ನಾಡು ನುಡಿ ರಕ್ಷಣೆಗಾಗಿ ಉತ್ತಮರನ್ನು ಆಯ್ಕೆ ಮಾಡಿ ಹಣ ಮತ್ತು ರಾಜ್ಯ ರಾಜಕೀಯ ಮಾಡುವವರನ್ನಲ್ಲ ವೀರಣ್ಣ ನಿಂಗೋಜಿ

ಕುಷ್ಟಗಿ:- ಸಾಹಿತ್ಯದ ಅಭಿರುಚಿ ಗೊತ್ತಿಲ್ಲದೆ ಇರುವ ನಾನು ಒಬ್ಬ ಸಾಹಿತಿ ನಾನು ರಾಜ್ಯ ಸಾಹಿತ್ಯ ಪರಿಷತ್ತು ಚುಣಾವಣೆಗೆ ನಿಂತಿದ್ದೇನೆ ನನಗೆ ಮತ ನೀಡಿ ಎಂದು ರಾಜ್ಯ ರಾಜಕೀಯ ಮಾಡುವ ವ್ಯಕ್ಯಿಗೆ ಮತವನ್ನು ಕೊಡಬಾರದೆಂದು ಕೊಪ್ಪಳ ಜಿಲ್ಲೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿರುವ ಮಾಜಿ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವೀರಣ್ಣ ನಿಂಗೋಜಿ ಹೇಳಿದರು.ಇಲ್ಲಿನ ಪುರಸಭೆ ಕಾರ್ಯಲಯ ಮೀಟಿಂಗ್ ಹಾಲ್ ನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಆಜೀವ ಸದಸ್ಯರ ಸಭೆಯಲ್ಲಿ ಮತಯಾಚನೆ ಮಾಡಿದರು.ಆದರೆ ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತುಗೆ ಸ್ಪರ್ಧೆ ಮಾಡಿರುವ ಡಾ.ಮಹೇಶ ಜೋಶಿ ಅವರಿಗೂ ಕೂಡ ತಮ್ಮ ಅಮೂಲ್ಯವಾದ ಮತವನ್ನು ನೀಡಬೇಕು. ಈ ಕನ್ನಡ ನಾಡು ನುಡಿ ಭಾಷೆಗಾಗಿ ಕನ್ನಡ ಉಳಿವಿಗಾಗಿ ಕನ್ನಡದ ತೇರನ್ನು ಎಳೆಯಲು ಮತ ನೀಡಬೇಕು ಎಂದರು.

ಡಾ.ಮಹೇಶ ಜೋಶಿ ಚುಣಾವಣಾ ಪ್ರಚಾರ ರಾಜ್ಯ ಸಂಘಟನೆ ಕಾರ್ಯದರ್ಶಿ ನಬಿಸಾಬ ಕುಷ್ಟಗಿ ಮಾತನಾಡಿ ನಮ್ಮ ಕನ್ನಡ ಬಾಷೆ ತಾಯಿ ಬಾಷೆ ಈ ನಮ್ಮ ಕನ್ನಡದ ನೆಲದಲ್ಲಿ ನಾಡು ನುಡಿಯನ್ನು ಕಟ್ಟಿ ಬೆಳಸಲು ಹಾಗೂ ಉಳಿಸಲು ಸಾಕಷ್ಟು ಜನ ತಮ್ಮ ಶ್ರಮವನ್ನು ವ್ಯರ್ಥ ಮಾಡದೆ ಕನ್ನಡದ ಬಾಷೆಗಾಗಿ ಕನ್ನಡ ಸಾಹಿತ್ಯಕ್ಕಾಗಿ ಹಗಲಿರುಳು ಸಾಕಷ್ಟು ಸಾಹಿತಿಗಳು ಬರಹಗಾರರು ಕಲೆಗಾರರು ಸೇವೆ ಸಲ್ಲಿಸಿದ್ದಾರೆ. ಅಂತಹ ಸಾಲಿನಲ್ಲಿ ಹಿರಿಯ ಮಾರ್ಗದಲ್ಲಿ ನಡೆದು ಈ ನಮ್ಮ ಕನ್ನಡದ ನಾಡು ನುಡಿಗಾಗಿ ಸೇವೆ ಸಲ್ಲಿಸುತ್ತಿರುವ ಡಾ.ಮಹೇಶ ಜೋಶಿಯವರಿಗೆ ಮತವನ್ನು ಕೊಟ್ಟು ಕನ್ನಡಮ್ಮನ ಸೇವೆ ಮಾಡಲು ತಮ್ಮ ಮತವನ್ನು ವೀರಣ್ಣ ನಿಂಗೋಜಿ, ಡಾ.ಮಹೇಶ ಜೋಶಿಗೆ ಮತ ನೀಡಬೇಕು ಎಂದು ಆಜೀವ ಸದಸ್ಯರಲ್ಲಿ ಮನವಿ ಮಾಡಿಕೊಳ್ಳುತ್ತೇವೆ ಎಂದು ಹೇಳಿದರು.

ಇದೇ ವೇಳೆ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಶರಣಪ್ಪ ವಡಗೇರಿ ಮಾತನಾಡಿ ಸಾಹಿತ್ಯ ಅಂದರೆ ಸುಮ್ಮನೆ ಅಲ್ಲ ಈ ಕನ್ನಡ ಭಾಷೆಗೆ ಅನೇಕ ಜ್ಞಾನ ಪೀಠ ಪ್ರಶಸ್ತಿ ದೊರಕಿವೆ ಕನ್ನಡದ ಕಂಕಣ ಕಟ್ಟಲು ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತನ ಚುಣಾವಣೆ ಅಭ್ಯಾರ್ಥಿಯಾಗಿ ನಮ್ಮ ಡಾ.ಮಹೇಶ ಜೋಶಿ ನಿಂತಿದ್ದಾರೆ ಮತ್ತು ಕೊಪ್ಪಳ ಸಾಹಿತ್ಯ ಪರಿಷತ್ತು ಚುಣಾವಣೆಗೆ ನಮ್ಮ ವೀರಣ್ಣ ನಿಂಗೋಜಿ ನಿಂತಿದ್ದಾರೆ ಆದ್ದರಿಂದ ಕನ್ನಡಕ್ಕಾಗಿ ಕಲ್ಪ ವೃಕ್ಷವಾಗಿರುವ ಅಭ್ಯಾರ್ಥಿಗಳಿಗೆ ಮತವನ್ನು ಕೊಟ್ಟರೆ ಮಾತ್ರ ಕನ್ನಡ ನಾಡು ನುಡಿ ಉಳಿಯಲು ಸಾಧ್ಯ ಇಲ್ಲವಾದರೆ ಸಾದ್ಯವಿಲ್ಲ ಕನ್ನಡ ಬಾಷೆ ಯಾರಿಂದ ಉಳಿಯಲು ಸಾಧ್ಯ ಅಂಥವರಿಗೆ ನಾವು ಮತವನ್ನು ಕೊಟ್ಟು ಗೆಲ್ಲಿಸಬೇಕು ಎಂದು ಹೇಳಿದರು.ಈ ಸಂದರ್ಭದಲ್ಲಿ ಬಸವರಾಜ ನಾಯಕ, ಹರೀಶ್, ನಾಗರಾಜ ಸೇರಿದಂತೆ ಹಲವಾರರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

Translate »
Scroll to Top