ಅಪ್ಪು ಇಲ್ಲದೇ ಮೊದಲನೆ ಬರ್ತಡೆ

ರಾಯಚೂರು,ಮಾ,17 : ಪುನೀತ್ ರಾಜಕುಮಾರ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಶಿರಡಿ ಸಾಯಿ ಬಾಬಾ ಮಂದಿರದಲ್ಲಿ ಅಪ್ಪು ಯೂತ್ ಬ್ರಿಗೇಡ್ ವತಿಯಿಂದ ರಕ್ತದಾನ ಶಿಬಿರ ಮತ್ತಿ ನೇತ್ತದಾನ ನೋಂದಣಿ ಕಾರ್ಯಕ್ರಮ ಜರುಗಿತ್ತು. ಗಂಜ್ ವೃತ್ತದಲ್ಲಿರುವ ಸೂಗೂರೇಶ್ವರ ಖಾನಾವಳಿ ವತಿಯಿಂದ ಅಪ್ಪು ಹುಟ್ಟು ಹಬ್ಬದ ಅಂಗವಾಗಿ ಉಚಿತವಾಗಿ ಅನ್ನದಾಸೋಹ ನಡೆಯಿತ್ತು. ಅಲ್ಲದೇ ರಾಜಕುಮಾರ ಅಭಿಮಾನಿಗಳ ಸಂಘದವತಿಯಿಂದ ತಿಮ್ಮಾಪುರ ಪೇಟೆ ಬಡಾವಣೆಯಿಂದ ನಗರದ ಪ್ರಮುಖ ವೃತ್ತಗಳಲ್ಲಿ ಆಟೋಗಳ ಮೇಲೆ ಪುನೀತ್ ರಾಜಕುಮಾರ ಪೋಟೋ ಇಟ್ಟುಕೊಂಡು ರಾಜಕುಮಾರ ಚಲನಚಿತ್ರದ ಹಾಡುಗಳನ್ನು ಹಾಕಿಕೊಂಡು ಮೆರವಣಿಗೆ ಮಾಡಲಾಯಿತ್ತು. ಇನ್ನು ತಾಲುಕಿನ ಹೆಗ್ಗಸನಹಳ್ಳಿ ಗ್ರಾಮದಲ್ಲಿ ಹಾಳಾಗಿ ಹೋಗಿದ್ದ ಬಸ ನಿಲ್ದಾಣಕ್ಕೆ ಪೇಂಟಿಂಗ್ ಮಾಡುವ ಮೂಲಕ ಬದ ನಿಲ್ದಾಣಕ್ಕೆ ಅಪ್ಪು ಬಸನಿಲ್ದಾಣ ಎಂದು ಹೆಸರಿಡಲಾಗಿದೆ.ಅಪ್ಪು ಇಲ್ಲದೇ ಮೊದಲನೆ ಬರ್ತಡೆ ಯನ್ನು ಅಪ್ಪು ಅಭಿಮಾನಿಗಳು ಅದ್ದೂರಿಯಾಗಿ ಆಚರಣೆ ಮಾಡಿದ್ದಾರೆ.

Leave a Comment

Your email address will not be published. Required fields are marked *

Translate »
Scroll to Top