ಕುಷ್ಟಗಿ. ಡಿ.24 .ಕುಷ್ಟಗಿ ಪಟ್ಟಣ ಬ್ಯಾಂಕ್ ಅಭಿವೃದ್ಧಿಗೆ ಸರ್ವ ಸದಸ್ಯರು ನಿರಂತರ ವ್ಯವಹಾರ ಮಾಡುವ ಮೂಲಕ ಬ್ಯಾಂಕ್ ನ ಅಭಿವೃದ್ಧಿ ಸಾದ್ಯ ಎಂದು ಅಧ್ಯಕ್ಷ ಬಸನಗೌಡಾ ಪೋಲಿಸ್ ಪಾಟೀಲ್ ಹೇಳಿದರು. ಅವರು ಕುಷ್ಟಗಿ ಪಟ್ಟಣ ಸಹಕಾರಿ ಬ್ಯಾಂಕಿನ ೨೪ ನೆಯ ವಾರ್ಷಿಕ ಮಹಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಮುಂಬರುವ ದಿನಗಳಲ್ಲಿ ಬ್ಯಾಂಕ್ ಸ್ವಂತ ಕಟ್ಟಡ ಹೊಂದುತ್ತದೆ ಈಗಾಗಲೇ ಈ ವರ್ಷದ ಲಾಭಾಂಶ ೬ಲಕ್ಷದ ೫೩ ಸಾವಿರ ರೂಪಾಯಿ ಆಗಿದ್ದು ಪ್ರತಿಯೊಬ್ಬರು ನಮ್ಮ ಬ್ಯಾಂಕ್ ಎಂದು ತಿಳಿದು ವ್ಯವಹರಿಸಲು ಕರೆ ನೀಡಿದರು. ಪ್ರಾಸ್ತಾವಿಕ ಮಾತನಾಡಿದ ಬ್ಯಾಂಕ್ ವ್ಯವಸ್ಥಾಪಕ ಗುರನಗೌಡ ಎಸ್ ಎಮ್.ವಾರ್ಷಿಕ ವರದಿಯನ್ನು ಹೇಳಿದರು.
ಆರಂಭದಲ್ಲಿ ಸಸಿಗೆ ನೀರೆರೆಯುವ ಮೂಲಕ ಹಿರಿಯ ನಿರ್ದೇಶಕ ವೀರೇಶಯ್ಯ ಮಠಪತಿ ಉದ್ಘಾಟನೆ ಮಾಡಿದರು.ವೇದಿಕೆಯ ಮೇಲೆ ಉಪಾಧ್ಯಕ್ಷ ಬಸವರಾಜ ಶೆಟ್ಟರ್ ,ರವಿಂದ್ರ ಬಾಕಳೆ ,ಫಕೀರಪ್ಪ ಹೊಸವಕ್ಕಲ,ಅಮರಪ್ಪ ಕಂಚಿ ,ಬಸವರಾಜ ಕುಂಬಾರ ,ಗೋಪರಪ್ಪ ಕುಡತನಿ ,ಗುರಪ್ಪ ಬಡಿಗೇರೆ ,ಬೀಮರಾವ್ ಮುತಾಲಿಕ ,ನಿರ್ಮಲಾ ಶರಣಪ್ಪ ಜೀರ ಉಪಸ್ಥಿತರಿದ್ದರು.
