ಸೇತುವಗಳನ್ನು ವೀಕ್ಷಿಸಿದ ವಸತಿ ಸಚಿವ ಸೋಮಣ್ಣ

ದೇವನಹಳ್ಳಿ,ಜ,4 : ಕೆಂಗೇರಿಯಿಂದ ದೇವನಹಳ್ಳಿವರೆಗೆ ಸಬರ್‌ಬನ್ ರೈಲ್ವೆ ಕಾಮಗಾರಿಗೆ ಡಿಪಿಆರ್ ಆಗಿದ್ದು ೮-೧೦ ತಿಂಗಳಲ್ಲಿ ಕೆಲಸ ಪ್ರಾರಂಭವಾಗಲಿದ್ದು ಅತಿ ಶೀಘ್ರದಲ್ಲೇ ರೈಲ್ವೆ ಅಧಿಕಾರಿಗಳು ಎಲ್ಲಾ ಸೇತುವುಗಳನ್ನು ಸರಿಪಡಿಸುವ ಕೆಲಸ ಮಾಡಲಿದ್ದಾರೆ ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದರು. ದೇವನಹಳ್ಳಿ ಪಟ್ಟಣದ ಅಕ್ಕುಪೇಟೆ ಬಳಿಯಿರುವ ರೈಲ್ವೆ ಕೆಳಸೇತುವೆ ಕಾಮಗಾರಿಯಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು ವೀಕ್ಷಿಸಿ ಮಾತನಾಡಿ ಸಮಸ್ಯೆ ಕೇವಲ ದೇವನಹಳ್ಳಿ,
ದೊಡ್ಡಬಳ್ಳಾಪುರ, ಶಿಡ್ಲಘಟ್ಟ, ಶ್ರೀನಿವಾಸಪುರ, ಕೋಲಾರದಲ್ಲಿ ಅಲ್ಲಾ ಇನ್ನುಹಲವು ತಾಲ್ಲೂಕುಗಳಿಗೆ ಭೇಟಿ ನೀಡಿ ರೈಲ್ವೇ ಕೆಳಸೇತುವೆಗಳನ್ನು ವೀಕ್ಷ್ಷಣೆ ಮಾಡಿ
ಬಂದಿದ್ದೇನೆ. ತುರ್ತಾಗಿ ಕಾಮಗಾರಿ ಪ್ರಾರಂಭಿಸಿ ಸಮಸ್ಯೆ ಬಗೆಹರಿಸುವಂತೆ ರೈಲ್ವೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಅಧಿಕಾರಿಗಳು ದೂರದೃಷ್ಟಿ ಇಲ್ಲದೆ ನಾಲ್ಕುಗೋಡೆ ಮಧ್ಯೆ ಕೂತು ಪ್ಲಾನ್‌ತಯಾರಿಸಿ ಈ ರೀತಿಯ ಅವೈಜ್ಞಾನಿಕ ಸೇತುವೆಗಳು ನಿರ್ಮಾಣವಾಗಿವೆ. ಈಗ ನಾವು ಅದನ್ನೇ ಚರ್ಚಿಸುತ್ತಾ ಹೋದರೆ ಸಮಸ್ಯೆ ಬಗೆಹರಿಯುವುದಿಲ್ಲ. ಅಧಿಕಾರಿಗಳ ತಂಡ ಎಲ್ಲೆಡೆ ಭೇಟಿ ನೀಡಿ ಕೂಲಂಕುಷವಾಗಿ ಪರಿಶೀಲಿಸಿ ವರದಿ ನೀಡಬೇಕು ಹಾಗು ಈ ಜವಬ್ದಾರಿಯನ್ನು ಜಿಲ್ಲಾಧಿಕಾರಿಗಳಿಗೆ ವಹಿಸುತ್ತೇನೆ. ಗ್ರಾಮಾಂತರ ಜಿಲ್ಲೆಯಲ್ಲಿರುವ ರೈಲ್ವೆ ಕೆಳಸೇತುವೆಗಳ ಮಾಹಿತಿಯನ್ನು ಪಡೆದು ಕ್ರಮವಹಿಸಲಾಗುವುದು. ದೇವನಹಳ್ಳಿ ತಾಲ್ಲೂಕಿನಲ್ಲಿರುವ ಸೇತುವೆಗಳನ್ನು ಆಧ್ಯತೆ ವಲಯದ ಮೇರೆಗೆ ಕೆಲಸ ಮಾಡಲಾಗುತ್ತಿದೆ. ಸಬರ್‌ಬನ್ ರೈಲ್ವೆ ಕಾಮಗಾರಿ ಕೆಲಸ ಪ್ರಾರಂಭವಾದ ನಂತರ ಎಲ್ಲವು ಸರಿಹೋಗಲಿದೆ. ಹಾಗಂತ ಅಲ್ಲಿಯವರೆಗೆ ಸುಮ್ಮನೆ ಕೂರುವುದಿಲ್ಲ ತುರ್ತಾಗಿ ಕಾಮಗಾರಿ ಪ್ರಾರಂಭಿಸಲಾಗುವುದು. ಐವಿಸಿ ರಸ್ತೆಯಲ್ಲಿ ನಿರ್ಮಿಸಿರುವ ಕೆಳಸೇತುವೆಯಿಂದ ೫೦ಕ್ಕೂ ಹೆಚ್ಚು ಗ್ರಾಮಗಳ ಸಾರ್ವಜನಿಕರಿಗ ತೊಂದರೆಯಾಗಿರುವುದನ್ನು ಗಮನಿಸಿದ್ದೇನೆ. ಎಲ್ಲೇಡೆ ಇದೆ ವ್ಯವಸ್ಥೆಯಿದ್ದು ಇದಕ್ಕೆ ಶಾಶ್ವತ ಕಾಯಕಲ್ಪ ನೀಡುತ್ತೇವೆ. ಸರಕಾರ ರೈಲ್ವೆ ಇಲಾಖೆ ಅಧಿಕಾರಿಗಳು ಜವಬ್ದಾರಿ ತೆಗೆದುಕೊಂಡಿದ್ದಾರೆ. ಸುಮಾರು ವರ್ಷಗಳಿಂದ ಈ ಭಾಗದ ಜನರ ಬವಣೆ ಬಗೆಹರಿಯಲಿದೆ.


ಕೆಳ ಸೇತುವ ನಿರ್ಮಾಣ ಮಾಡಬೇಕಾದರೆ ತಾಂತ್ರಿಕವಾಗಿ ಕೆಲಸ ಮಾಡಿದರೆ ಮಾತ್ರ ಅದು ಫಲಿಸುತ್ತದೆ ಅದನ್ನು ಬಿಟ್ಟು ಕೇವಲ ಮಳೆಬಂದಾಗ ನೀರು ಹೋಗಲಿಕ್ಕೆ ನಿರ್ಮಾಣ ಮಾಡಿದರೆ ಅದು ಪ್ರಯೋಜನವಾಗುವುದಿಲ್ಲ ರೈಲ್ವೆ ಅಧಿಕಾರಿಗಳು ಅಂಡರ್ ಪಾಸ್‌ನಲ್ಲಿ ಬಿದ್ದ ನೀರು ಪಕ್ಕದಲ್ಲೇ ಶೇಖರಣೆಯಾಗುವ ರೀತಿ ಮಾಡಿರುವುದರಿಂದ ಇಷ್ಟೆಲ್ಲ ಸಮಸ್ಯೆಯಾಗಿದೆ. ನೀರು ಹರಿಯಲು ಲೆವೆಲಿಂಗ್ ಇಲ್ಲದೆ ಹಾಗು ಅಧಿಕಾರಿಗಳ ಇಚ್ಚಾಶಕ್ತಿಯ ಕೊರತೆಯಿಂದ ಅನಾನುಕೂಲವಾಗಿದೆ ಇದನ್ನು ಸರಿಪಡಿಸಲು ಕ್ರಮವಹಿಸಲಾಗುವುದು ಅಧಿವೇಶನದಲ್ಲಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಹಾಗು ವೆಂಕಟರಮಣಪ್ಪ ಒಬ್ಬರು ರೈಲ್ವೆ ಕೆಳಸೇತುವೆಗಳ ಬಗ್ಗೆ ಪ್ರಶ್ನಿಸಿದ್ದರು ಇವರಿಬ್ಬರಿಂದ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಲ್ಲಿರುವ ಕೆಳಸೇತುವೆಗಳ ಮಾಹಿತಿ ಪಡೆದು ಅತಿ ಶೀಘ್ರದಲ್ಲೆ ಕಾಮಗಾರಿ ಪ್ರಾರಂಭಿಸುತ್ತೇವೆ. ಪ್ರತಿ ಪಂಚಾಯತಿಗೂ ೩೦-೫೦ ನಿವೇಶನಗಳನ್ನು ನೀಡಲು ಜ.೨೫ರವರೆಗೆ ಗಡುವು ನೀಡಲಾಗಿದೆ. ರಾಜ್ಯದ ಗ್ರಾಮಾಂತಕ್ಕೆ ೪ ಲಕ್ಷ ಮನೆಗಳು, ಅರ್ಬನ್‌ನಲ್ಲಿ ೧ ಲಕ್ಷ ಮನೆಗಳನ್ನು ನೀಡಲಾಗುವುದು. ಎಲ್ಲಾ ಮನೆ ನಿರ್ಮಾಣಕ್ಕೆ ೪ ಕಂತುಗಳ ಬದಲು ೩ ಕಂತುಗಳಾಗಿ ಬದಲಾಯಿಸಲಾಗಿದೆ. ಅಡಮಾನವನ್ನು ವಜಾಗೊಳಿಸಲಾಗಿದೆ. ತಳಪಾಯ ಹಾಕಿದ ನಂತರ ಮೊದಲ ಕಂತು ಹಣ ಬಿಡುಗಡೆಯನ್ನು ಸಹ ಕೈಬಿಡಲಾಗಿದೆ. ಕಾರ್ಯಾದೇಶ ಪತ್ರ ನೀಡಿದ ನಂತರ
ಅವರ ಖಾತೆಗೆ ೪೦ ಸಾವಿರ ಜಮಾ ಆಗಲಿದೆ. ಉಳಿಕೆ ಹಣವನ್ನು ೨ಕಂತುಗಳಲ್ಲಿ ನೀಡಲಾಗುವುದು. ಈ ಅವಕಾಶವನ್ನು ನಿರಾಶ್ರಿತರು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಶಾಸಕ ನಿಸರ್ಗ ನಾರಾಯಣಸ್ವಾಮಿ ಮಾತನಾಡಿ, ಬೆಳಗಾವಿಯಲ್ಲಿ ನಡೆದ ಅದಿವೇಶನದಲ್ಲಿ ದೇವನಹಳ್ಳಿ ತಾಲ್ಲೂಕಿನಲ್ಲಿ ನಿರ್ಮಾಣವಾಗಿರುವ ಅವಿಜ್ಞಾನಿಕ ರೈಲ್ವೆ ಕೆಳಸೇತುವೆಗಳ ಬಗ್ಗೆ ಪ್ರಸ್ತಾಪ ಮಾಡಿದ್ದರಿಂದ ಸಚಿವರು ದೇವನಹಳ್ಳಿ ತಾಲ್ಲೂಕಿನಎಲ್ಲಾ ಕೆಳಸೇತುವೆಗಳನ್ನು ವೀಕ್ಷಿಸಿದ್ದಾರೆ. ರೈಲ್ವೆ ಅಧಿಕಾರಿಗಳಿಗೆ ೧೫ ದಿನಗಳ ಗಡುವುನೀಡಿ ಕಾಮಗಾರಿ ಪೂರ್ಣಗೊಳಿಸುವಂತೆ ತಿಳಿಸಿದ್ದಾರೆ. ಕಾಮಗಾರಿ ಮುಕ್ತಾಯವಾದರೆ ಅನೇಕ ಗ್ರಾಮಗಳ ಸಾರ್ವಜನಿಕರ ಸಂಚಾರಕ್ಕೆ ಅನುಕೂಲವಾಗಲಿದೆ. ಸಚಿವರಿಗೆ ಇಡೀ ದೇವನಹಳ್ಳಿಯ ಜನತೆಯ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು ಇದೆ ವೇಳೆ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಮುನೇಗೌಡ, ಪ್ರಧಾನ ಕಾರ್ಯದರ್ಶಿ ಜಿ.ಎ.ರವೀಂದ್ರ, ಪುರಸಭೆ ಸ್ಥಾಯಿಸಮಿತಿ ಮಾಜಿ ಅಧ್ಯಕ್ಷ ಎಸ್.ನಾಗೇಶ್, ಸದಸ್ಯ ರುದ್ರೇಶ್, ವೀರಶೈವ ಸಮಾಜ ಅಧ್ಯಕ್ಷ ರಮೇಶ್, ಜೆಡಿಎಸ್ಟೌ ನ್ ಅಧ್ಯಕ್ಷ ಮುನಿನಂಜಪ್ಪ, ಪುರಸಭೆ ಮುಖ್ಯಾಧಿಕಾರಿ ಎ.ಎಚ್.ನಾಗರಾಜ್, ಪುರಸಭೆ ಸದಸ್ಯರು ಅಧಿಕಾರಿ ವರ್ಗದವರು ಇದ್ದರು.

Leave a Comment

Your email address will not be published. Required fields are marked *

Translate »
Scroll to Top