ಹಾಗೂ ಸದಸ್ಯರುಗಳಿಂದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದೇನೆ ಮುಂದಿನ ದಿನಗಳಲ್ಲಿ ಗ್ರಾಮಪಂಚಾಯಿತಿ ಅಭಿವೃದ್ಧಿ ಮಾಡಲು ನಮ್ಮ ಶಕ್ತಿಮೀರಿ ಪ್ರಯತ್ನ ಮಾಡುತ್ತೇವೆ. ಸಾರ್ವಜನಿಕರಿಗೆ ಉತ್ತಮ ಮೂಲಭೂತ ಸೌಕರ್ಯಗಳನ್ನು ಹೊಂದಿರುವ ದಗಿಸಿಕೊಡುತ್ತೇವೆ ಎಂದು ಮಂಜುನಾಥ್ ಟಿ ಅಧ್ಯಕ್ಷರು ಮಾತನಾಡಿದರು.