ಕರ್ನಾಟಕ ಅಸಂಘಟಿತ ಕಾರ್ಮಿಕರ ಕ್ಷೇಮಾಭಿವೃದ್ಧಿ ಉದ್ಘಾಟನೆ

ಮರಿಯಮ್ಮನಹಳ್ಳಿ,ಜ,9 : ಕರ್ನಾಟಕ ಅಸಂಘಟಿತ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಹೋಬಳಿ ಘಟಕ ಉದ್ಘಾಟನಾ ಸಮಾರಂಭ ಸೋಮವಾರ ದುರ್ಗಾ ದಾಸ್ ಬಯಲು ಕಲಾಮಂದಿರದಲ್ಲಿ ನಡೆಯಲಿದೆ. ಪಟ್ಟಣ ಪೋಲಿಸ್ ಠಾಣೆ ಪಿಎಸ್ ಐ ಹನುಮಂತಪ್ಪ ತಳವಾರ ಕಾರ್ಯಕ್ರಮ ಉದ್ಘಾಟಿಸಲಿದ್ದು, ವಿಜಯನಗರ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪಿ.ಸತ್ಯನಾರಾಯಣ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ರಾಜ್ಯಪ್ರಶಸ್ತಿ ಪುರಸ್ಕೃತ ಡಾ.ಕೆ.ನಾಗರತ್ನಮ್ಮ, ಕಾರ್ಮಿಕ ನಿರೀಕ್ಷಕರಾದ ಭೂಪಾಲ್, ಎಂ.ಅಶೋಕ, ಪ.ಪಂ.ಮುಖ್ಯಾಧಿಕಾರಿ ಫಕೃದ್ದಿನ್ ಸಾಬ್, ಲಲಿತ ಕಲಾ ರಂಗದ ಅಧ್ಯಕ್ಷ ಹುರುಕೊಳ್ಳಿ ಮಂಜುನಾಥ, ರಂಗಕರ್ಮಿ ಬಿಎಂಎಸ್ ಪ್ರಭು, ಅಂಬೇಡ್ಕರ್ ಚಿಂತಕ ಯಮನೂರಪ್ಪ ಹಲುವಾಗ್ಲಿ ಪಾಲ್ಗೊಳಲಿದ್ದಾರೆ ಎಂದು ಕ.ಅ.ಕಾ.ಕ್ಷೇ.ಸಂಘದ ಜಿಲ್ಲಾಧ್ಯಕ್ಷ ಆನಂದ ತಿಳಿಸಿದ್ದಾರೆ.

Leave a Comment

Your email address will not be published. Required fields are marked *

Translate »
Scroll to Top