ಕಾಂಗ್ರೆಸ್ ಸಂಸದ ಡಿಕೆ ಸುರೇಶ್ ವಿರುದ್ಧ- ಮಸ್ಕಿಯಲ್ಲಿ ಬಿಜೆಪಿ ಪ್ರತಿಭಟನೆ

ಮಸ್ಕಿ,ಜ,4 : ರಾಮನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ. ಸುರೇಶ್ ಅವರು, ಸಚಿವ ಸಿ.ಎನ್. ಅಶ್ವತ್ಥ ನಾರಾಯಣ ಅವರ ಭಾಷಣಕ್ಕೆ ಅಡ್ಡಿಪಡಿಸಿ ಗೂಂಡಾ ವರ್ತನೆ ತೋರಿದ್ದಾರೆ ಎಂದು ಆರೋಪಿಸಿ, ಭಾರತೀಯ ಜನತಾ ಪಾರ್ಟಿ ಮಸ್ಕಿ ಮಂಡಲ ವತಿಯಿಂದ ಮಂಗಳವಾರ ಪ್ರತಿಭಟನೆ ನಡೆಯಿತು. ಅಂಬೇಡ್ಕರ್ ಪ್ರತಿಮೆ ಮುಂದೆ ಜಮಾಯಿಸಿದ ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು, ಸಂಸದ ಸುರೇಶ್ ಹಾಗೂ ಅವರ ಸಹೋದರ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಘೋಷಣೆ ಕೂಗಿದರು ಆಕ್ರೋಶ ವ್ಯಕ್ತಪಡಿಸಿದರು. ಶರಣಬಸವ ಸೊಪ್ಪಿಮಠ ಮಾತನಾಡಿ ‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಮ್ಮುಖದಲ್ಲೇ ಸುರೇಶ್ ಅವರು ಸಚಿವ ಅಶ್ವತ್ಥ ನಾರಾಯಣ ಅವರ ಭಾಷಣಕ್ಕೆ ಅಡ್ಡಿಪಡಿಸಿರುವುದು, ಕಾಂಗ್ರೆಸ್‌ನ ಗೂಂಡಾ ಸಂಸ್ಕೃತಿಯನ್ನು ಎತ್ತಿ ತೋರಿಸುತ್ತದೆ’ ಎಂದು ಟೀಕಿಸಿದರು. ಸಂವಿಧಾನ ಶಿಲ್ಫಿ ಡಾ.ಬಿ.ಆರ್. ಅಂಬೇಡ್ಕರ್ ಮತ್ತು ನಾಡಪ್ರಭು ಕೆಂಪೇಗೌಡ ಪ್ರತಿಮೆ ಅನಾವರಣದ ಕಾರ್ಯಕ್ರಮದಲ್ಲಿ ಸುರೇಶ್ ಈ ರೀತಿ ನಡೆದುಕೊಂಡಿರುವುದು ಮಹಾನ್ ವ್ಯಕ್ತಿಗಳಿಗೆ ಮಾಡಿದ ಅವಮಾನವಾಗಿದೆ. ಕಾರ್ಯಕ್ರಮವನ್ನು ಹಾಳುಗೆಡಿಸುವ ಉದ್ದೇಶದಿಂದಲೇ ಇಂತಹ ವರ್ತನೆಯನ್ನು ತೋರಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.


ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರುವ ಕನಸು ಕಾಣುತ್ತಿರುವ ಕಾಂಗ್ರೆಸ್, ರಾಜ್ಯದಲ್ಲಿ ಗಲಭೆಗಳನ್ನು ಸೃಷ್ಟಿಸಲು ಯತ್ನಿಸುತ್ತಿದೆ. ಅದಕ್ಕಾಗಿ, ಪಕ್ಷದ ನಾಯಕರು ಗೂಂಡಾ ಪ್ರವೃತ್ತಿ ತೋರುತ್ತಿದ್ದಾರೆ. ಇಂತಹ ವರ್ತನೆಗಳನ್ನು ಬಿಜೆಪಿ ಸಹಿಸುವುದಿಲ್ಲ. ಬದಲಿಗೆ ತಕ್ಕ ಪಾಠ ಕಲಿಸಲಿದೆ’ ಎಂದು ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಮಂಡಲ ಪ್ರಧಾನಕಾರ್ಯದರ್ಶಿಗಳಾದ ಶರಣಬಸವ ಸೊಪ್ಪಿಮಠ, ಬಿಜೆಪಿಯ ಯುವ ಮುಖಂಡರು ಪುರಸಭೆ ಸದಸ್ಯರಾದ ಚೇತನ್ ಪಾಟೀಲ್ ಮಸ್ಕಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ನಾಗರಾಜ್ ಯಂಬಲದ ಕಾರ್ಯದರ್ಶಿ ರಮೇಶ್ ಮೌನೇಶ ನಾಯಕ ಎಸ್ಸಿ ಮೋರ್ಚಾ ಅಧ್ಯಕ್ಷರು ಪುರಸಭೆ ಸದಸ್ಯರಾದ ಮೌನೇಶ ಮುರಾರಿ, ರಾಜ್ಯ ಎಸ್ಟಿ ಮೋರ್ಚಾ ಕಾರ್ಯಕಾರಣಿ ಸದಸ್ಯರಾದ ಜಿ ವೆಂಕಟೇಶ್ ನಾಯಕ್ ಮಸ್ಕಿ ಬಿಜೆಪಿ ಪುರಸಭೆ ಸದಸ್ಯರಾದ ಮಲ್ಲಯ್ಯ ಅಂಬಾಡಿ ಭರತ್ ಕುಮಾರ್ ಮಂಜುನಾಥ್ ನಂದ್ಯಾಳ ಮಸೂದ್ ಪಾಷಾ , ಮಹಿಳಾ ಮೋರ್ಚಾ ಅಧ್ಯಕ್ಷರಾದ ಶ್ರೀಮತಿ ಪ್ರಮೀಳಾ ದಾಸರು ನಾಗರತ್ನ ಹಾಗೂ ಶಾಂತಮ್ಮದುರುಗಮ್ಮ , ಗೌರಮ್ಮ ಧನಶೆಟ್ಟಿ ಪಕ್ಷದ ಮುಖಂಡರಾದ ಯಮನರಪ್ಪ ಬೋವಿ ಬಸವರಾಜ ಮುಕ್ಕಣ್ಣ ಅಂಬರೀಷ್ ಬ್ಯಾಳಿ ಮೈಬು ಕುಷ್ಟಗಿ ಆರ್ ಕೆ ನಾಯಕ್ ಹನುಮಂತ ಉಪ್ಪಾರ ಅಮರಯ್ಯ ಸೊಪ್ಪಿಮಠ ಸಂಗನಗೌಡ ಅಮರಯ್ಯವೆಂಕಟಾಪುರ ಕಾಶೀ ಕಾಶೀ ಮುರಾರಿ ಸಂತೋಷ್ ಬಳಿಗಾರ್ ಡಾಕ್ಟರ್ ಪರುಶುರಾಮ್ ಮೋಚಿ ಮೌನೇಶ್ ಬುಳ್ಳಾ ಪಕ್ಷದ ಕಾರ್ಯಕರ್ತರು ಯುವಕರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

Leave a Comment

Your email address will not be published. Required fields are marked *

Translate »
Scroll to Top