ಬೆಂಗಳೂರು :ನಗರದ ಎಚ್ಎಸ್ಆರ್ ಬಡಾವಣೆಯ ವೈಟ್ ಹೌಸ್ ಕನ್ವೆನ್ಷನ್ ಕೇಂದ್ರದಲ್ಲಿ ಫೆಬ್ರವರಿ 2 ರಿಂದ 4 ರ ವರೆಗೆ ನಗರದ ಅತಿ ದೊಡ್ಡ ‘ದಿ ಬೆಂಗಳೂರು ಜುವೆಲ್ಲರಿ ಶೋ’ ಆಭರಣ ಪ್ರದರ್ಶನ ಮತ್ತು ಮಾರಾಟ ಮೇಳ ಆಯೋಜಿಸಲಾಗಿದೆ.
ಮುಂಬರುವ ಮದುವೆ ಹಂಗಾಮಿಗಾಗಿ ಈ ಆಭರಣ ಮೇಳ ಆಯೋಜಿಸುತ್ತಿದ್ದು, ಮಹಿಳೆಯರಷ್ಟೇ ಅಲ್ಲದೇ ಇದು ಮದುಮಗನ ಆಕರ್ಷಣೆಯ ಕೇಂದ್ರವಾಗಲಿದೆ. ಚಿತ್ರನಟಿ ಶರಣ್ಯ ಶೆಟ್ಟಿ ಹಾಗೂ ಕನ್ನಡ ಮತ್ತೋರ್ವ ನಟಿ, ಮಿಸ್ ಸೌತ್ ಇಂಡಿಯಾ ಸುಷ್ಮಾ ನಾಣಯ್ಯ ಅವರು ಮೇಳ ಉದ್ಘಾಟಿಸಲಿದ್ದಾರೆ.
ಬೆಂಗಳೂರು ಜುವೆಲ್ಲರಿ ಶೋ ಸಂಸ್ಥಾಪಕ [ಜೆಬಿಜೆ ಎಂಟರ್ ಪ್ರೈಸಸ್] ಸಂಗೀತ ವಲೇಚ ಮಾತನಾಡಿ, “2019 ರಿಂದ ಬೆಂಗಳೂರು ಜುವೆಲ್ಲರಿ ಶೋ ನಡೆಸುತ್ತಿದ್ದು, ಪ್ರತಿಯೊಂದು ನವನವೀನ ವಿನ್ಯಾಸಗಳು, ಮನಮೋಹಕ ಆಭರಣಗಳ ನಿಧಿ ಇದಾಗಿದೆ. ಎಲ್ಲಾ ರೀತಿಯ ಆಭರಣಗಳ ಮಾರಾಟಕ್ಕೆ ವೇದಿಕೆ ಸಜ್ಜಾಗಿದೆ” ಎಂದರು.
“ಗ್ರಾಹಕರ ನಂಬಿಕೆಗೆ ಅನುಗುಣವಾಗಿ ಆಭರಣಗಳನ್ನು ಮಾರಾಟ ಮಾಡಲು ಸಿದ್ಧತೆಗಳನ್ನು ಕೈಗೊಂಡಿದ್ದು, ಮನೆಯ ಸಮೀಪದಲ್ಲಿ ಎಲ್ಲಾ ರೀತಿಯ ಆಭರಣಗಳು ದೊರೆಯಲಿವೆ. ಆರಂಭದಿಂದಲೂ ಪ್ರದರ್ಶನಕ್ಕೆ ಉತ್ತಮ ಸ್ಪಂದನೆ ವ್ಯಕವಾಗಿದ್ದು, ಈ ಬಾರಿ ಆಭರಣ ಪ್ರಿಯರ ಅಮಿತೋತ್ಸಾಹ ಮೇರೆ ಮೀರಲಿದೆ” ಎಂದು ಹೇಳಿದರು.
ಈ ವಿಶೇಷ ಆವೃತ್ತಿಯ ಸಂದರ್ಭದಲ್ಲಿ ನಾವು ನಿಮಗೆ ಪ್ರಸಿದ್ಧ ಮತ್ತು ಹೊಸ ಪ್ರದರ್ಶಕರನ್ನು ಕೂಡ ಪರಿಚಯಿಸುತ್ತಿದ್ದೇವೆ. ಅವರು ತಮ್ಮ ವಿಶೇಷ ಮತ್ತು ವೈವಿಧ್ಯಮಯ ಚಿನ್ನ, ವಜ್ರ, ಮದುವೆ ಆಭರಣ, ಪುರಾತನ, ವಿನ್ಯಾಸಕ, ಬೆಳ್ಳಿ, ರತ್ನದ ಕಲ್ಲುಗಳು ಮತ್ತು ಮಣಿಗಳ ಆಭರಣಗಳನ್ನು ತರಲು ಕಾಯುತ್ತಿದ್ದಾರೆ. ಪ್ರಮುಖವಾಗಿ 16 ಆಭರಣ ವರ್ತಕರು ಮೇಳದಲ್ಲಿ ಭಾಗವಹಿಸುತ್ತಿದ್ದಾರೆ. ಪಿಎಂಜೆ ಜ್ಯುವೆಲ್ಸ್, ಶ್ರೀ ಗಣೇಶ್ ಡೈಮಂಡ್ಸ್ ಅಂಡ್ ಜ್ಯುವೆಲ್ಲರಿ – ಎಚ್.ಎಸ್.ಆರ್ ಲೇಔಟ್, ನೀಲಕಂಠ ಜ್ಯುವೆಲ್ಲರ್ಸ್, ಗಜರಾಜ್, ವರಾ ಶ್ರೀ ಜ್ಯುವೆಲ್ಸ್, ಅನನ್ಯಾ ಜ್ಯುವೆಲ್ಸ್, ಸಿಂಹ ಜ್ಯುವೆಲ್ಲರ್ಸ್, ಎಂಪಿ ಜ್ಯುವೆಲ್ಲರ್ಸ್, ಸೆಂಕೋ ಗೋಲ್ಡ್ & ಡೈಮಂಡ್ಸ್, ಸಪ್ತೋಷಿ ಜ್ಯುವೆಲ್ಲರ್ಸ್, ಗ್ಲೋ ಬೈ ಕೀರ್ತಿಲಾಲ್ಸ್, ಇಕಾಕ್ಷ್ ಲ್ಯಾಬ್ ಗ್ರೋನ್, ಡಬ್ಲ್ಯೂ ಡೈನಾಂಡ್ಸ್ ಲ್ಯಾಬ್ ಬಿಕಾಸ್ ಇದು ಸಿಲ್ವರ್, ಸ್ಟೈಲ್ ಆರಾ, ನಿತ್ಯಸ್ , ಸ್ರಸ್ತ ಸಂಗ್ರಹಣೆಗಳು. ಪ್ರಯೋಗಾಲಯದಹಲ್ಲಿ ಉತ್ಪಾದಿಸಿದ ವಜ್ರಗಳನ್ನು “ಇಕಾಕ್ಷ್ ಡೈಮಂಡ್ಸ್ ಮತ್ತು ವಂಡರ್ ಡೈಮಂಡ್ಸ್” ಪರಿಚಯಿಸಲಿದೆ. ಖರೀದಿಸಿದೆ ಮತ್ತು ಎಲ್ಲಾ ಸಂದರ್ಶಕರಿಗೆ ಸಾಕಷ್ಟು ಕೊಡುಗೆಗಳು ಮತ್ತು ರಿಯಾಯಿತಿಗಳು ಸಹ ದೊರೆಯಲಿವೆ.