ಹಿಂದುಳಿದ ಸಮುದಾಯ ಸಂಪರ್ಕಿಸಲು ವಿಭಿನ್ನ ಪ್ರಯೋಗ
ಬೆಂಗಳೂರು; ಕೇರಳದ ವಿಳಿಂಜಂ ಮಹಿಳೆಯರು ಸಬಲೀಕರಣದಲ್ಲಿ ತನ್ನದೇ ಆದ ಹೊಸ ಭಾಷ್ಯ ಬರೆದಿದ್ದಾರೆ. ಇವರ ಯಶೋಗಾಥೆ ಇತರೆ ರಾಜ್ಯಗಳಿಗೆ ಮಾದರಿಯಾಗಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಸೌಲಭ್ಯ ಕಲ್ಪಿಸುವ ಜೊತೆಗೆ ಹಿಂದುಳಿದ ಜನರನ್ನು ಸಮಪರ್ಕವಾಗಿ ಸಂಪರ್ಕಿಸಲು ಅದಾನಿ ಫೌಂಡೇಶನ್ ಮಹಿಳೆಯರಿಗೆ ತರಬೇತಿ ನೀಡುತ್ತಿದೆ. ಸಾಮಾಜಿಕ ಕಾಳಜಿ ಮತ್ತು ಸಾರ್ವಜನಿಕ ಹಿತಾಸಕ್ತಿಯ ಈ ಉಪಕ್ರಮದಿಂದ ಕೇರಳದ ವಿಳಿಂಜಂನಲ್ಲಿನ ಚಿತ್ರಣವೇ ಬದಲಾಗಿದೆ.
ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ (ಸಿಎಸ್‍ಆರ್) ಮೂಲಕ, ಅದಾನಿ ಫೌಂಡೇಶನ್ ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ವಿಳಿಂಜಂನಲ್ಲಿ ಸಮುದಾಯ ಸ್ವಯಂಸೇವಕ ವೇದಿಕೆಯನ್ನು ಪ್ರಾರಂಭಿಸಿತು. ಇಂದು, ಈ ವೇದಿಕೆಯು ತಂತ್ರಜ್ಞಾನದ ಮೂಲಕ ಸರ್ಕಾರ ಮತ್ತು ಹಿಂದುಳಿದವರ ನಡುವೆ ಪ್ರಮುಖ ಪಾತ್ರ ವಹಿಸುತ್ತಿದೆ. ಇದರಿಂದ ಜನರು ನೇರವಾಗಿ ಸರ್ಕಾರದ ಯೋಜನೆಗಳ ಲಾಭ ಪಡೆಯುವಂತಾಗಿದೆ.
ಈ ವರ್ಷ 46 ಮಹಿಳಾ ಸ್ವಯಂಸೇವಕರಿಗೆ ತರಬೇತಿ ನೀಡಿದ್ದು, ಈ ಮೂಲಕ ಸಹಸ್ರಾರು ಜನರನ್ನು ಸರ್ಕಾರಿ ಯೋಜನೆಗಳೊಂದಿಗೆ ಸಂಪರ್ಕಿಸುವ ಗುರಿ ಹೊಂದಲಾಗಿದೆ. ಇದರಿಂದ ಜನರು ಯೋಜನೆಗಳಿಂದ ಪ್ರಯೋಜನ ಪಡೆಯುತ್ತಿದ್ದಾರೆ.
ಈ ಕಾರ್ಯ ಅತ್ಯಂತ ಕಠಿಣ, ಆದರೆ ಫೌಂಡೇಶನ್ ತಂಡ ಈ ಸವಾಲನ್ನು ಸ್ವೀಕರಿಸಿ ಕೆಲಸ ಆರಂಭಿಸಿದೆ. ಅಟಲ್ ಪಿಂಚಣಿ ಯೋಜನೆ, ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ ಮತ್ತು ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಗಳಂತಹ ಯೋಜನೆಗಳಿಗೆ ಸಂಪರ್ಕ ಕಲ್ಪಿಸುತ್ತಿದ್ದು, ಇದರಿಂದ ಹೆಚ್ಚಿನ ರೀತಿಯಲ್ಲಿ ಅನುಕೂಲವಾಗಿದೆ ಎನ್ನುತ್ತಾರೆ ಇಲ್ಲಿನ ಮಹಿಳೆಯರು.
ಹಿಂದುಳಿದ ವರ್ಗದ ಮಕ್ಕಳ ಉನ್ನತಿಯಾಗದೆ ಅವರ ಪ್ರಗತಿ ಅಪೂರ್ಣ. ವಿಶೇಷವಾಗಿ ಮಕ್ಕಳಿಗೆ ಸಂಬಂಧಿಸಿದ ಸರ್ಕಾರದ ಯೋಜನೆಗಳಿಗಾಗಿ ಶಾಲಭಂಗಲ್ ಮತ್ತು ಫೀನಿಕ್ಸ್ ನಂತಹ ವಾಟ್ಸಾಪ್ ಗುಂಪುಗಳನ್ನು ರಚಿಸಲಾಗಿದೆ. ಸ್ವಯಂತ ಸೇವಕಿ ಅನಿತಾ ಅವರ ನೇತೃತ್ವದಲ್ಲಿ ಸ್ವಯಂಸೇವಕರು ಹಳ್ಳಿಗಳಿಗೆ ಭೇಟಿ ನೀಡುತ್ತಾರೆ ಮತ್ತು ಬಡ ಜನರಿಗೆ ಸರ್ಕಾರದ ಯೋಜನೆಗಳ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ಪ್ರತಿಷ್ಠಾನದಿಂದ ತರಬೇತಿ ಪಡೆದ ನಂತರ ಅವರಂತಹ ಮಹಿಳೆಯರು ಭರವಸೆಯ ಹೊಸ ಆಶಾಕಿರವಾಗಿ ಹೊರ ಹೊಮ್ಮಿದ್ದಾರೆ.
ಈ ಸ್ವಯಂಸೇವಕರ ಸಹಾಯದಿಂದ 10 ಮತ್ತು 12 ನೇ ತರಗತಿಯ 58 ಬಡ ಮಕ್ಕಳು ಸಂಬಂಧಿತ ಯೋಜನೆಗೆ ಸಂಪರ್ಕ ಮಾಡುವ ಮೂಲಕ ರೂ. 3,000 ದಿಂದ 7,500 ರೂಪಾಯಿ ಶಿಷ್ಯವೇತನ ಪಡೆಯುತ್ತಿದ್ದಾರೆ. ಇಲ್ಲಿಯವರೆಗೆ, ಸಮುದಾಯದ ಅನೇಕ ಜನರು ಕೇರಳದ ಸ್ನೇಹಪೂವರ್ಂ, ವಿಧವಾ ಪಿಂಚಣಿ, ಜೀವನ ಮನೆ ಯೋಜನೆ, ಇ-ಲೇಬರ್ ಕಾರ್ಡ್, ಕಿಚನ್ ಗಾರ್ಡನ್ ಗಳಿಗೆ ಸಂಬಂಧಿಸಿದಂತೆ ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ.
ಆನ್‍ಲೈನ್ ಅಭಿಯಾನದ ಮೂಲಕ ಜನರು ಕಲ್ಯಾಣ ಯೋಜನೆಗಳು ಮತ್ತು ಅಧಿಕಾರಿಗಳ ಬಗ್ಗೆ ಪ್ರಮುಖ ಮಾಹಿತಿ ಪಡೆಯತ್ತಿದ್ದಾರೆ. ಮಹಿಳಾ ಸ್ವಯಂಸೇವಕರಿಗೆ ಕೃಷಿ, ಬ್ಯಾಂಕಿಂಗ್, ವಿಮೆ, ವಸತಿ, ಶಿಕ್ಷಣ, ಆರೋಗ್ಯ ಮತ್ತು ಕಲ್ಯಾಣ ಪಿಂಚಣಿ ಒಳಗೊಂಡ ಇತರ ಯೋಜನೆಗಳಿಗೆ ತರಬೇತಿ ನೀಡಲಾಗುತ್ತಿದೆ.
ಸ್ವಯಂಸೇವಕರ ಪಾತ್ರ ನಿರ್ಣಾಯಕವಾಗಿದೆ. ಪ್ರತಿಷ್ಠಾನವು ಸ್ವಯಂಸೇವಕರನ್ನು ನಿಖರವಾದ ಜ್ಞಾನದೊಂದಿಗೆ ಸಜ್ಜುಗೊಳಿಸಲು ನಾಯಕತ್ವದ ವಿಧಾನವನ್ನು ಅಭಿವೃದ್ಧಿಪಡಿಸುತ್ತಿದೆ, ಇದರಿಂದಾಗಿ ಅವರು ಕುಟುಂಬ ನೆರೆಹೊರೆ, ಕಿಚನ್ ಗಾರ್ಡನ್, ಇತ್ಯಾದಿ ಔಪಚಾರಿಕ ಮತ್ತು ಅನೌಪಚಾರಿಕ ಗುಂಪುಗಳಲ್ಲಿ ವಾರ್ಡ್ ಮಟ್ಟದಲ್ಲಿ ಮಹಿಳೆಯರು, ಕಾರ್ಮಿಕರು ಅಥವಾ ಮಕ್ಕಳ ಕಲ್ಯಾಣ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸಲು ಹೊಸ ಸದಸ್ಯರಿಗೆ ತರಬೇತಿ ನೀಡುತ್ತಿದ್ದಾರೆ. ಈ ಪ್ರಯತ್ನವು ಜನರ ಜೀವನದಲ್ಲಿ ಬದಲಾವಣೆಯ ಹೊಸ ಆಶಾಕಿರಣ ಮೂಡಿಸಿದೆ.ಗ್ಯ ಮತ್ತು ಕಲ್ಯಾಣ ಪಿಂಚಣಿ ಒಳಗೊಂಡ ಇತರ ಯೋಜನೆಗಳಿಗೆ ತರಬೇತಿ ನೀಡಲಾಗುತ್ತಿದೆ.
ಸ್ವಯಂಸೇವಕರ ಪಾತ್ರ ನಿರ್ಣಾಯಕವಾಗಿದೆ. ಪ್ರತಿಷ್ಠಾನವು ಸ್ವಯಂಸೇವಕರನ್ನು ನಿಖರವಾದ ಜ್ಞಾನದೊಂದಿಗೆ ಸಜ್ಜುಗೊಳಿಸಲು ನಾಯಕತ್ವದ ವಿಧಾನವನ್ನು ಅಭಿವೃದ್ಧಿಪಡಿಸುತ್ತಿದೆ, ಇದರಿಂದಾಗಿ ಅವರು ಕುಟುಂಬಶ್ರೀ ನೆರೆಹೊರೆ, ಕಿಚನ್ ಗಾರ್ಡನ್, ಇತ್ಯಾದಿ ಔಪಚಾರಿಕ ಮತ್ತು ಅನೌಪಚಾರಿಕ ಗುಂಪುಗಳಲ್ಲಿ ವಾರ್ಡ್ ಮಟ್ಟದಲ್ಲಿ ಮಹಿಳೆಯರು, ಕಾರ್ಮಿಕರು ಅಥವಾ ಮಕ್ಕಳ ಕಲ್ಯಾಣ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸಲು ಹೊಸ ಸದಸ್ಯರಿಗೆ ತರಬೇತಿ ನೀಡುತ್ತಾರೆ. ಈ ಪ್ರಯತ್ನವು ಜನರ ಜೀವನದಲ್ಲಿ ಬದಲಾವಣೆಯ ಹೊಸ ದಿಕ್ಕನ್ನು ಹೊಂದಿಸುತ್ತದೆ.
ಅದಾನಿ ಫೌಂಡೇಶನ್
ಅದಾನಿ ಫೌಂಡೇಶನ್, ಅದಾನಿ ಸಮೂಹದ ಸಮುದಾಯ ಬೆಂಬಲ ಮತ್ತು ತೊಡಗಿಸಿಕೊಳ್ಳುವಿಕೆ ಕಾರ್ಯದ ಅಂಗವಾಗಿದ್ದು, ಭಾರತದಾದ್ಯಂತ ಸುಸ್ಥಿರ ಫಲಿತಾಂಶಗಳನ್ನು ಸಾಧಿಸಲು ಕಾರ್ಯತಂತ್ರದ ಸಾಮಾಜಿಕ ಹೂಡಿಕೆಗಳನ್ನು ಮಾಡಲು ಬದ್ಧವಾಗಿದೆ.
1996 ರಿಂದ, ಫೌಂಡೇಶನ್ ಶಿಕ್ಷಣ, ಆರೋಗ್ಯ, ಸುಸ್ಥಿರ ಜೀವನೋಪಾಯ, ಕೌಶಲ್ಯ ಅಭಿವೃದ್ಧಿ ಮತ್ತು ಸಮುದಾಯ ಮೂಲಸೌಕರ್ಯ ಸೇರಿದಂತೆ ಪ್ರಮುಖ ಕ್ಷೇತ್ರಗಳ ಮೇಲೆ ಕೇಂದ್ರೀಕರಿಸಿದೆ. ರಾಷ್ಟ್ರೀಯ ಆದ್ಯತೆಗಳು ಮತ್ತು ಜಾಗತಿಕ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು (ಎಸ್‍ಡಿಜಿ) ಆಧರಿಸಿದ ತನ್ನ ಕಾರ್ಯತಂತ್ರಗಳೊಂದಿಗೆ, ಫೌಂಡೇಶನ್ ತನ್ನ ನವೀನ ವಿಧಾನ ಮತ್ತು ಸುಸ್ಥಿರತೆಯ ಮೇಲೆ ಕೇಂದ್ರೀಕರಿಸಲು ಹೆಸರುವಾಸಿಯಾಗಿದೆ, ಇದು ಅದಾನಿ ಗ್ರೂಪ್‍ನ ವ್ಯವಹಾರಗಳು ಮತ್ತು ಅದರಾಚೆಗಿನ ಸಮುದಾಯಗಳ ಯೋಗಕ್ಷೇಮ ಮತ್ತು ಸಂಪತ್ತಿಗೆ ಕೊಡುಗೆ ನೀಡುತ್ತದೆ. ಪ್ರಸ್ತುತ, ಇದು 19 ರಾಜ್ಯಗಳಾದ್ಯಂತ 5,753 ಹಳ್ಳಿಗಳಲ್ಲಿ ಕಾರ್ಯನಿರ್ವಹಿಸುತ್ತದೆ, ಇದು 7.3 ಮಿಲಿಯನ್ ಜನರ ಜೀವನದ ಮೇಲೆ ಪರಿಣಾಮ ಬೀರುತ್ತದೆ.