ಅಧಿಕಾರ ಸಿಕ್ಕಿದೆ, ಜನ ಸೇವೆ ಮಾಡಿ: ಶಾಮನೂರು ಶಿವಶಂಕರಪ್ಪ

ಬಳ್ಳಾರಿ:  ರಾಜ್ಯದ ಕಿರಿಯ ವಯಸ್ಸಿನ ಶಾಸಕರ ಪೈಕಿ ನಾರಾ ಭರತ್ ರೆಡ್ಡಿ ಅವರೂ ಒಬ್ಬರಾಗಿದ್ದು, ಮುಂದಿನ ದಿನಗಳಲ್ಲಿ ರಾಜ್ಯಮಟ್ಟದ ನಾಯಕ ಆಗಿ ಬೆಳೆಯುವ ಎಲ್ಲ ಲಕ್ಷಣಗಳಿವೆ ಎಂದು ಮಾಜಿ ಸಚಿವ, ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರು ಅಭಿಪ್ರಾಯಪಟ್ಟರು.

ಬಳ್ಳಾರಿಯ ಗಾಂಧಿನಗರದಲ್ಲಿರುವ ಮಾಜಿ ಎಂಎಲ್ಸಿ, ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ, ರಾಜ್ಯ ಅಧ್ಯಕ್ಷ ಎನ್.ತಿಪ್ಪಣ್ಣ ಅವರ ನಿವಾಸಕ್ಕೆ ಸೋಮವಾರ ಭೇಟಿ ನೀಡಿದ್ದ ವೇಳೆ ತಮ್ಮನ್ನು ಭೇಟಿಯಾಗಿ ಸನ್ಮಾನಿಸಿದ ಬಳ್ಳಾರಿ ನಗರ ಕ್ಷೇತ್ರದ ನೂತನ ಶಾಸಕ ನಾರಾ ಭರತ್ ರೆಡ್ಡಿ ಅವರಿಗೆ ಸಲಹೆ ಸೂಚನೆ ನೀಡಿದರು.

 

ಯಾರಿಗೇ ಆಗಲಿ ಸಣ್ಣ ವಯಸ್ಸಿಗೆ ಜನರ ಆಶೀರ್ವಾದದೊಂದಿಗೆ ಅಧಿಕಾರ ಸಿಗುವುದು ದುರ್ಲಭ. ನಿಮಗೆ ಅಧಿಕಾರ ಸಿಕ್ಕಿದೆ. ಜನರ ಸೇವೆ ಮಾಡಿ, ಅವರ ಪ್ರೀತಿಗೆ ಪಾತ್ರರಾಗಿ. ನಿಮ್ಮ ಬೆಂಬಲಕ್ಕೆ ನಾವಿದ್ದೇವೆ ಎಂದು ತಿಳಿಸಿದರು.

ಎನ್.ತಿಪ್ಪಣ್ಣ ಅವರ ಆರೋಗ್ಯದಲ್ಲಿ ವ್ಯತ್ಯಾಸ ಆಗಿರುವ ಹಿನ್ನೆಲೆಯಲ್ಲಿ ಶಾಮನೂರು ಶಿವಶಂಕರಪ್ಪ ಅವರು ತಿಪ್ಪಣ್ಣ ಅವರ ಆರೋಗ್ಯ ವಿಚಾರಿಸಲು ನಗರಕ್ಕೆ ಭೇಟಿ ನೀಡಿದ್ದರು.

 

ಈ ವೇಳೆ ನೂತನ ಶಾಸಕ ನಾರಾ ಭರತ್ ರೆಡ್ಡಿ ಅವರು ತಿಪ್ಪಣ್ಣ ಅವರ ನಿವಾಸಕ್ಕೆ ತೆರಳಿ ಉಭಯ ನಾಯಕರಿಗೆ ಸನ್ಮಾನಿಸಿ, ಅಭಿನಂದಿಸಿ, ಆಶೀರ್ವಾದ ಪಡೆದರು. ತಿಪ್ಪಣ್ಣ ಅವರು ಭರತ್ ಅವರನ್ನು ಸನ್ಮಾನಿಸಿ ಆಶೀರ್ವದಿಸಿದರು.

 

 

ಈ ವೇಳೆ ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಕಾರ್ಯದರ್ಶಿ ರೇಣುಕಾ ಪ್ರಸನ್ನ ರಾಜ್ಯ ಕಾರ್ಯದರ್ಶಿ ಗಳಾದ ನಟರಾಜ್ ಸಾಗರ್ನಲ್ಲಿ ಕೆ ಬಿ ಶ್ರೀನಿವಾಸ್ ರೆಡ್ಡಿ ಅಂದ್ರ ಮಹಾಸಭಾ ಅಧ್ಯಕ್ಷರು ದಂಡಿನ ಶಿವಾನಂದ ಜಿಲ್ಲಾಧ್ಯಕ್ಷ ಚಾನಾಳ್ ಶೇಖರ್, ಜಾನೆಕುಂಟೆ ಕುಮ್ಮಿ ತಿಮ್ಮನಗೌಡ ಮಿಂಚಿರಿ ಬಾಬು ಸಮಾಜದ ಹಲವು ಸೇರಿದಂತೆ ಇತರರು ಹಾಜರಿದ್ದರು.

Facebook
Twitter
LinkedIn
WhatsApp

Leave a Comment

Your email address will not be published. Required fields are marked *

Translate »
Scroll to Top