ಬೆಂಗಳೂರು ರೇವ್ ಪಾರ್ಟಿ ಬೆಡಗಿಗೆ ನೋಟೀಸ್: ಸಿಸಿಬಿಗೆ ರಾಜಕಾರಣಿಗಳಿಂದ ನಿರಂತರ ಕರೆ!

ಬೆಂಗಳೂರು: ಬೆಂಗಳೂರಿನ ರೇವ್ ಪಾರ್ಟಿಯಲ್ಲಿ ಭಾಗಿಯಾಗಿದ್ದ ತೆಲುಗು ನಟಿ ಹೇಮಾಗೆ ನೋಟೀಸ್ ಜಾರಿ ಮಾಡಿದ ಬೆನ್ನಲ್ಲೆ ರಾಜಕಾರಣಿಗಳಿಂದ ಸಿಸಿಬಿಗೆ ನಿರಂತರ ಕರೆಗಳು ಬರತೊಡಗಿವೆ.

ಹೌದು… ಬೆಂಗಳೂರಿನ ಹೊರಹೊಲಯದಲ್ಲಿ ನಡೆದ ರೇವ್ ಪರ‍್ಟಿಯಲ್ಲಿ ಡ್ರಗ್ಸ್, ಸೆಕ್ಸ್ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪೋಟಕ ಬೆಳವಣಿಗೆಗಳು ನಡೆಯುತ್ತಿವೆ. ರೇವ್ ಪರ‍್ಟಿಯಲ್ಲಿ ನಟಿ ಹೇಮಾ ಡ್ರಗ್ಸ್ ಸೇವಿಸಿರುವುದು ಪರೀಕ್ಷೆ ವೇಳೆ ದೃಢವಾಗಿದೆ. ಇದರಿಂದ ಸಿಸಿಬಿ ಪೊಲೀಸರು ಹೇಮಾಗೆ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ಜಾರಿ ಮಾಡಿದ್ದಾರೆ.

ಹೇಮಾಗೆ ನೋಟೀಸ್ ಜಾರಿ ಮಾಡಿದ ಬಳಿಕ ಸಿಸಿಬಿ ಪೊಲೀಸರಿಗೆ ಆಂಧ್ರಪ್ರದೇಶ ರಾಜಕಾರಣಿಗಳು ಮೇಲಿಂದ ಮೇಲೆ ಕರೆ ಮಾಡುತ್ತಿದ್ದಾರೆ. ಜೊತೆಗೆ ಹೇಮಾ ಬಂಧನ ಮಾಡದಂತೆ ಒತ್ತಡ ಹೇರುತ್ತಿದ್ದಾರೆ. ಬೆಂಗಳೂರು ಹೊರ ವಲಯದ ಫರ‍್ಮ್‌ಹೌಸ್‌ನಲ್ಲಿ ನಡೆದ ರೇವ್ ಪರ‍್ಟಿಯಲ್ಲಿ ಭಾಗವಹಿಸಿದ್ದವರ ರಕ್ತದ ಮಾದರಿಗಳ ಫಲಿತಾಂಶ ಬಂದಿದ್ದು, ತೆಲುಗು ಚಿತ್ರರಂಗದ ನಟಿ ಸೇರಿದಂತೆ ೮೬ ಮಂದಿ ಮಾದಕ ದ್ರವ್ಯ ಸೇವಿಸಿರುವುದು ದೃಢಪಟ್ಟಿದೆ ಎಂದು ಪೊಲೀಸ್ ಮೂಲಗಳು ಗುರುವಾರ ತಿಳಿಸಿವೆ. ಮೂಲಗಳ ಪ್ರಕಾರ ರ‍್ತ್ ಡೇ ಪರ‍್ಟಿ ನೆಪದಲ್ಲಿ ಆಯೋಜಿಸಲಾಗಿದ್ದ ರೇವ್ ಪರ‍್ಟಿಯಲ್ಲಿ ಒಟ್ಟು ೧೦೩ ಮಂದಿ ಪಾಲ್ಗೊಂಡಿದ್ದರು. ಭಾಗವಹಿಸಿದವರಲ್ಲಿ ೭೩ ಪುರುಷರು ಮತ್ತು ೩೦ ಮಹಿಳೆಯರು ಸೇರಿದ್ದಾರೆ.

ಮೇ ೧೯ ರಂದು ಬೆಳ್ಳಂಬೆಳಗ್ಗೆ ಎಲೆಕ್ಟ್ರಾನಿಕ್ ಸಿಟಿ ಬಳಿಯ ಫರ‍್ಮ್‌ಹೌಸ್‌ನಲ್ಲಿ ದಾಳಿ ನಡೆಸಿದ ಪೊಲೀಸರು ೧.೫ ಕೋಟಿ ಮೌಲ್ಯದ MDMA ಮಾತ್ರೆಗಳು, ಹೈಡ್ರೋ ಗಾಂಜಾ, ಕೊಕೇನ್, ಹೈ ಎಂಡ್ ಕಾರುಗಳು, ಆಎ ಉಪಕರಣಗಳು, ಧ್ವನಿ ಮತ್ತು ಬೆಳಕು ಉಪಕರಣಗಳು ಸೇರಿದಂತೆ ೧.೫ ಕೋಟಿ ರೂ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದರು.

ಅಲ್ಲದೆ ಈ ಪರ‍್ಟಿಯಲ್ಲಿ ಆಂಧ್ರ ಪ್ರದೇಶ ಚುನಾವಣೆ, ಲೋಕಸಭಾ ಚುನಾವಣೆ, ಐಪಿಎಲ್ ಹಾಗೂ ಇತರೆ ಕ್ರೀಡೆಯ ಬಗ್ಗೆ ಬೆಟ್ಟಿಂಗ್ ನಡೆಯುತ್ತಿತ್ತು ಎಂದು ತಿಳಿದು ಬಂದಿದೆ.

ದಾಳಿಯ ನಂತರ, ಪೊಲೀಸರು ಖಾಸಗಿ ಆಸ್ಪತ್ರೆಯಲ್ಲಿ ಭಾಗವಹಿಸಿದವರ ರಕ್ತದ ಮಾದರಿಗಳನ್ನು ಸಂಗ್ರಹಿಸಿದರು, ಇದರಲ್ಲಿ ೫೯ ಪುರುಷರು ಮತ್ತು ೨೭ ಮಹಿಳೆಯರು ಮಾದಕ ದ್ರವ್ಯ ಪರೀಕ್ಷಾ ಫಲಿತಾಂಶ ಪಾಸಿಟಿವ್ ಬಂದಿದ್ದು, ಅವರು ಮಾದಕ ವಸ್ತು ಸೇವಿಸಿದ್ದಾರೆ ಎಂದು ದೃಢಪಟ್ಟಿದೆ ಎಂದು ತಿಳಿದುಬಂದಿದೆ.

 

“ಪರ‍್ಟಿಗೆ ಹಾಜರಾದ ಹೆಚ್ಚಿನ ಜನರು ಡ್ರಗ್ಸ್ ಸೇವಿಸುತ್ತಿದ್ದರು. ಪ್ರಸ್ತುತ ಪಾಸಿಟಿವ್ ಬಂದಿರುವವರಿಗೆ ಕೇಂದ್ರ ಅಪರಾಧ ವಿಭಾಗವು ನೋಟಿಸ್ ನೀಡಲಿದೆ” ಎಂದು ಪೊಲೀಸ್ ಮೂಲಗಳು ತಿಳಿಸಿವೆ. ವಾಸು ಎಂಬಾತನ ಹೆಸರಿನಲ್ಲಿ ರ‍್ತಡೇ ಪರ‍್ಟಿಯನ್ನು ಭಾನುವಾರ (ಮೇ ೧೯) ಮಧ್ಯರಾತ್ರಿ ಆಯೋಜಿಸಲಾಗಿತ್ತು. ಆದರೆ ಇದಕ್ಕೆ ಎಂಟ್ರಿ ಫೀಸ್ ಮಾತ್ರ ಎರಡು ಲಕ್ಷದವರೆಗೆ ಇತ್ತು ಎನ್ನಲಾಗುತ್ತಿದೆ. ಎಲೆಕ್ಟ್ರಾನಿಕ್ ಸಿಟಿ ಬಳಿಯ ಜಿ ಆರ್ ಫರ‍್ಮ್ ಹೌಸ್ ನಲ್ಲಿ ಪರ‍್ಟಿ ಭಾನುವಾರ ಸಂಜೆ ಐದು ಘಂಟೆಯಿಂದ ಆರಂಭವಾಗಿದ್ದು ಸೋಮವಾರ ಬೆಳಗಿನ ಜಾವದವರೆಗೂ ಮುಂದುವರಿದಿತ್ತು. ಪರ‍್ಟಿಯಲ್ಲಿ ೧೧೦ಕ್ಕೂ ಹೆಚ್ಚು ಜನರು ಭಾಗಿಯಾಗಿದ್ದರು. ಐದು ಜನ ಈ ಇವೆಂಟ್ ರ‍್ಗನೈಸ್ ಮಾಡಿದ್ದರು ಎಂದು ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

 

 

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top