ಸ್ವಾಮೀಜಿಗಳತ್ರನೆ ಲಂಚ ಕೇಳ್ತಾರೆ ಅಂದ್ರೆ ಎಂಥ ನಾಚಿಕೆಗೇಡಿನ‌ ಸರ್ಕಾರ ಇದು

ಮಂಡ್ಯ : ಮಠಗಳ ಅನುದಾನ ಪಡೆಯಲು ಕಮಿಷನ್ ಕೊಡಬೇಕು ಎಂಬ ವಿಚಾರ. ಸರ್ಕಾರದ ವಿರುದ್ಧ ಆರೋಪ ಮಾಡಿದ್ದ ದಿಂಗಾಲ್ಲೇಶ್ವರ ಸ್ವಾಮೀಜಿ. ಸ್ವಾಮೀಜಿಗಳತ್ರನೆ ಲಂಚ ಕೇಳ್ತಾರೆ ಅಂದ್ರೆ ಎಂಥ ನಾಚಿಕೆಗೇಡಿನ‌ ಸರ್ಕಾರ ಇದು. ನಾವು ಮಾಡ್ತಿರುವ ಹೋರಾಟಗಳಿಗೆ ಇದು ಸಾಕ್ಷಿ ಇದ್ದಂತೆ. ಇದು 40% ಸರ್ಕಾರ ಅನ್ನೋದು ಸಾಬೀತಾಗಿದೆ. ಇದು ರಾಜ್ಯ ಸರ್ಕಾರದ ಹಣ ಆಗಿರುವುದರಿಂದ ಯಾರೇ ಆದರು ಕಮಿಷನ್ ಕೊಡ್ಬೇಕಾಗಿದೆ. ಇದನ್ನ ನಾನು ಖಂಡಿಸುತ್ತೇನೆ. ಸ್ವಾಮೀಜಿಗಳಿಗೆ ಕೊಟ್ಟ ದುಡ್ಡಿನಲ್ಲಿಯು ಕಮೀಷನ್ ಕೇಳ್ತಾರೆ ಅಂದ್ರೆ ಇದು ಎಂಥ ಭ್ರಷ್ಟ ಸರ್ಕಾರ ಅಂತ ಗೊತ್ತಾಗುತ್ತೆ. ಸ್ವಾಮೀಜಿಗಳತ್ರ ಕಮಿಷನ್ ಕೇಳೋದು ನಾಚಿಕೆಗೇಡಿನತನ. ಸಿಎಂ ಮನೆ ಮುತ್ತಿಗೆ ಹಾಕಿದ್ದಕ್ಕೆ ಕಾಂಗ್ರೆಸ್ ನಾಯಕರ ಮೇಲೆ FIR ವಿಚಾರ. ನಾನು A1 ಆದ್ರು ಆಗಲಿ, A2 ಆದ್ರು ಆಗಲಿ, ನಾವು ಇದನ್ನ ಹೆದರಿಸುತ್ತೇವೆ.


ನಾವು 40% ಕಮಿಷನ್ ಕೇಳಿಲ್ಲ. ನಾವು ಮಾಡಿರುವುದು ಪ್ರತಿಭಟನೆ. ಬಿಜೆಪಿ ನಾಯಕರಿಗೆ ಮಾಜಿ ಸಿಎಂ ಸಿದ್ದ ಟಾಂಗ್. ಹುಬ್ಬಳ್ಳಿ ಗಲಾಟೆ ವಿಚಾರ. ಹಿರೇಮಠ ಎನ್ನುವಾತ ಪೋಸ್ಟ್ ಮಾಡಿದ್ದ. ಯಾಕಾಗಿ ಪೋಸ್ಟ್ ಮಾಡಿದ್ದ ಅಂತ ಗೊತ್ತಿಲ್ಲ. ನಾವು ಮಾಡುತ್ತಿರುವ ಹೋರಾಟವನ್ನ ಡೈವರ್ಟ್ ಮಾಡೋಕೆ ಮಾಡಿದ್ರಾ ಗೊತ್ತಿಲ್ಲ. ಯಾರೇ ತಪ್ಪು ಮಾಡಿದ್ರು ಶಿಕ್ಷೆ ಆಗಬೇಕು. ಪೋಸ್ಟ್ ಮಾಡಿದ ಬಳಿಕ ಗಲಾಟೆಯಾಗಿದೆ. ಯಾರು ಕೂಡ ಕಾನೂನನ್ನ ಕೈಗೆ ತೆಗೆದುಕೊಳ್ಳಬಾರದು.ಅಮಾಯಕರು ಬಿಡುಗಡೆ ಆಗಬೇಕು ಅಂತ ಕಮಿಷನರ್ ಗೆ ಪೋನ್ ಮಾಡಿ ಹೇಳಿದ್ದೇನೆ.ಮಂಡ್ಯದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ.

Leave a Comment

Your email address will not be published. Required fields are marked *

Translate »
Scroll to Top