ಶತಾಯುಷಿ ತಂಬ್ರಳ್ಳಿ ದೊಡ್ಡ ಖಾಸೀಂಸಾಬ್ ಸಂಭ್ರಮ ಆಚರಣೆ

ಮರಿಯಮ್ಮನಹಳ್ಳಿ.ಜ,4 : ಹೊಸವರುಷ ಎಲ್ಲರಿಗೂ ಸಂಭ್ರಮವನ್ನು ಆಚರಿಸಲು ಕಾರಣವಾದರೆ, ಪಟ್ಟಣದ ಕುಟುಂಬವೊಂದರ ಮನೆ ಯಜಮಾನನ 100 ವರ್ಷದ ಸಂಭ್ರಮ ಆಚರಣೆಗೆ ಹೊಸದಿನ ಕಾರಣವಾಯಿತು. ಆ ಸಂಭ್ರಮದ ಕೇಂದ್ರ ಬಿಂದು ಶತಾಯುಷಿ ತಂಬ್ರಳ್ಳಿ ದೊಡ್ಡ ಖಾಸೀಂಸಾಬ್ .ಮೂಲತಃ ನಾರಾಯಣದೇವರ ಕೆರೆಯವರಾದ ಇವರು ನಾರಾಯಣದೇವರಕೆರೆ ಗ್ರಾಮವು ಮುಳುಗಡೆಯಾದ ನಂತರ ಮರಿಯಮ್ಮನಹಳ್ಳಿಗೆ ಬಂದು ವಾಸವಾಗಿದ್ದಾರೆ. ಇವರಿಗೆ 6 ಜನ ಗಂಡು, 4 ಜನ ಹೆಣ್ಣುಮಕ್ಕಳು , 30 ಜನ ಮೊಮ್ಮಕ್ಕಳು, 25 ಜನ ಮರಿಮಕ್ಕಳು , 3 ಜನ ಕಿರಿಮೊಮ್ಮಕ್ಕಳು ಹೊಂದಿದ್ದು ತಲೆಮಾರು ಕಂಡಿರುವುದು ಕುಟುಂಬ ಸದಸ್ಯರ ಸಂಭ್ರಮಕ್ಕೆ ಕಾರಣವಾಗಿದೆ.

Leave a Comment

Your email address will not be published. Required fields are marked *

Translate »
Scroll to Top