ರೌಡಿಶೀಟರ್ ಗಳ ನಡತೆ ನೋಡಿಕೊಂಡು ಪರೇಡ್ ನಲ್ಲಿ ಕೇಸ್ ಕ್ಲೋಸ್

ಕುಷ್ಟಗಿ, ,24 :- ಅಪರಾಧಿಗಳ ನಡುವಳಿಕೆಯಲ್ಲಿ ಏನು ಬದಲಾವಣೆಯಾಗಿದೆ ಎನ್ನುವುದನ್ನು ನೋಡಿಕೊಂಡು ಪರಾಮರ್ಶಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಕೊಪ್ಪಳ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಟಿ. ಶ್ರೀಧರ ಹೇಳಿದರು. ಕುಷ್ಟಗಿ ಸಿ.ಪಿ.ಐ ಕಚೇರಿಯ ಆವರಣದಲ್ಲಿ ಕುಷ್ಟಗಿ, ಹನುಮಸಾಗರ ತವರಗೇರಾ ಪೋಲಿಸ್ ಠಾಣೆ ವ್ಯಾಪ್ತಿಯ ರೌಡಿಶೀಟರ್ ಗಳ ಪರೇಡ್. ನೆಡೆಸಿದ ಬಳಿಕ ಸುದ್ದಿಗಾರೊಂದಿಗೆ ಮಾತನಾಡಿದ ಅವರು ಯಾರು ರೌಡಿಶೀಟರ್ ಗಳಲ್ಲಿ ಕೇಸ್ ದಾಖಲು ಆಗಿದೆ ಅಂತವರ ನಡುವಳಿಕೆಯಲ್ಲಿ ಬದಲಾವಣೆಯಾಗಿದ್ದರೆ ಪರಾಮರ್ಶಿಸಿ ಕೇಸ್ ಕ್ಲೋಸ್ ಮಾಡಲಾಗುತ್ತಿದೆ ಎಂದರು. ಆದರೆ ಯುವಕರು ತಮ್ಮ ಜೀವನ ಮಟ್ಟದಲ್ಲಿ ಸುಧಾರಣೆ ಕಂಡರೆ ಉತ್ತಮ ಜೀವನ ಸಾಗಿಸಲು ಒಳ್ಳೆಯ ದಾರಿ ಸಿಗುತ್ತದೆ ಅಂತಹ ರೌಡಿಶೀಟರ್ ಗಳನ್ನು ಪರಿಶೀಲನೆ ಮಾಡಿ ಯಾವುದೇ ರೀತಿಯಲ್ಲಿ ರೌಡಿಡಿಶೀಟರ್ ಕೇಸ್ ನಲ್ಲಿ ದಾಖಲಿದ್ದು ಪದೇ ಪದೇ ಕೇಸ್ ನಲ್ಲಿ ಇಲ್ಲದೇ ಇರುವಂತ ವ್ಯಕ್ತಿಗಳಿಗೆ ಮನ್ನಣೆ ನೀಡಲಾಗುತ್ತದೆ, ಆದರೆ ತಮ್ಮ ಊರುಗಳಲ್ಲಿ ಪದೇ ಪದೇ ಸುಮ್ಮ ಸುಮ್ಮನೆ ಜಗಳ ತೆಗೆಯುವದು ಮತ್ತು ಯಾರ ಮೇಲೆ ದಬ್ಬಾಳಿಕೆ ಮಾಡುವದನ್ನ ಮಾಡುವುದು ಹಾಗೂ ಸರಕಾರಿ ಇಲಾಖೆಯಲ್ಲಿ ಹೋಗಿ ತೊಂದರೆ ಕೊಡುವಂತದ್ದು ಹೆಣ್ಣು ಮಕ್ಕಳ ಮೇಲೆ ದಬ್ಬಾಳಿಕೆ ಮಾಡುವವರನ್ನು ಕಾನೂನು ರೀತಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಲು ಮುಂದಾಗಬೇಕಾಗುತ್ತದೆ ಎಂದು ಹೆಚ್ಚರಿಕೆ ನೀಡಿದರು.

ಕುಷ್ಟಗಿ ಠಾಣೆ ವ್ಯಾಪ್ತಿಯಲ್ಲಿ ೨೬೭ ರೌಡಿಶೀಟರ್ ಗಳು ಆಪಾರಾಧದಲ್ಲಿ ತೊಡಗಿರುವ (ಎಂ.ಓ.ಬಿ) ಹಿನ್ನಲೆ ಅಪಾರಾಧದಲ್ಲಿರುವ ೧೧೮ ಜನರಿದ್ದಾರೆ ಅವರಲ್ಲಿ ಸುಧಾರಣೆ ಯಾಗಿದ್ದೆ ಈ ರೀತಿಯಾಗಿ ಪರೇಡ್ ನಲ್ಲಿ ಸುಧಾರಣೆ ಕಂಡುಬಂದರೆ ಅಂತಹ ವ್ಯಕ್ತಿಗಳ ನಡತೆಯನ್ನು ನೋಡಿ ಪರಿಶೀಲನೆ ಮಾಡಿ ಕೇಸ್ ಕ್ಲೋಸ್ ಮಾಡಲಾಗುವುದು. ನಮ್ಮ ಕೊಪ್ಪಳ ಜಿಲ್ಲೆಯಲ್ಲಿ ೧೪೦೦ ರೌಡಿಗಳು ಇದ್ದರು ಪರೇಡ್ ನಲ್ಲಿ ೩೫೦ ರೌಡಿ ಶೀಟರ್ ಪಟ್ಟಿಯಿಂದ ತೆಗೆದು ಹಾಕಲಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಸಿ.ಪಿ.ಐ ನಿಂಗಪ್ಪ ರುದ್ರಕೂಳ್ಳ ಪಿಎಸ್ನ ತಿಮ್ಮಣ್ಣ ನಾಯಕ, ಪೋಲಿಸ್ ಸಿಬ್ಬಂದಿಗಳು, ತವರಗೇರಾ ಪಿಎಸ್. ವೈಶಾಲಿ ಸೇರಿದಂತೆ ಹಲವಾರರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

Translate »
Scroll to Top