ಕುಷ್ಟಗಿ:- ಮಕ್ಕಳು ಶಾಲೆಯಲ್ಲಿ ಗುರುಗಳು ಹೇಳಿದ ಪಾಠವನ್ನು ಕಲಿತು ಸಮಾಜದಲ್ಲಿ ಸದೃಢರಾಗಬೇಕಾದರೆ ಪ್ರತಿಯೊಬ್ಬರು ಕೂಡ ನಿತ್ಯ ಅಭ್ಯಾಸವನ್ನು ಮಾಡಿ ತಂದೆ ತಾಯಿಗಳಿಗೆ ತಕ್ಕ ಮಕ್ಕಳಾಗಿ ಅನ್ನದಾನೇಶ್ವರ ಕಾಲೇಜಿಗೆ ಕೀರ್ತಿ ತರುವಂತ ವಿದ್ಯಾರ್ಥಿಗಳಾಗಬೇಕು ಎಂದು ನಿವೃತ್ತಿ ತಹಶೀಲ್ದಾರ ಸಿ.ಎಂ ಹಿರೇಮಠ ಹೇಳಿದರು.

ಇಲ್ಲಿನ ಶ್ರೀ ಬುತ್ತಿಬಸವೇಶ್ವರ ದೇವಸ್ಥಾನ ಸಂಬಾಗಣದಲ್ಲಿ ನೆಡೆದ ಪರಮಪೂಜ್ಯ ಶ್ರೀ ಮ.ನಿ.ಪ್ರ.ಡಾ.ಅಭಿನವ ಅನ್ನದಾನ ಮಾಹಾಸ್ವಾಮಿಗಳು ಶ್ರೀ ಅನ್ನದಾನೇಶ್ವರ ಸಂಸ್ಥಾನಮಠ ಹಾಲಕೆರೆ ಇವರ ಸಾನಿಧ್ಯದಲ್ಲಿ ಎಸ್.ಎ.ವ್ಹಿ.ವ್ಹಿ.ಪಿ.ಸಮಿತಿ ಶ್ರೀ ಅನ್ನದಾನೇಶ್ವರ ಪದವಿ ಪೂರ್ವ ಕಾಲೇಜ ಕುಷ್ಟಗಿ ಹಾಗೂ ವಿವಿಧ ಸಂಘಿಕ ಚಟುವಟಿಕೆಗಳ ಉದ್ಘಾಟನೆ ಮತ್ತು ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ, ಪತ್ರಕರ್ತರಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಹಾಲಕೇರಿ ಅನ್ನದಾನೇಶ್ವರ ಮಠ ಸಾಕಷ್ಟು ಶಿಕ್ಷಣಕ್ಕಾಗಿ ಒತ್ತು ಕೊಟ್ಟು ಕುಷ್ಟಗಿ ಶ್ರೀ ಬುತ್ತಿ ಬಸವೇಶ್ವರ ದೇವಸ್ಥಾನದ ಸನ್ನಿದಾನದಲ್ಲಿ ಕಲಾ ವಿಭಾಗ ಬಿ.ಎ.ಮತ್ತು ಬಿ.ಕಾಂ ಕಾಲೇಜು ಪ್ರಾರಂಭ ಮಾಡಿದೆ ಆದರೆ ಕೊವೀಡ್-೧೯ ಕೊರೋನಾ ವೈರಸ್ ಬಂದ ಹಿನ್ನೆಲೆ ವಿದ್ಯಾರ್ಥಿಗಳಿಗೆ ಓದಲು ಮತ್ತು ಬರೆಯಲು ಆಗದೆ ವಿದ್ಯಾ ಅಭ್ಯಾಸ ಅನ್ನುವದು ಇದ್ದಿಲ್ಲ ಆದ್ದರಿಂದ ವಿದ್ಯಾರ್ಥಿಗಳು ಸದೃಢ ಸಮಾಜವನ್ನು ಕಟ್ಟಲು ಉತ್ತಮವಾದ ಅಭ್ಯಾಸ ಮಾಡಿ ಕಾಲೇಜ ಮತ್ತು ತಂದೆ ತಾಯಿಗಳ ಕೀರ್ತಿಗೆ ಪಾತ್ರರಾಗಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಎಸ್.ಎ.ಪಿಯು ಕಾಲೇಜ ದೇವೇಂದ್ರ ಬಳೂಟಗಿ ಕಾರ್ಯಕ್ರಮದ ಅಧ್ಯಕ್ಷೆತೆ ವಹಿಸಿಕೊಂಡು ಮಾತನಾಡಿದರು, ಎಫ್.ಎನ್.ಹುಡೇದ್, ವೈ.ಸಿ.ಪಾಟೀಲ, ಎಂ.ಎಸ್.ಧಡೇಸ್ಕೂರಮಠ, ಎಸ್.ಜಿ.ಹಿರೇಮಠ, ಎಂ.ಜಿ.ಸೋಮನಕಟ್ಟಿ ಉಪಸ್ಥಿತರಿದ್ದರು.