ಡಿಜಿಟಲ್ ಇಂಡಿಯ ಶಿಕ್ಷಣ ಮತ್ತು ಉದ್ಯೋಗದಲ್ಲಿ ಆಳವಡಿಸಿಕೊಂಡರೆ ದೇಶ ಅಭಿವೃದ್ದಿ ಸಾಧ್ಯ

ಬೆಂಗಳೂರು: ಸಾಯಿರಾಂ ಕಾಲೇಜ್ ಆಫ್ ಇಂಜಿನಿಯರಿಂಗ್ ತನ್ನ 21 ನೇ ಪದವಿ ದಿನವನ್ನು ಕಾಲೇಜಿನಲ್ಲಿ ಆಚರಿಸಲಾಯಿತು. ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವರಾದ ಎ.ನಾರಾಯಣಸ್ವಾಮಿರವರು , ಡಾ. ಎಚ್.ಆರ್. ಸುದರ್ಶನ ರೆಡ್ಡಿ, ಪ್ರಾದೇಶಿಕ ನಿರ್ದೇಶಕರು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಂಗಳೂರು ವಲಯ, ಶ್ರೀ ಸಾಯಿ ಪ್ರಕಾಶ್ ಲಿಯೋ ಮುತ್ತು, ಅಧ್ಯಕ್ಷರು ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ & ಶ್ರೀ ನರೇಶ್ ರಾಜ್, ಮುಖ್ಯ ಮಾಹಿತಿ ಅಧಿಕಾರಿ, ಸಾಯಿರಾಂ ಸಮೂಹ ಸಂಸ್ಥೆಗಳು, ಡಾ. ಬಿ. ಷಡಕ್ಷರಪ್ಪ, ಕಾಲೇಜಿನ ಪ್ರಾಂಶುಪಾಲರು, ಡಾ.ಅರುಣ್ ಕುಮಾರ್ ರವರು ದೀಪಾ ಬೆಳಗಿಸಿ 21ಪದವಿ ಪ್ರಧಾನ ಸಮಾರಂಭಕ್ಕೆ ಚಾಲನೆ ನೀಡಿದರು.

ಶ್ರೀ ಸಾಯಿಪ್ರಕಾಶ್ ಲಿಯೋ ಮುತ್ತುರವರು ಮಾತನಾಡಿ ಕಲಿಕೆಯು ನಿರಂತರ ಪ್ರಕ್ರಿಯೆಯಾಗಿದೆ ಮತ್ತು ಇಂದಿನ ಸನ್ನಿವೇಶದಲ್ಲಿ ಕಂಪನಿಗಳು ಪದವೀಧರರಿಂದ ಬಲವಾದ ತಾಂತ್ರಿಕ ಕೌಶಲ್ಯಗಳನ್ನು ನಿರೀಕ್ಷಿಸುತ್ತಿವೆ. ಹೀಗಾಗಿ ಕಲಿಕೆಯನ್ನು ನಿಲ್ಲಿಸದಂತ ಕಾರ್ಪೊರೇಟ್‌ಗೆ ಸೇರಿದ ನಂತರವೂ ಅವರು ನಿರಂತರವಾಗಿ ಕೌಶಲ್ಯವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಎಲ್ಲಾ ಪದವೀಧರರಿಗೆ ಸಲಹೆ ನೀಡಿದರು. ಸಚಿವರಾದ ಎ.ನಾರಾಯಣಸ್ವಾಮಿರವರು ಮಾತನಾಡಿ ಪದವಿ ನಂತ ಮುಂದೆ ಏನು ಮಾಡಬೇಕು ಎಂದು ಮುಂದಲೋಚನೆ ಮಾಡಬೇಕು ಐ.ಎ.ಎಸ್.ಮತ್ತು ಐ.ಪಿ.ಎಸ್ ಶಿಕ್ಷಣ ಪಡೆಯಬೇಕ ಎಂಬ ಅಲೋಚನೆ ಮಾಡಬೇಕು.ಡಾಕ್ಟರ್ ,ಇಂಜನಿಯರ್ ಗಳು ಐ.ಎ.ಎಸ್.ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ಪ್ರಧಾನಿ ನರೇಂದ್ರಮೋದಿರವರ ಡಿಲಿಟಲ್ ಇಂಡಿಯ ದಂತೆ ಕಾಗದ ರಹಿತ ವ್ಯವಹಾರ ಆನ್ ಲೈನ್ ಮೂಲಕ ಶಿಕ್ಷಣ ,ಉದ್ಯೋಗ ಮಾಡಿದರೆ ದೇಶ ಅಭಿವೃದ್ದಿ ಸಾಧ್ಯ.ಶಿಕ್ಷಣದಲ್ಲಿ ಮೌಲ್ಯಗಳು ,ಬದುಕಿನ ಅರ್ಥ ಮಾನವೀಯತೆ, ಸಮಾಜಕ್ಕೆ ಸಮರ್ಪಣೆ ಬಗ್ಗೆ ಪ್ರತಿಯೊಬ್ಬರು ವಿದ್ಯಾವಂತರು ಯೋಚನೆ ಮಾಡಿದರೆ ಸಮಾಜಕ್ಕೆ ಕುಟುಂಬಕ್ಕೆ ಪದವಿ ಪಡೆದವರು ಉಪಯೋಗವಾಗುತ್ತಾರೆ. ಪದವೀಧರರನ್ನು ಉತ್ತಮ ನಾಗರಿಕರಾಗಲು ಮತ್ತು
ರಾಷ್ಟ್ರದ ನಿರ್ಮಾಣಕ್ಕೆ ಕೊಡುಗೆ ನೀಡಲು ಆಹ್ವಾನಿಸಿದರು.

ಈ ಸಮಾರಂಭದಲ್ಲಿ, ಕಂಪ್ಯೂಟರ್ ಸೈನ್ಸ್, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್, ಎಲೆಕ್ಟಿಕಲ್ ಮತ್ತು ಎಲೆಕ್ಟ್ರಾನಿಕ್ಸ್, ಮೆಕ್ಯಾನಿಕಲ್ ಮತ್ತು ಮಾಸ್ಟರ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್‌ನಂತಹ ವಿವಿಧ ಶಾಖೆಗಳ 178 ವಿದ್ಯಾರ್ಥಿಗಳು ತಮ್ಮ ಪದವಿಗಳನ್ನು ಪಡೆದರು. 92% ಅರ್ಹ ಪದವೀಧರರನ್ನು ಕಾಲೇಜ್ ಉದ್ಯೋಗ ನಿಯೋಜನೆ ಕೇಂದ್ರ ಮೂಲಕ ಪ್ರತಿಷ್ಠಿತ ಕಂಪನಿಗಳಲ್ಲಿ ಅತ್ಯುತ್ತಮ ಉದ್ಯೋಗಾವಕಾಶಗಳನ್ನು ಕೂಡಿಸಲಾಗಿದೆ. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಿಂದ ಪದವಿಗಳನ್ನು ನೀಡಲಾಗುವುದು. ಸಂಸ್ಥೆಯಲ್ಲಿನ ಅಧ್ಯಯನದ ಸಂದರ್ಭದಲ್ಲಿ ವೃತ್ತಿಪರರಾಗಿ ತಮ್ಮ ಮಕ್ಕಳನ್ನು ರೂಪಿಸುವಲ್ಲಿ ಶ್ರಮ ವಹಿಸಿದ ಅಧ್ಯಾಪಕರು ಮತ್ತು
ಆಡಳಿತ ಮಂಡಳಿಗೆ ಪಾಲಕರು ಸಂತೋಷದ ಕೃತಜ್ಞತೆಯನ್ನು ಸಲ್ಲಿಸಲಾಯಿತು.

Leave a Comment

Your email address will not be published. Required fields are marked *

Translate »
Scroll to Top