LIVE TV LocalCrimeStateNationalInternationalPoliticsBusinessEducationEntertainmentSportsFeatureBeauty
Local News | State News | Politics News

ಎನ್‌ಡಿಎ ಅಭ್ಯರ್ಥಿ ನಮೋಶಿ ಗೆಲುವು ಖಚಿತ ಬಿಜೆಪಿ-ಜೆಡಿಎಸ್ ಮುಖಂಡರ ವಿಶ್ವಾಸ


ಬಳ್ಳಾರಿ: ಈ ತಿಂಗಳ 23ರಂದು ನಡೆಯ ಲಿರುವ ಈಶಾನ್ಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್ ಬೆಂಬಲಿತ `ಎನ್‌ಡಿಎ’ ಅಭ್ಯರ್ಥಿ ಶಶಿಲ್ ನಮೋಶಿ ಅವರು ಭರ್ಜರಿ ಬಹುಮತದೊಂದಿಗೆ ಗೆಲುವು ಸಾಧಿಸಲಿದ್ದಾರೆ. ಬಳ್ಳಾರಿ ಜಿಲ್ಲೆಯಲ್ಲಿ ಬಿಜೆಪಿ-ಜೆಡಿಎಸ್ ಪಕ್ಷಗಳ ಮುಖಂಡರು ನಮೋಶಿ ಪರವಾಗಿ ಎಲ್ಲಾ ತಾಲೂಕುಗಳಲ್ಲಿಯೂ ಜಂಟಿ ಪ್ರಚಾರ ನಡೆಸುವುದಾಗಿ ಎರಡೂ ಪಕ್ಷಗಳ ಧುರೀಣರು ತಿಳಿಸಿದ್ದಾರೆ. ಜಿಲ್ಲಾ ಬಿಜೆಪಿ ಕಚೇರಿಯಲ್ಲಿಂದು ಬೆಳಿಗ್ಗೆ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಅನಿಲ್‌ನಾಯ್ಡು, ಜೆಡಿಎಸ್ ಜಿಲ್ಲಾಧ್ಯಕ್ಷ ಮೀನಳ್ಳಿ ತಾಯಣ್ಣ ಮತ್ತಿತರರು, ನಮ್ಮಲ್ಲಿ ಯಾವುದೇ ಅಭಿಪ್ರಾಯ ಬೇಧ, ಅಸಮಾಧಾನಗಳಿಲ್ಲ. ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿಯಾಗಿರುವ ಶಶೀಲ್ ನಮೋಶಿ ಅವರ ಪರವಾಗಿ ವಿಸ್ತçತ ಪ್ರಚಾರ ನಡೆಸಿ, ಶಿಕ್ಷಕಮತಬಾಂಧವರ ಬಳಿ ತೆರಳಿ ಮತಯಾಚಿಸುತ್ತೇವೆ. ಶಿಕ್ಷಕÀರ ಸಮಸ್ಯೆಗಳಿಗೆ ಸ್ಪಂದಿಸುವ ನಮೋಶಿ ಅವರನ್ನು ಮತ್ತೊಂದು ಅವಧಿಗೆ ಆರಿಸಿ ತರುವಂತೆ ಶಿಕ್ಷಕರಿಗೆ ಮನವರಿಕೆ ಮಾಡಿಕೊಟ್ಟು ಬೆಂಬಲಿಸುವAತೆ ಕೋರುತ್ತೇವೆ ಎಂದರು.
ವಿಧಾನ ಪರಿಷತ್ ಚುನಾವಣೆ ಸೇರಿದಂತೆ ಮುಂಬರುವ ಜಿಲ್ಲಾ ತಾಲೂಕು ಪಂಚಾಯಿತಿ ಹಾಗೂ ವಿಧಾನಸಭೆ, ಲೋಕಸಭೆ ಚುನಾವಣೆಗಳಲ್ಲಿಯೂ ಕೂಡಾ, ಬಿಜೆಪಿಯೊಂದಿಗೆ ಸೇರಿಕೊಂಡು ಜೆಡಿಎಸ್ ಸ್ಪರ್ಧಿಸಲಿದೆ. ನಮ್ಮಲ್ಲಿ ಯಾವುದೇ ರೀತಿಯ ಗೊಂದಲಗಳಿಲ್ಲ, ಅಸಮಾಧಾನಗಳಿಲ್ಲ ಎಂದು ಮೀನಳ್ಳಿ ತಾಯಣ್ಣ ಹಾಗೂ ಅನಿಲ್‌ನಾಯ್ಡು ಸ್ಪಷ್ಟಪಡಿಸಿದರು.ಇದೇ ಸಂದರ್ಭದಲ್ಲಿ ಹಿರಿಯ ಬಿಜೆಪಿ ಧುರೀಣ, ಮಾಜಿ ಶಾಸಕ ಸೋಮಶೇಖರರೆಡ್ಡಿಯವರು ಮಾತನಾಡಿ, ಪಕ್ಷದ ಹೈಕಮಾಂಡ್ ಆದೇಶ, ಸೂಚನೆಗಳಂತೆ ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಜಂಟಿಯಾಗಿಯೇ ಚುನಾವಣೆ ಎದುರಿಸಲಿವೆ. ಗ್ರಾಮ ಪಂಚಾಯಿತಿ (ಜಿ.ಪಿ)ಯಿಂದ ಹಿಡಿದು ಎಂ.ಪಿ.(ಲೋಕಸಭೆ) ಚುನಾವಣೆವರೆಗೂ ಒಗ್ಗಟ್ಟಿನಿಂದ ಎದುರಿಸಿ ಎನ್‌ಡಿಎ ಗೆಲುವಿಗೆ ಶ್ರಮಿಸಲಾಗುತ್ತದೆ. ಜೊತೆ ಜೊತೆಯಲ್ಲಿಯೇ ಚುನಾವಣೆಗೆ ಹೋಗುತ್ತೇವೆ ಎಂದು ತಿಳಿಸಿದರು.ಎನ್‌ಡಿಎ ಮೈತ್ರಿಕೂಟದಲ್ಲಿ ರಾಜ್ಯಮಟ್ಟದಲ್ಲಿಯೇ ಆಗಲಿ, ಜಿಲ್ಲಾ ಮಟ್ಟದಲ್ಲಿಯೇ ಆಗಲೀ ಯಾವುದೇ ಗೊಂದಲಗಳಿಲ್ಲ. ಅಸಮಾಧಾನ, ಅಭಿಪ್ರಾಯ ಬೇಧಗಳಿಲ್ಲ, ನಾವೆಲ್ಲರೂ ಒಗ್ಗೂಡಿ ಮುನ್ನಡೆಸುತ್ತೇವೆ ಎಂದು ಮುಖಂಡರು ಸ್ಪಷ್ಟವಾಗಿ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ-ಜೆಡಿಎಸ್ ಮುಖಂಡರು ಉಪಸ್ಥಿತರಿದ್ದರು.

Author
Kannada Nadu News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎನ್‌ಡಿಎ ಅಭ್ಯರ್ಥಿ ನಮೋಶಿ ಗೆಲುವು ಖಚಿತ ಬಿಜೆಪಿ-ಜೆಡಿಎಸ್ ಮುಖಂಡರ ವಿಶ್ವಾಸಮೈಸೂರು ದಸರಾ ಉದ್ಘಾಟಿಸಲು ಕೊಪ್ಪಳದ ಅಭಿನವ ಗವಿಸಿದ್ದೇಶ್ವರ ಶ್ರೀಗಳಿಗೆ ಆಹ್ವಾನಅಂತರ್ಜಲ ಮರುಪೂರಣಕ್ಕೆ ಜಲಮೂಲಗಳ ಬಳಕೆ; ದಕ್ಷಿಣ ಭಾರತದ ಪ್ರಮುಖ ರಾಜ್ಯಗಳಲ್ಲಿ ಕರ್ನಾಟಕ ಮುಂಚೂಣಿಯಲ್ಲಿ: ಸಣ್ಣ ನೀರಾವರಿ ಸಚಿವ ಡಾ. ಅಜಯ್ ಧರ್ಮಸಿಂಗ್ಎಸ್‍ಐಆರ್ ಸುತ್ತ ರಾಜಕೀಯ ರಣಕಹಳೆ ಬರಪರಿಸ್ಥಿತಿಯ ಅಧ್ಯಯನಕ್ಕಾಗಿ ಕೇಂದ್ರ ಸರ್ಕಾರದ ಉನ್ನತಾಧಿಕಾರಿಗಳ ತಂಡವು ರಾಜ್ಯಾದ್ಯಂತ ಪ್ರವಾಸಹಿರಿಯೂರಿಗೆ   ಬರ ವೀಕ್ಷಣೆಗೆ ರಾಜ್ಯ ಜೆಡಿಎಸ್ ಮುಖಂಡ  ನಿಖಿಲ್ ಆಗಮನಫಾರಂ 7 ಮೂಲಕ ಅರ್ಹ ಮತದಾರ ಹೆಸರು ಅಳಿಸಿ ಹಾಕಿದ ಪ್ರಕರಣ; ತನಿಖೆಗೆ ಆಗ್ರಹಿಸಿ ಮುಖ್ಯಮಂತ್ರಿ ನೇತೃತ್ವದಲ್ಲಿ ಆಯೋಗದ ಮುಂದೆ ಧರಣಿಸಿಗ್ನಲ್‌ ಜಂಪ್‌ ಮಾಡಿದರೆ 5 ಸಾವಿರ ದಂಡ: ಪದೇ ಪದೇ ಸಂಚಾರಿ ನಿಯಮ ಉಲ್ಲಂಘಿಸಿದರೆ ಚಾಲನಾ ಪರವಾನೆಗಿ ರದ್ದುಚುನಾವಣಾ ವ್ಯವಸ್ಥೆ ಸುಧಾರಣೆಯಾಗದಿದ್ದರೆ ಸಮಾಜದಲ್ಲಿ ನಿಜವಾದ ಬದಲಾವಣೆ ಸಾಧ್ಯವಿಲ್ಲ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಮತಇಂದು ಕಾ ್ಯಬಿನೆಟ್‍ನಲ್ಲಿ ಹಾಲಿನ ದರ ತೀರ್ಮಾನ!