ಶ್ರೀ ಸಿದ್ದಾರೂಢ ಸ್ವಾಮೀಜಿ ಹುಬ್ಬಳ್ಳಿ – ವಿಜಯವಾಡ ನಿಲ್ದಾಣಗಳ ನಡುವೆ ರೈಲು ಸೇವೆ ಪ್ರಾರಂಭ

ಬೆಂಗಳೂರು : ನೈಋತ್ಯ ರೈಲ್ವೆಯು, ರೈಲು ಸಂಖ್ಯೆ 17329/17330 ಶ್ರೀ ಸಿದ್ದಾರೂಢ ಸ್ವಾಮೀಜಿ ಹುಬ್ಬಳ್ಳಿ – ವಿಜಯವಾಡ – ಶ್ರೀ ಸಿದ್ದಾರೂಢ ಸ್ವಾಮೀಜಿ ಹುಬ್ಬಳ್ಳಿ ಡೈಲಿ ಎಕ್ಸ್ ಪ್ರೆಸ್ ರೈಲುಗಳನ್ನು ಈ ಕೆಳಗೆ ತಿಳಿಸಿದ ನಿಲುಗಡೆಗಳು ಹಾಗೂ ವೇಳಾಪಟ್ಟಿಯೊಂದಿಗೆ ಸಂಚರಿಸಲು ನಿರ್ಧರಿಸಿದೆ. ದಿನಾಂಕ 20.04.2022 ರಿಂದ ಮುಂದಿನ ಸೂಚನೆಯವರೆಗೂ ಅನ್ವಯವಾಗುವಂತೆ ರೈಲು ಸಂಖ್ಯೆ 17329 ಶ್ರೀ ಸಿದ್ದಾರೂಢ ಸ್ವಾಮೀಜಿ ಹುಬ್ಬಳ್ಳಿ – ವಿಜಯವಾಡ ಡೈಲಿ ಎಕ್ಸ್ ಪ್ರೆಸ್ ರೈಲು ಶ್ರೀ ಸಿದ್ದಾರೂಢ ಸ್ವಾಮೀಜಿ ಹುಬ್ಬಳ್ಳಿ ನಿಲ್ದಾಣದಿಂದ ಪ್ರತಿದಿನ ಸಾಯಂಕಾಲ 07:30 ಗಂಟೆಗೆ ನಿರ್ಗಮಿಸಿ, ವಿಜಯವಾಡ ನಿಲ್ದಾಣಕ್ಕೆ ಮರುದಿನ ಮಧ್ಯಾಹ್ನ 12:20 ಗಂಟೆಗೆ ತಲುಪಲಿದೆ. ದಿನಾಂಕ 21.04.2022 ರಿಂದ ಮುಂದಿನ ಸೂಚನೆಯವರೆಗೂ ಅನ್ವಯವಾಗುವಂತೆ ರೈಲು ಸಂಖ್ಯೆ 17330 ವಿಜಯವಾಡ – ಶ್ರೀ ಸಿದ್ದಾರೂಢ ಸ್ವಾಮೀಜಿ ಹುಬ್ಬಳ್ಳಿ ಡೈಲಿ ಎಕ್ಸ್ ಪ್ರೆಸ್ ರೈಲು ವಿಜಯವಾಡ ನಿಲ್ದಾಣದಿಂದ ಪ್ರತಿದಿನ ಮಧ್ಯಾಹ್ನ 01:50 ಗಂಟೆಗೆ ನಿರ್ಗಮಿಸಿ, ಶ್ರೀ ಸಿದ್ದಾರೂಢ ಸ್ವಾಮೀಜಿ ಹುಬ್ಬಳ್ಳಿ ನಿಲ್ದಾಣಕ್ಕೆ ಮರುದಿನ ಬೆಳಗ್ಗೆ 05:30 ಗಂಟೆಗೆ ತಲುಪಲಿದೆ.

ಈ ರೈಲು ಮಾರ್ಗದಲ್ಲಿ ಗದಗ (08:28/08:30 pm), ಬಾಣಾಪುರ (09:07/09:08 pm), ಕೊಪ್ಪಳ (09:25/09:27 pm), ಮುನಿರಾಬಾದ್ (09:49/09:50 pm), ಹೊಸಪೇಟೆ (10:05/10:10 pm), ತೋರಣಗಲ್ಲು (10:42/10:44 pm), ಕುಡತಿನಿ (10:59/11:00 pm), ಬಳ್ಳಾರಿ (12:25/12:30 am), ಬಂಟನಹಾಳ್ (12:54/12:55 am), ಗುಂತಕಲ್ (01:05/01:10 am), ಮದ್ದಿಕೆರಾ (01:24/01:25 am), ತುಗ್ಗಲಿ (01:34/01:35 am), ಪೆಂಡೆಕಲ್ಲು (01:49/01:50 am), ಲಿಂಗನೆನಿದೊಡ್ಡಿ (01:55/01:56 am), ಮಲ್ಲಿಯಾಲ (02:04/02:05 am), ಧೋಣೆ (02:30/02:35 am), ರಂಗಪುರಂ (02:59/03:00 am), ಬೆತಂಚೆರ್ಲಾ (03:09/03:10 am), ಬಿ ಸಿಮೆಂಟ್ ನಗರ (03:18/03:19 am), ಪಣ್ಯಮ್ (03:44/03:45 am), ನಂದ್ಯಾಲ (04:00/04:05 am), ಗಾಜುಲಪಲ್ಲಿ (04:16/04:17 am), ದಿಗುವಮೆಟ್ಟ (04:48/04:49 am), ಗಿದ್ದಲೂರು (05:05/05:06 am), ಸೋಮಿದೇವಿಪಲ್ಲೆ (05:19/05:20 am), ಕುಂಬಂ (05:41/05:42 am), ತರ್ಲುಪಾಡು (05:54/05:55 am), ಮಾರ್ಕಾಪುರ ರೋಡ (06:06/06:07 am), ಡೊಣಕೊಂಡ (06:29/06:30 am), ಕುರಿಚೇಡು (06:41/06:42 am), ವಿನುಕೊಂಡ (07:01/07:02 am), ಶಾವಲ್ಯಪುರಂ (07:10/07:11 am), ಸಂತಮಗುಳೂರು (07:20/07:21 am), ನರಸರಾವ್ ಪೇಟೆ (07:34/07:35 am), ನುದುರುಪಾಡು (07:49/07:50 am), ಪೆರಿಚೆರ್ಲಾ (08:06/08:07 am), ನಲ್ಲಪಾಡು (08:14/08:15 am), ಗುಂಟೂರು (10:15/10:20 am), ನಂಬೂರು (10:31/10:32 am) ಮತ್ತು ಮಂಗಳಗಿರಿ (10:44/10:45 am) ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರುತ್ತದೆ.

ಹಿಂದಿರುಗುವ ದಿಕ್ಕಿನಲ್ಲಿ ಈ ರೈಲು ಮಾರ್ಗದಲ್ಲಿ, ಮಂಗಳಗಿರಿ (02:07/02:08 pm), ನಂಬೂರು (02:15/02:16 pm), ಗುಂಟೂರು (02:30/02:35 pm), ನಲ್ಲಪಾಡು (02:46/02:47 pm), ಪೆರಿಚೆರ್ಲಾ (02:54/02:55 pm), ನುದುರುಪಾಡು (03:11/03:12 pm), ನರಸರಾವ್ ಪೇಟೆ (03:26/03:27 pm), ಸಂತಮಗುಳೂರು (03:40/03:41 pm), ಶಾವಲ್ಯಪುರಂ (03:51/03:52 pm), ವಿನುಕೊಂಡ (03:59/04:00 pm), ಕುರಿಚೇಡು (04:19/04:20 pm), ಡೊಣಕೊಂಡ (04:31/04:32 pm), ಮಾರ್ಕಾಪುರ ರೋಡ (04:56/04:57 pm), ತರ್ಲುಪಾಡು (05:08:05:09 pm), ಕುಂಬಂ (05:21/05:22 pm), ಸೋಮಿದೇವಿಪಲ್ಲೆ (05:41/05:42 pm), ಗಿದ್ದಲೂರು (05:57/05:58 pm), ದಿಗುವಮೆಟ್ಟ (06:13/06:14 pm), ಗಾಜುಲಪಲ್ಲಿ (06:45/06:46 pm), ನಂದ್ಯಾಲ (07:40/07:45 pm), ಪಣ್ಯಮ್ (08:00/08:01 pm), ಬಿ ಸಿಮೆಂಟ್ ನಗರ (08:24/08:25 pm), ಬೆತಂಚೆರ್ಲಾ (08:31/08:32 pm), ರಂಗಪುರಂ (08:42/08:43 pm), ಧೊಣೆ (09:18/09:20 pm), ಮಲ್ಲಿಯಾಲ (09:30/09:31 pm), ಲಿಂಗನೆನಿದೊಡ್ಡಿ (09:37/09:38 pm), ಪೆಂಡೆಕಲ್ಲು (09:49/09:50 pm), ತುಗ್ಗಲಿ (10:04/10:05 pm), ಮದ್ದಿಕೆರಾ (10:14/10:15 pm), ಗುಂತಕಲ್ (10:55/11:00 pm), ಬಂಟನಹಾಳ್ (11:14/11:15 pm), ಬಳ್ಳಾರಿ (01:00/01:05 am), ಕುಡತಿನಿ (01:27/01:28 am), ತೋರಣಗಲ್ಲು (01:43/01:45 am), ಹೊಸಪೇಟೆ (02:25/02:30 am), ಮುನಿರಾಬಾದ್ (02:40/02:41 am), ಕೊಪ್ಪಳ (03:06/03:08 am), ಬಾಣಾಪುರ (03:20/03:21 am) ಮತ್ತು ಗದಗ (04:16/04:18 am) ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರುತ್ತದೆ.

ಈ ರೈಲಿನಲ್ಲಿ ಒಂದು 3ನೇ ದರ್ಜೆ ಹವಾ ನಿಯಂತ್ರಿತ ಬೋಗಿ, ಆರು ಸ್ಲೀಪರ್ ಬೋಗಿಗಳು, ಐದು ಸಾಮಾನ್ಯ 2ನೇ ದರ್ಜೆಯ ಬೋಗಿಗಳು ಮತ್ತು ಎರಡು 2ನೇ ದರ್ಜೆಯ ಲಗೇಜ್ ಕಮ್ ಬ್ರೇಕ್-ವ್ಯಾನ್‌ಗಳು/ದಿವ್ಯಾಂಗಜನ್ ಬೋಗಿಗಳನ್ನು ಒಟ್ಟಾರೆ 14 ಬೋಗಿಗಳನ್ನು ಒಳಗೊಂಡಿರುತ್ತದೆ. ಈ ಮೇಲಿನ ಪತ್ರಿಕಾ ಪ್ರಕಟಣೆಯನ್ನು, ದೂರದರ್ಶನ ಹಾಗೂ ರೇಡಿಯೋ ಮೂಲಕ ಪ್ರಸಾರ ಮಾಡಲು ಹಾಗೂ ಪತ್ರಿಕಾ ಮಾಧ್ಯಮಗಳಲ್ಲಿ ಪ್ರಕಟಿಸಲು ದಯವಿಟ್ಟು ವ್ಯವಸ್ಥೆ ಮಾಡಲು ವಿನಂತಿ.

Leave a Comment

Your email address will not be published. Required fields are marked *

Translate »
Scroll to Top