ಬೆಂಗಳೂರು: ಉತ್ತರ ಕರ್ನಾಟಕದ ಕೆಲವು ಭಾಗಗಳ ಪೆಟ್ರೋಲ್ ಬಂಕ್‍ಗಳಲ್ಲಿ ಇಂಧನ ವಿತರಣೆಯಲ್ಲಿ ಗೊಂದಲ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ, ಕರ್ನಾಟಕ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯು ರಾಜ್ಯಾದ್ಯಂತ ಪೆಟ್ರೋಲ್ ಬಂಕ್‍ಗಳ ಇಂಧನ ವಿತರಣಾ ನಿಯಮಗಳನ್ನು ಇನ್ನಷ್ಟು ಬಿಗಿಗೊಳಿಸಿದೆ.
ಈ ಹೊಸ ಕ್ರಮಗಳು ಮೇ 8 ರಿಂದ ಜಾರಿಗೆ ಬಂದಿದ್ದು, ಇಂಧನ ವಿತರಣೆಯಲ್ಲಿ ಸ್ಪಷ್ಟತೆ ಮತ್ತು ಕಟ್ಟುನಿಟ್ಟನ್ನು ತರುವ ಗುರಿ ಹೊಂದಿವೆ. ಇದು ಇಂಧನ ಬಿಕ್ಕಟ್ಟಿನ ಸಂದರ್ಭದಲ್ಲಿ ಒಂದಷ್ಟು ಎಚ್ಚರಿಕೆ ವಹಿಸಲಾಗಿದೆ.
ಪೆಟ್ರೋಲ್ ಬಂಕ್ ಮಾಲೀಕರು ಇಂಧನ ಅಥವಾ ಸಾಮಾನ್ಯ ವಾಹನಗಳಿಗೆ ಇಂಧನ ತುಂಬುವುದರ ಮೇಲೆ ಯಾವುದೇ ಅಧಿಕೃತ ನಿಬರ್ಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಒಂದೇ ಬಾರಿಗೆ ದೊಡ್ಡ ಪ್ರಮಾಣದ ಇಂಧನ ಖರೀದಿ ಮತ್ತು ಇಂಧನ ಸಂಗ್ರಹಣೆಗೆ ಸರ್ಕಾರದ ಮಾರಾಟ ನಿಯಮ ಬ್ರೇಕ್ ಹಾಕಲಿದೆ. ಹೀಗಾಗಿ ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸರ್ಕಾರ ಎಲ್ಲಾ ಪೆಟ್ರೋಲ್ ಬಂಕ್‍ಗಳಿಗೆ ನಿರ್ದೇಶಿಸಿದೆ ಎಂದು ಹೇಳಿದ್ದಾರೆ. ಇನ್ನಷ್ಟು ಅನ್ವೇಷಿಸಿ ಉದ್ಯೋಗ ಮಾಹಿತಿ ಪೆÇೀರ್ಟಲ್ ಸಿನಿಮಾ ವಿಮರ್ಶೆಗಳು ಪ್ರವಾಸ ಮಾರ್ಗದರ್ಶಿ ಸರ್ಕಾರ ಈ ಬಗ್ಗೆ ಮೇ 8 ರಂದು ಪರಿಷ್ಕøತ ಸೂಚನೆಗಳನ್ನು ಹೊರಡಿಸಿದೆ.
ಬಾಟಲಿಗಳು ಅಥವಾ ಅನಧಿಕೃತ ಪಾತ್ರೆಗಳಲ್ಲಿ ಇಂಧನ ದಾಸ್ತಾನು ಮಾಡಿಕೊಳ್ಳುವುದು, ಬೃಹತ್ ಪ್ರಮಾಣದ ಮಾರಾಟದ ಮೇಲೆ ನಿಬರ್ಂಧ ವಿಧಿಸಲಾಗಿದೆ.
ಈ ನಿಯಮಗಳ ಪುನರಾವರ್ತಿತ ಉಲ್ಲಂಘನೆಗಳು ಪೆಟ್ರೋಲ್ ಬಂಕ್‍ಗಳ ಪರವಾನಗಿ ರದ್ದುಗೊಳಿಸುವುದಾಗಿ ಸಹ ಎಚ್ಚರಿಕೆ ನೀಡಲಾಗಿದೆ.