ಕುಷ್ಟಗಿ : ಮದ್ಯಾಹ್ನ ೪ ಗಂಟೆಯಾದರು ಸಹ ಕುಷ್ಟಗಿ ಗ್ರಾಮೀಣ ಕುಡಿಯುವ ನೀರು ಇಲಾಖೆ ಖಾಲಿ ಖಾಲಿ ಏಳುವವರು ಇಲ್ಲ ಕೇಳುವವರು ಇಲ್ಲ ಇಲ್ಲಿ ಅಧಿಕಾರಿಗಳು ಮಾಡಿದ್ದೆ ಕಾರು ಬಾರು. ಹೌದು ಸಾರ್ವಜನಿಕ ಬಂಧುಗಳೇ ನಿಮಗೆ ತಿಳಿಯಬೇಕಾದ ಅಗತ್ಯ ವಿಷಯ ಇದೇ ಅದು ಎನೆಂದರೆ ಕುಷ್ಟಗಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಥೆ ಇದು ಗ್ರಾಮೀಣ ಪ್ರದೇಶದಿಂದ ಹಳ್ಳಿಯ ಜನ ಇಲಾಖೆಗೆ ಬಂದು ತಮ್ಮ ಗ್ರಾಮದ ಕುಡಿಯುವ ನೀರಿನ ಬಗ್ಗೆ ಮಾಹಿತಿ ಕೇಳಬೇಕು ಎಂದರೆ ಮದ್ನಾಹ ಸಮಯ ೪ ಗಂಟೆಯಾದರು ಸಹ ಈ ಇಲಾಖೆಯಲ್ಲಿ ಯಾರು ಇಲ್ಲದೇ ಬಿಕೋ ಎನ್ನುವಂತೆ ಇರುತ್ತದೆ ಬೆಳಿಗ್ಗೆ ೧೦ ಗಂಟೆಗೆ ಬಂದರು ಸಹ ಸಹಾಕಯ ಕಾರ್ಯಪಾಲಕ ಅಭಿಯಂತರ ಅಧಿಕಾರಿ ಪ್ರತಿನಿತ್ಯ ಕಾಣಿಯಾಗಿರುತ್ತಾರೆ .

ಪೋನ್ ಮಾಡಿದರು ಸಹ ಪೋನ್ ತೆಗೆಯುವದಿಲ್ಲ ಇಲ್ಲಿ ಪ್ರತಿದಿನ ಮದ್ಯಾಹ್ನ ಆದರೆ ಸಾಕು ಖಾಲಿ ಖಾಲಿ ಬರಿ ಇಲಾಖೆ ಜವಾನ್ ಮಾತ್ರ ಕಾಣಿಸುವವರು ಬಿಟ್ಟರೆ ಬೇರೆ ಅಧಿಕಾರಿಗಳು ಕಾಣುವದಿಲ್ಲ ಇದು ಸರಕಾರಿ ಇಲಾಖೆನಾ ಅಥವಾ ಇದು ಅಧಿಕಾರಿಗಳ ಮನೆನಾ ತಿಳಿಯುತ್ತಿಲ್ಲ ಅನ್ನುತ್ತಾರೆ ಸಾರ್ವಜನಿಕರು ಇನ್ನು ಮುಂದೆಯಾದರು ಗ್ರಾಮೀಣ ಕುಡಿಯುವ ನೀರು ಇಲಾಖೆ ಅಧಿಕಾರಿಗಳು ಅರಿತುಕೊಂಡು ಸರಕಾರದ ಸಮಯಕ್ಕೆ ಸಕಾಲಕ್ಕೆ ಕಚೇರಿ ತೆರೆದು ಸಾರ್ವಜನಿಕರ ಕೆಲಸ ಮಾಡಲು ಮುಂದಾಗಬೇಕು ಮತ್ತು ಸಾರ್ವಜನಿಕರ ಮನವಿಗೆ ಸ್ಪಂದಿಸಬೇಕಾಗಿದೆ ಎಂದು ಸಾರ್ವಜನಿಕರ ಆಗ್ರಹವಾಗಿದೆ.
