LIVE TV LocalCrimeStateNationalInternationalPoliticsBusinessEducationEntertainmentSportsFeatureBeauty
Politics News

ಸಿಎಂ-ವಿಜಯೇಂದ್ರ ಪಾಲಿಗೆ ಅಗ್ನಿಪರೀಕ್ಷೆ

ಬೆಂಗಳೂರು : ಕಾಂಗ್ರೆಸ್ ಪಕ್ಷದ ತಿಜೋರಿಯಾಗಿದ್ದ ಶಾಮನೂರು ಶಿವಶಂಕರಪ್ಪ ನಿಧನದಿಂದ ತೆರವಾಗಿರುವ ದಾವಣಗೆರೆ ದಕ್ಷಿಣ ಮತ್ತು ಎಚ್.ವೈ.ಮೇಟಿ ಅವರಿಂದ ತೆರವಾಗಿರುವ ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಏಪ್ರಿಲ್ 9ರಂದು ನಡೆಯಲಿದ್ದು, ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ಪ್ರತಿಷ್ಠೆಯ ಕಣವಾಗಿ ರೂಪುಗೊಂಡಿದೆ. ಈ ಎರಡೂ ಕ್ಷೇತ್ರಗಳಲ್ಲಿ ನಡೆಯುತ್ತಿರುವ ರಾಜಕೀಯ ಹೋರಾಟ ರಾಜ್ಯ ರಾಜಕೀಯದ ಭವಿಷ್ಯವನ್ನು ನಿರ್ಧರಿಸುವ ಮಟ್ಟಕ್ಕೆ ಮಹತ್ವ ಪಡೆದಿವೆ.
ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿನ ಖುರ್ಚಿ ಕದನ ಹಿನ್ನೆಲೆಯಲ್ಲಿ ಈ ಫಲಿತಾಂಶ ಸಿದ್ದರಾಮಯ್ಯ ಅವರಿಗೆ ಬಹು ದೊಡ್ಡ ಸವಾಲಾಗಿದೆ. ಗೆದ್ದರೆ ಮುಖ್ಯಮಂತ್ರಿಗೆ ಪುಷ್ಠಿ ದೊರೆಯಲಿದೆ. ಕಾಂಗ್ರೆಸ್ ವಶದಲ್ಲಿರುವ ಕ್ಷೇತ್ರಗಳನ್ನು ಗೆದ್ದುಕೊಂಡರೆ ವಿಜಯೇಂದ್ರ ಶಕ್ತಿ ಶಾಲಿಯಾಗಲಿದ್ದಾರೆ. ಸೋತರೆ ಎರಡೂ ಪಕ್ಷಗಳ ನಾಯಕರಿಗೆ ರಾಜ
ಕೀಯವಾಗಿ ಭಾರೀ ಹಿನ್ನೆಡೆಯಾಗಲಿದೆ.
ಕಾಂಗ್ರೆಸ್ ಪರ ಇಡೀ ಸಚಿವ ಸಂಪುಟ ಎರಡೂ ಕ್ಷೇತ್ರಗಳಲ್ಲಿ ಬೀಡು ಬಿಟ್ಟು ತನು, ಮನ, ಧನ ಅರ್ಪಿಸುತ್ತಿದೆ. ಬಿಜೆಪಿಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಸಚಿವರು, ರಾಜ್ಯದ ಘಟಾನುಘಟಿ ನಾಯಕರು ಗೆಲುವಾಗಿ ಟೊಂಕಕಟ್ಟಿ ನಿಂತಿದ್ದಾರೆ.
ದಾವಣಗೆರೆ ಮತ್ತು ಬಾಗಲಕೋಟೆ ಎರಡೂ ಕ್ಷೇತ್ರಗಳು ಇದೀಗ ಪಾಳೆಗಾರಿಕೆ ಪಳೆಯುಳಿಕೆ, ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯವಾಗಿ ಮಹತ್ವ ಹೊಂದಿವೆ. ಈ ಪ್ರದೇಶಗಳಲ್ಲಿ ಮತದಾರರ ಮನಸ್ಸನ್ನು ಗೆಲ್ಲುವುದು ಪಕ್ಷಗಳಿಗಾಗಿ ಕೇವಲ ಸ್ಥಳೀಯ ಗೆಲುವಿನ ಪ್ರಶ್ನೆಯಲ್ಲ, ರಾಜ್ಯ ಮಟ್ಟದ ಪ್ರಭಾವವನ್ನು ತೋರಿಸುವ ಅವಕಾಶವೂ ಆಗಿದೆ. ವಿಶೇಷವಾಗಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವಿನ ಸ್ಪರ್ಧೆ ಇಲ್ಲಿ ತೀವ್ರವಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈ ಚುನಾವಣೆಗಳು ತಮ್ಮ ಸರ್ಕಾರದ ಸಾಧನೆಗಳ ಜನರಿಗೆ ತಲುಪಿಸುವ ಸತ್ವ ಪರೀಕ್ಷೆಯಂತಿವೆ. ಅಭಿವೃದ್ಧಿ ಕಾರ್ಯಕ್ರಮಗಳು, ಕಲ್ಯಾಣ ಯೋಜನೆಗಳು ಮತ್ತು ಆಡಳಿತದ ಕಾರ್ಯಕ್ಷಮತೆಯನ್ನು ಮುಂದಿಟ್ಟುಕೊಂಡು ಮತದಾರರನ್ನು ಸೆಳೆಯಲು ಪ್ರಯತ್ನಿಸುತ್ತಿದ್ದಾರೆ. ಮತ್ತೊಂದೆಡೆ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಪಕ್ಷದ ಸಂಘಟನೆ ಶಕ್ತಿಯನ್ನು ಬಳಸಿಕೊಂಡು, ಕೇಂದ್ರದ ಸಾಧನೆಗಳನ್ನು ಪ್ರಚಾರ ಮಾಡುತ್ತಾ ಕಾಂಗ್ರೆಸ್ ವಿರುದ್ಧ ಕಟುವಾದ ಟೀಕೆಗಳನ್ನು ಮಾಡುತ್ತಿದ್ದಾರೆ.
ಈ ಕ್ಷೇತ್ರಗಳಲ್ಲಿ ಜಾತಿ ಸಮೀಕರಣಗಳು, ಸ್ಥಳೀಯ ಸಮಸ್ಯೆಗಳು, ಉದ್ಯೋಗ, ಕೃಷಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ಪ್ರಮುಖ ವಿಷಯಗಳಾಗಿವೆ. ಇಬ್ಬರೂ ನಾಯಕರು ತಮ್ಮ ತಮ್ಮ ಪಕ್ಷಗಳ ಪರವಾಗಿ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದು, ಪ್ರತಿ ಮತವೂ ಮಹತ್ವ ಪಡೆದುಕೊಂಡಿದೆ. ಈ ಫಲಿತಾಂಶಗಳು ಮುಂದಿನ ರಾಜಕೀಯ ದಿಕ್ಕನ್ನು ನಿರ್ಧರಿಸುವ ಸಾಧ್ಯತೆಯಿದೆ.
ಕಾಂಗ್ರೆಸ್-ಬಿಜೆಪಿ ನಾಯಕರಿಗೆ ಈ ಎರಡು ಕ್ಷೇತ್ರಗಳ ಚುನಾವಣೆ ಪ್ರತಿಷ್ಠೆ, ಸವಾಲಿನ ಪ್ರಶ್ನೆಯಾಗಿದೆ. ಟಿಕೆಟ್ ಹಂಚಿಕೆ ವಿಚಾರದಲ್ಲಿ ಕಾಂಗ್ರೆಸ್ಸಿನಲ್ಲಿ ಈ ಉಪಚುನಾವಣೆ ಕೊಂಚ ಗೊಂದಲಕ್ಕೆ ಕಾರಣವಾಗಿತ್ತು. ಬಾಗಲಕೋಟೆಯಲ್ಲಿ ಮೇಟಿ ಅವರ ಮಕ್ಕಳೇ, ಟಿಕೆಟ್‍ಗಾಗಿ ಪೈಪೆÇೀಟಿ ಮಾಡಿದ್ದರು. ಇನ್ನೊಂದು ಕಡೆ ದಾವಣಗೆರೆಯಲ್ಲಿ ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ಕೊಡಬೇಕೆಂದು ದೊಡ್ಡ ಪ್ರಹಸನವೇ ನಡೆದು ಹೋಯಿತು. ಕೊನೆಗೆ ಎರಡೂ ಕ್ಷೇತ್ರದಲ್ಲಿ ಅನುಕಂಪದ ಆಧಾರದ ಮೇಲೆ ಆಯಾಯ ಕುಟುಂಬದ ಸದಸ್ಯರಿಗೆ ಟಿಕೆಟ್ ನೀಡಲಾಯಿತು. ಪ್ರಮುಖವಾಗಿ, ನಾಲ್ವರು ನಾಯಕರಿಗೆ ಈ ಉಪಚುನಾವಣೆಯ ಫಲಿತಾಂಶ ನಿರ್ಣಾಯಕವಾಗಲಿದೆ.
ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಮೂರು ವರ್ಷವಾಗಲು ಇನ್ನೇನು ಕೆಲವು ದಿನಗಳು ಬಾಕಿಯಿದೆ. ಮುಡಾ, ವಾಲೀಕಿ ನಿಗಮದ ಹಗರಣಗಳು ದೇಶದಲ್ಲಿ ದೊಡ್ಡ ಸುದ್ದಿಯನ್ನು ಮಾಡಿತ್ತು. ಇವೆಲ್ಲದರ ನಡುವೆ ಪಂಚ ಗ್ಯಾರಂಟಿಯ ಬಗ್ಗೆ ಮತದಾರರಲ್ಲಿ ಇರುವ ಅಭಿಪ್ರಾಯವನ್ನು ಅಳೆಯುವ ಮಾಪಕವಾಗಿ ಈ ಉಪಚುನಾವಣೆಯ ಫಲಿತಾಂಶ ಎಂದು ವ್ಯಾಖ್ಯಾನಿಸಲಾಗುತ್ತಿದೆ.
ಜೊತೆಗೆ ಫಲಿತಾಂಶ ಪರವಾಗಿ ಬಂದರೆ ಬಿಜೆಪಿಯವರ ಸರ್ಕಾರದ ಬಳಿ ದುಡ್ಡಿಲ್ಲ ಎನ್ನುವ ಆರೋಪಕ್ಕೂ ಉತ್ತರ ಸಿಕ್ಕಂತಾಗುತ್ತದೆ. ಉಪಚುನಾವಣೆಯ ಫಲಿತಾಂಶ ಪೂರಕವಾಗಿ ಬಂದಿದ್ದೇ ಆದಲ್ಲಿ, ಇದು ಸಿದ್ದರಾಮಯ್ಯ ಆಡಳಿತಕ್ಕೆ ಜನರು ಕೊಟ್ಟ ಪ್ರಮಾಣಪತ್ರ ಎಂದು ಕಾಂಗ್ರೆಸ್ ಹೇಳಬಹುದು. ಹಾಗಾಗಿ ಪ್ರಮುಖವಾಗಿ ನಾಲ್ವರಿಗೆ ಈ ಉಪಚುನಾವಣೆಯ ಫಲಿತಾಂಶ ನಿರ್ಣಾಯಕವಾಗಲಿದೆ.
ಪಂಚರಾಜ್ಯಗಳ ವಿಧಾನಸಭಾ ಚುನಾವಣೆಯ ನಂತರ ಬಾಕಿ ಉಳಿದಿರುವ ರಾಜ್ಯಗಳಿಗೆ ಬಿಜೆಪಿಯ ವರಿಷ್ಠರು ರಾಜ್ಯಾಧ್ಯಕ್ಷರನ್ನು ಘೆuಟಿಜeಜಿiಟಿeಜೕಷಿಸಬಹುದು ಎಂದು ಹೇಳಲಾಗುತ್ತಿದೆ. ರಾಜ್ಯಾಧ್ಯಕ್ಷರಾದ ಮೇಲೆ ವಿಜಯೇಂದ್ರ ಎದುರಿಸುತ್ತಿರುವ ಬಹುದೊಡ್ಡ ಸವಾಲು ಇದಾಗಿದೆ.
ರಾಜ್ಯ ಬಿಜೆಪಿಯಲ್ಲಿರುವ ಗುಂಪುಗಾರಿಕೆ, ಹಿರಿಯರ ತಟಸ್ಥ ಧೋರಣೆಯ ನಡುವೆಯೂ, ಎರಡೂ ಕ್ಷೇತ್ರದಲ್ಲಿ ಕಮಲವನ್ನು ಅರಳಿಸಿದ್ದೇ ಆದಲ್ಲಿ, ಅವರ ಅಧ್ಯಕ್ಷ ಹುದ್ದೆಯ ಕುರ್ಚಿ ಗಟ್ಟಿಯಾಗಲಿದೆ. ಇಲ್ಲದಿದ್ದರೆ, ಅವರ ಕುರ್ಚಿಗೆ ಸಂಚಕಾರ ಬಂದರೂ ಬರಬಹುದು. ಈಗಲೇ, ಬಿಜೆಪಿಯ ಕೆಲವು ನಾಯಕರು, , ಉಪಚುನಾವಣೆಯ ಫಲಿತಾಂಶದ ಮೇಲೆ ವಿಜಯೇಂದ್ರ ಅವರ ಭವಿಷ್ಯ ನಿರ್ಧಾರವಾಗಲಿದೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.
ಬಿಜೆಪಿಯಲ್ಲಿ ಇದ್ದಂತೆಯೇ, ಕಾಂಗ್ರೆಸ್ಸಿನಲ್ಲಿ ಐದು ರಾಜ್ಯಗಳ ಚುನಾವಣೆ ಮುಗಿದ ನಂತರ, ಮುಖ್ಯಮಂತ್ರಿ ಬದಲಾವಣೆ ವಿಚಾರ ಮುನ್ನಲೆಗೆ ಬಂದರೂ ಬರಬಹುದು. ಅಸ್ಸಾಂ ವಿಧಾನಸಭಾ ಚುನಾವಣೆಯಲ್ಲಿ ಪ್ರಮುಖ ಸ್ಥಾನದಲ್ಲಿರುವ ಡಿ.ಕೆ.ಶಿವಕುಮಾರ್, ಅವರಿಗೆ ರಾಜ್ಯದಲ್ಲಿನ ಉಪಚುನಾವಣೆಯಲ್ಲಿ ತಮ ಸಂಘಟನಾ ಶಕ್ತಿ ಪ್ರದರ್ಶಿಸಲು ವೇದಿಕೆಯಾಗಬಹುದು. ಎರಡು ಕ್ಷೇತ್ರಗಳಲ್ಲಿನ ಜಯ, ಅವರಿಗೆ ರಾಜ್ಯದಲ್ಲಿ ಮುಂದಿನ ರಾಜಕೀಯ ನಡೆಗೆ ಮೆಟ್ಟಿಲಾಗಬಹುದು ಎಂದು ವ್ಯಾಖ್ಯಾನಿಸಲಾಗುತ್ತಿದೆ.
ಲಿಂಗಾಯತ ಸಮುದಾಯದ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪನವರ ನಿಧನದಿಂದ, ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಗೆ ಅವರ ಮೊಮಗ ಸಮರ್ಥ್ ಶಾಮನೂರು ಅವರಿಗೆ ಕಾಂಗ್ರೆಸ್ ಟಿಕೆಟ್ ಲಭಿಸಿದೆ. ಎಸ್.ಎಸ್.ಮಲ್ಲಿಕಾರ್ಜುನ್ ಅವರು, ಟಿಕೆಟಿಗಾಗಿ ಭಾರೀ ಫೈಟ್ ಮಾಡಬೇಕಾಗಿ ಬಂತು. ಸಮರ್ಥ್ ಅವರ ತಾಯಿ, ಸಂಸದೆಯೂ ಆಗಿರುವ ಡಾ.ಪ್ರಭಾ ಮಲ್ಲಿಕಾರ್ಜುನ, ದೆಹಲಿ ಮಟ್ಟದಲ್ಲಿ ಲಾಬಿಯನ್ನೂ ನಡೆಸಿದ್ದರು.
ಮುಸ್ಲಿಂ ಸಮುದಾಯದ ನಾಯಕರಿಗೆ ಟಿಕೆಟ್ ಕೊಡಬೇಕು ಎನ್ನುವ ಕೂಗು, ದೊಡ್ಡ ಮಟ್ಟದಲ್ಲಿ ಕೇಳಿ ಬಂದಿದ್ದರಿಂದ, ಸಮುದಾಯದ ಸಾದಿಕ್ ಪೈಲ್ವಾನ್, ನಾಮಪತ್ರವನ್ನು ಸಲ್ಲಿಸಿಯೂ ಬಿಟ್ಟಿದ್ದರು. ಕೊನೆಗೆ ಮಲ್ಲಿಕಾರ್ಜುನ್ ತಮ ಪುತ್ರನಿಗೆ, ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾದರು.
ಈಗ ಕ್ಷೇತ್ರವನ್ನು ಉಳಿಸಿಕೊಳ್ಳುವುದು ಇವರಿಗೆ ಬಹಳ ಮುಖ್ಯವಾಗುತ್ತದೆ. ಯಾಕೆಂದರೆ ವಿರೋಧದ ನಡುವೆಯೂ ತಮ ಪುತ್ರನಿಗೆ ಟಿಕೆಟ್ ತಂದಿರುವ ಮಲ್ಲಿಕಾರ್ಜುನ್‍ಗೆ ಜಿಲ್ಲೆಯಲ್ಲಿನ ಹಿಡಿತ, ಮುಂದಿನ ಅಧಿಕಾರಕ್ಕೆ, ಗೆಲುವು ಬಹಳ ಮುಖ್ಯವಾಗಲಿದೆ.

Author
Kannada Nadu News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ತುಂಗಭದ್ರಾ ಜಲಾಶಯಕ್ಕೆ ಒಳಹರಿವು ಹೆಚ್ಚಳ: ಒಂದೇ ದಿನದಲ್ಲಿ 4 ಟಿಎಂಸಿ ನೀರು ಸೇರ್ಪಡೆರಾಜಕೀಯಕ್ಕಿಂತ ರಾಜ್ಯದ ಹಿತವೇ ಮೊದಲ ಆದ್ಯತೆ: ಕಾವೇರಿ ಹೋರಾಟದಲ್ಲಿ ಒಂದಾದ ಸರ್ವಪಕ್ಷಗಳು, ಡಿಕೆಶಿ ಸಂದೇಶಬಳ್ಳಾರಿಗೆ ಒಲಿದ ಮಂತ್ರಿಗಿರಿ: ಸಂಪುಟ ವಿಸ್ತರಣೆಯಲ್ಲಿ ಬಿ. ನಾಗೇಂದ್ರ ರೀ-ಎಂಟ್ರಿ!ಮಹಿಳಾ ಕುಸ್ತಿಪಟುಗಳ ಲೈಂಗಿಕ ಕಿರುಕುಳ ಪ್ರಕರಣ: ಬ್ರಿಜ್ ಭೂಷಣ್ ಶರಣ್ ಸಿಂಗ್‌ಗೆ ರಿಲೀಫ್ಇಂದು ಸಂಪುಟ ವಿಸ್ತರಣೆಗೆ ಕ್ಷಣಗಣನೆ, ಮಂತ್ರಿ ಸ್ಥಾನ ಭಾಗ್ಯ ಯಾರಿಗೆ ಉಂಟು.. ಯಾರಿಗೆ ಇಲ್ಲ..!ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ವ್ಯಕ್ತಿ ಸಾವು: ಎಸ್‌ಪಿ ಜಾಹ್ನವಿ ಭೇಟಿ, ತನಿಖೆ ಆರಂಭಕತ್ತೆಬೆನ್ನೂರು ಬಳಿ ಬೋನಿಗೆ ಬಿದ್ದ ಚಿರತೆ; ದರೋಜಿ ಅರಣ್ಯಕ್ಕೆ ಸ್ಥಳಾಂತರಆಗಸ್ಟ್ 8ಕ್ಕೆ ‘ಟಾಕ್ಸಿಕ್’ ಟ್ರೇಲರ್; ಖಡಕ್ ಪೋಸ್ಟರ್‌ನಿಂದಲೇ ಹೈಪ್ ಹೆಚ್ಚಿಸಿದ ಯಶ್ಎಚ್ಚರ! ವಾಟ್ಸಾಪ್‌ಗೆ ಬರುತ್ತಿದೆ ‘ನಕಲಿ ಇನ್‌ಕಮ್ ಟ್ಯಾಕ್ಸ್ ನೋಟಿಸ್’; ಒಂದೇ ಕ್ಲಿಕ್‌ಗೆ ಖಾತೆ ಖಾಲಿಯಾಗಬಹುದುಇಂದು ಮೋದಿ ಮೈಸೂರಿಗೆ ! ವಿವೇಕ ಸ್ಮಾರಕ ಲೋಕಾರ್ಪಣೆ